World Tourism Day 2021: ವಿಶ್ವ ಪ್ರವಾಸೋದ್ಯಮ ದಿನಕ್ಕೆ ವಿಶೇಷ ಅಂಚೆ ಕವರ್ ಬಿಡುಗಡೆ ಮಾಡಿದ ಸಚಿವ ಆನಂದ್ ಸಿಂಗ್

| Updated By: ಆಯೇಷಾ ಬಾನು

Updated on: Sep 27, 2021 | 1:17 PM

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ 2022ರ ಫೆಬ್ರವರಿ 23ರಿಂದ 3 ದಿನಗಳ ಕಾಲ ಕರ್ನಾಟಕ ಇಂಟರ್‌ನ್ಯಾಷನಲ್ ಟೂರಿಸಂ ಎಕ್ಸ್‌ಪೋ ಆಯೋಜನೆ ಮಾಡಿ ಸರ್ಕಾರದ ಕಡೆಯಿಂದ ವ್ಯವಸ್ಥೆ ಮಾಡ್ತಿದ್ದೇವೆ. ಅಡ್ವೆಂಚರ್‌ ಟೂರಿಸಂ, ಚಲನಚಿತ್ರ ನಿರ್ದೇಶಕ ನಿರ್ಮಾಪಕರು ಕೂಡ ಇದರಲ್ಲಿ ಸಹಭಾಗಿ ಆಗ್ತಿವೆ.

World Tourism Day 2021: ವಿಶ್ವ ಪ್ರವಾಸೋದ್ಯಮ ದಿನಕ್ಕೆ ವಿಶೇಷ ಅಂಚೆ ಕವರ್ ಬಿಡುಗಡೆ ಮಾಡಿದ ಸಚಿವ ಆನಂದ್ ಸಿಂಗ್
ಆನಂದ್ ಸಿಂಗ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪೋಸ್ಟ್ ಮಾಸ್ಟರ್ ಜನರಲ್ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವಿಶೇಷ ಅಂಚೆ ಕವರ್ ಬಿಡುಗಡೆ ಮಾಡಿದ್ದಾರೆ. ಜೊತೆಗೆ ನೂತನ ಪ್ರವಾಸೋದ್ಯಮ ನೀತಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಸಚಿವ ಆನಂದ್ ಸಿಂಗ್, ಕೋವಿಡ್ನಿಂದ ಇಡೀ ಪ್ರವಾಸೋದ್ಯಮ ಕುಂಠಿತವಾಗಿದೆ. ಮಾರ್ಚ್ 2020 ರಿಂದ 25 ಸಾವಿರ ಕೋಟಿ ನಷ್ಟ ಹಾಸ್ಪಿಟಾಲಿಟಿ ಕ್ಷೇತ್ರಕ್ಕೆ ಆಗಿದೆ. ಒಂದಿಷ್ಟು ಪ್ರೋತ್ಸಾಹ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಸ್ಟಾರ್ ಹೊಟೇಲ್ ಗಳನ್ನು ಕೈಗಾರಿಕಾ ವಲಯಕ್ಕೆ ಸೇರಿಸಲಾಗಿದೆ. ವಿದ್ಯುತ್ ದರ ಆಸ್ತಿ ತೆರಿಗೆಯನ್ನು 5 ವರ್ಷಗಳ ಕಾಲ ಕೈಗಾರಿಕಾ ದರದಲ್ಲಿ ಸ್ಟಾರ್ ಹೋಟೆಲ್‌ಗಳು ಪಾವತಿಸುವುದು. ಅಬಕಾರಿ ಪರವಾನಗಿ ಶುಲ್ಕದಲ್ಲಿ ಮನ್ನಾ ಮಾಡಲಾಗಿದೆ. ಪ್ರವಾಸಿ ಮಾರ್ಗದರ್ಶಿಗಳಿಗೆ 5000₹ ಸಹಾಯ ಧನ ನೀಡಲಾಗಿದೆ.

ಇಲ್ಲಿಯವರೆಗೆ 364 ಪ್ರವಾಸಿ ಮಾರ್ಗದರ್ಶಿಗಳಿಗೆ 18.20 ಲಕ್ಷ ಸಹಾಯ ಧನ ವಿತರಣೆ ಮಾಡಲಾಗಿದೆ. ರಾಜ್ಯದ ಜಿಡಿಪಿಗೆ ಪ್ರವಾಸೋದ್ಯಮ ಕ್ಷೇತ್ರದಿಂದ 20% ಕೊಡುಗೆ ನೀಡುವ ಸಾಧ್ಯತೆ ಇದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಆಕರ್ಷಣೆಗೆ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ಆಯೋಜನೆಗೆ ನಿರ್ಧಾರ ಮಾಡಿದ್ದೇವೆ. ಫೆಬ್ರವರಿ ತಿಂಗಳಲ್ಲಿ‌ ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್ ಪೋ ಆಯೋಜನೆ ಮಾಡಲು ಉದ್ದೇಶಿಸಿದ್ದೇವೆ ಎಂದರು.

2022ರ ಫೆಬ್ರವರಿ 23ರಿಂದ 3 ದಿನಗಳ ಕಾಲ ಎಕ್ಸ್‌ಪೋ
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ 2022ರ ಫೆಬ್ರವರಿ 23ರಿಂದ 3 ದಿನಗಳ ಕಾಲ ಕರ್ನಾಟಕ ಇಂಟರ್‌ನ್ಯಾಷನಲ್ ಟೂರಿಸಂ ಎಕ್ಸ್‌ಪೋ ಆಯೋಜನೆ ಮಾಡಿ ಸರ್ಕಾರದ ಕಡೆಯಿಂದ ವ್ಯವಸ್ಥೆ ಮಾಡ್ತಿದ್ದೇವೆ. ಅಡ್ವೆಂಚರ್‌ ಟೂರಿಸಂ, ಚಲನಚಿತ್ರ ನಿರ್ದೇಶಕ ನಿರ್ಮಾಪಕರು ಕೂಡ ಇದರಲ್ಲಿ ಸಹಭಾಗಿ ಆಗ್ತಿವೆ. ಚಿತ್ರೀಕರಣಕ್ಕೆ ಆರ್ಕಿಯಾಲಜಿ ಡಿಪಾರ್ಟ್ಮೆಂಟ್ ಅಡ್ಡಿ ಆಗುವುದರಿಂದ‌ ಸಿಂಗಲ್ ವಿಂಡೋ ವ್ಯವಸ್ಥೆ ಮಾಡುತ್ತಿದ್ದೇವೆ. ಹಂಪಿ ವಿಠ್ಠಲ ಮಂದಿರದಲ್ಲಿ ಚಿತ್ರೀಕರಣ ಮಾಡಬೇಕು ಅಂದ್ರೆ ಸಾಕಷ್ಟು ಅಡ್ಡಿ ಆಗತ್ತೆ. ದೇವರ ದಯೆಯಿಂದ ಮೂರನೇ ಅಲೆ ಬರಬಾರದು ಅಂತ ಪ್ರಾರ್ಥನೆ ಮಾಡೋಣ ಎಂದು ತಿಳಿಸಿದರು.

ಇದನ್ನೂ ಓದಿ:  World Tourism Day 2021: ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ, ಆಶಯ ಮತ್ತು ವಿಶೇಷತೆಗಳೇನು? ಇಲ್ಲಿದೆ ವಿವರ

Published On - 12:08 pm, Mon, 27 September 21