ನಮ್ಮ ಸರ್ಕಾರ ಅಮಾಯಕ ಮತ್ತು ಅಸಹಾಯಕರ ಪರವಾಗಿದೆ, ಕೊಲೆ ಪ್ರಕರಣದ ತನಿಖೆಯಿಂದ ಸಾಬೀತುಪಡಿಸುತ್ತೇವೆ; ಸಚಿವ ಆರಗ ಜ್ಞಾನೇಂದ್ರ

| Updated By: sandhya thejappa

Updated on: Apr 10, 2022 | 12:37 PM

ಸಾಮಾನ್ಯ ಸಂಗತಿಗಾಗಿ ಆ ರೀತಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇಂತಹ ಮಾನಸಿಕತೆ ಇರೋರಿಗೆ ಒಂದು ಮೆಸೇಜ್ ಹೋಗಬೇಕು. ಚಂದ್ರ ಹತ್ಯೆ ಪ್ರಕರಣದ ಆರೋಪಿಗಳನ್ನು ನಾವು ಬಿಡೋದಿಲ್ಲ.

ನಮ್ಮ ಸರ್ಕಾರ ಅಮಾಯಕ ಮತ್ತು ಅಸಹಾಯಕರ ಪರವಾಗಿದೆ, ಕೊಲೆ ಪ್ರಕರಣದ ತನಿಖೆಯಿಂದ ಸಾಬೀತುಪಡಿಸುತ್ತೇವೆ; ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಅರಗ ಜ್ಞಾನೇಂದ್ರ
Follow us on

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ (Murder) ಪ್ರಕರಣದ ತನಿಖೆಯಲ್ಲಿ ಬೇರೆ ಬೇರೆ ಅಂಶಗಳು ಕಂಡು ಬಂದಿವೆ. ಅದಕ್ಕಾಗಿ ಆ ಪ್ರಕರಣ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ್ದೇವೆ ಎಂದು ಬೆಂಗಳೂರಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿಕೆ ನೀಡಿದ್ದಾರೆ. ಪೊಲೀಸರ ವಿಚಾರಣೆ ಮಾಡುವಾಗ ಸಂದರ್ಭಕ್ಕೆ ತಕ್ಕಂತೆ ತನಿಖೆ ಮಾಡಿಸಬೇಕಾಗುತ್ತದೆ. ಅದರಂತೆ ಚಂದ್ರು ಹತ್ಯೆ ಕೇಸ್ ಸಿಐಡಿಗೆ ಕೊಡಲು ತೀರ್ಮಾನ ಮಾಡಲಾಗಿದೆ. ಪ್ರಕರಣ ತನಿಖೆಯ ಹಂತದಲ್ಲಿದೆ, ನಾನು ಏನೂ ಮಾತನಾಡಲ್ಲ. ಹತ್ಯೆಯ ಸಿಸಿಟಿವಿ ಫುಟೇಜ್ ನೋಡಿದ್ರೆ ಕರುಳು ಹಿಂಡಿ ಬರುತ್ವೆ ಎಂದು ಹೇಳಿದರು.

ಸಾಮಾನ್ಯ ಸಂಗತಿಗಾಗಿ ಆ ರೀತಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇಂತಹ ಮಾನಸಿಕತೆ ಇರೋರಿಗೆ ಒಂದು ಮೆಸೇಜ್ ಹೋಗಬೇಕು. ಚಂದ್ರ ಹತ್ಯೆ ಪ್ರಕರಣದ ಆರೋಪಿಗಳನ್ನು ನಾವು ಬಿಡೋದಿಲ್ಲ. ನಮ್ಮ ಸರ್ಕಾರ ಅಮಾಯಕ ಮತ್ತು ಅಸಹಾಯಕರ ಪರವಾಗಿದೆ. ಈ ತನಿಖೆಯಿಂದ ಅದನ್ನು ನಾವು ಸಾಬೀತುಪಡಿಸುತ್ತೇವೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಭಾಷೆ ವಿಚಾರದ ಬಗ್ಗೆ ಮಾತಾಡಲ್ಲ:
ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲು ಸೂಚಿಸಲಾಗಿದೆ. ಗೊಂದಲ ಆಯ್ತು ಎಂಬ ಕಾರಣಕ್ಕೆ ಸಿಐಡಿ ತನಿಖೆಗೆ ವಹಿಸಿಲ್ಲ. ಸರಿಯಾದ ತನಿಖೆ ನಡೆಯಲಿ ಎಂದು ಸಿಐಡಿಗೆ ವಹಿಸಿದ್ದೇವೆ. ಪೊಲೀಸ್ ಇಲಾಖೆ, ಗೃಹ ಸಚಿವರು ಅಸಮರ್ಥರಲ್ಲ. ನಮಗೆ ಸಾಮರ್ಥ್ಯ ಇದೆ, ಸೂಕ್ತ ತನಿಖೆಯನ್ನು ನಡೆಸುತ್ತೇವೆ. ಪ್ರಕರಣದ ಗೊಂದಲವನ್ನು ನಾನು ಇನ್ನಷ್ಟು ವಿವಾದ ಮಾಡಲ್ಲ. ಬಡವರ ಪಾಲಿಗೆ ಸರ್ಕಾರ ಇದೆ ಎನ್ನುವುದನ್ನು ತೋರಿಸುತ್ತೇವೆ. ಚಂದ್ರು ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ. ಭಾಷೆ ವಿಚಾರದ ಬಗ್ಗೆ ಮಾತಾಡಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಇದನ್ನೂ ಓದಿ

ಧ್ವನಿವರ್ಧಕದಲ್ಲಿ ಹನುಮಾನ್​ ಚಾಲೀಸಾ, ಭಕ್ತಿಗೀತೆಗಳನ್ನು ಹಾಕಿದ ರಾಜ್ ಠಾಕ್ರೆ ಪಕ್ಷದ ಕಾರ್ಯಕರ್ತರು; ಕೂಡಲೇ ಬಂದು ತಡೆದ ಪೊಲೀಸರು

Rama Navami 2022: ತುಮಕೂರಿನಲ್ಲಿ ಕೇಸರಿ ಶಾಲು ಧರಿಸಿ ಪಾನಕ ಹಂಚಿ ರಾಮನವಮಿ ಆಚರಿಸಿದ ಹಿಂದೂ ಮುಸ್ಲಿಮರು

Published On - 12:33 pm, Sun, 10 April 22