ಚಂದ್ರು ಕೊಲೆ ಪ್ರಕರಣವನ್ನ ಸಿಐಡಿ ತನಿಖೆಗೆ ವಹಿಸಿದ ಕರ್ನಾಟಕ ಸರ್ಕಾರ; ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ

ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಕೂಡಾ ಮೊದಲ ಪ್ರತಿಕ್ರಿಯೆಯಲ್ಲಿ ಹೀಗೆ ಹೇಳಿದ್ದರು. ನಂತರ ಉರ್ದು ಭಾಷೆ ಬರಲ್ಲ ಅಂದಿದ್ದಕ್ಕೆ ಕೊಲೆ ನಡೆದಿಲ್ಲ ಎಂದು ಹೇಳಿದ್ದರು.

ಚಂದ್ರು ಕೊಲೆ ಪ್ರಕರಣವನ್ನ ಸಿಐಡಿ ತನಿಖೆಗೆ ವಹಿಸಿದ ಕರ್ನಾಟಕ ಸರ್ಕಾರ; ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ
ಆರಗ ಜ್ಞಾನೇಂದ್ರ
Follow us
TV9 Web
| Updated By: ಆಯೇಷಾ ಬಾನು

Updated on:Apr 10, 2022 | 1:35 PM

ಬೆಂಗಳೂರು: ಜೆ.ಜೆ.ನಗರದಲ್ಲಿ ನಡೆದ ಯುವಕ ಚಂದ್ರು ಹತ್ಯೆ (Murder) ಪ್ರಕರಣ ರಾಜ್ಯದಲ್ಲಿ ಸದ್ಯ ಹಲವು ಅನುಮಾನಗಳಿಗೆ ಕಾರಣವಾಗಿದೆ. ಉರ್ದು ಭಾಷೆ ಬರಲ್ಲ ಅಂದಿದ್ದಕ್ಕೆ ಕೊಲೆ ನಡೆಯಿತಾ ಎಂಬ ಶಂಕೆ ವ್ಯಕ್ತವಾಗಿದೆ. ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಕೂಡಾ ಮೊದಲ ಪ್ರತಿಕ್ರಿಯೆಯಲ್ಲಿ ಹೀಗೆ ಹೇಳಿದ್ದರು. ನಂತರ ಉರ್ದು ಭಾಷೆ ಬರಲ್ಲ ಅಂದಿದ್ದಕ್ಕೆ ಕೊಲೆ ನಡೆದಿಲ್ಲ ಎಂದು ಹೇಳಿದ್ದರು. ಆದರೆ ಮೃತ ಯುವಕ ಸ್ನೇಹಿತಾ ಕೆಲ ಹೇಳಿಕೆಗಳನ್ನು ನೀಡಿದ್ದು, ಅನುಮಾನ ಹೆಚ್ಚಾಗಿದೆ. ಈ ಎಲ್ಲದರ ನಡುವೆ  ಈ ಪ್ರಕರಣವನ್ನ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿ ಆದೇಶಿಸಿದೆ. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಸತ್ಯಬಯಲಿಗೆಳೆಯಬೇಕು. ಚಂದ್ರು ಕೊಲೆ ಮಾಡಿದ ಹಂತಕರನ್ನು ಶಿಕ್ಷೆಗೆ ಒಳಪಡಿಸಬೇಕು ಅಂತ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ ಮಾಡಿದ್ದಾರೆ.

ಚಂದ್ರು ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​! ಯುವಕ ಚಂದ್ರು ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ. ಬೈಕ್ ಅಪಘಾತವೇ ಆಗಿಲ್ಲ ಅಂತ ಚಂದ್ರು ಕುಟುಂಬಸ್ಥರು ಹೇಳಿದ್ದಾರೆ. ಆ ದಿನ ಬೈಕ್ ಟಚ್ ಆಗೇ ಇಲ್ಲ ಅಂತ ಕುಟುಂಬಸ್ಥರು ಹೇಳಿಕೆ ನೀಡಿದ್ದು, ಬೈಕ್‌ ನಿಲ್ಲಿಸಿದ್ದಾಗ ಮುಸ್ಲಿಂ​​ ಯುವಕರು ಜಗಳ ತೆಗೆದಿದ್ದಾರೆ. ಉರ್ದು ಮಾತಾಡಿಲ್ಲ‌ ಅಂತಾ ಚಂದ್ರುನನ್ನ ಕೊಲೆ ಮಾಡಿದ್ದಾರೆ ಎಂದಿದ್ದಾರೆ.

ಜಮೀರ್ ಅಹ್ಮದ್​ ಖಾನ್​ ಹೇಳಿಕೆ ಸಂಪೂರ್ಣ ಸುಳ್ಳು; ಸಹೋದರ ಸ್ಯಾಮುಯೆಲ್ ಹೇಳಿಕೆ: ಚಂದ್ರು ಸಹೋದರ ಸ್ಯಾಮುಯೆಲ್ ಮಾತನಾಡಿ, ನಮಗೆ ಯಾರೂ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ನಾವು ಪೊಲೀಸ್ ಠಾಣೆಗೆ ಹೋಗಿ ಬರುತ್ತಿದ್ದೇವೆ ಅಷ್ಟೇ.  ಪೊಲೀಸ್ ಠಾಣೆ ಒಳಗೆ ಏನ್ ನಡೀತಾ ಇದೆ ಗೊತ್ತಾಗುತ್ತಿಲ್ಲ. ನೇರವಾಗಿ ಕೋರ್ಟ್​ಗೆ ಬಂದು ಹೇಳಬೇಕು ಅಂದರೂ ಅಷ್ಟೇ. ಶಾಸಕ ಜಮೀರ್ ಅಹ್ಮದ್​ ಖಾನ್​ ಹೇಳಿಕೆ ಸಂಪೂರ್ಣ ಸುಳ್ಳು ಅಂತ ಹೇಳಿದ್ದಾನೆ.

ಪೊಲೀಸರ ಮೇಲೆ ನಮಗೆ ನಂಬಿಕೆ ಇಲ್ಲ: ಪೊಲೀಸರ ಡ್ಯೂಟಿ ಅವರು ಮಾಡುತ್ತಿದ್ದಾರೆ. ಅಂಗಡಿಗಳು ಎಲ್ಲಾವು ಓಪನ್ ಆಗಿದೆ. ಯಾರು ಸಹ ಅವರನ್ನ ಕಾಪಾಡಿಲ್ಲ. ಗಾಡಿ ನಿಲ್ಲಿಸಿ ಅವರು ಹೋಗಿದ್ದಾರೆ. ಅವರು ಸಿಸಿಟಿವಿಯಲ್ಲಿ ಸಂಪೂರ್ಣ ಪರಿಶೀಲನೆ ಮಾಡಿದ್ದಾರೆ. ಗಾಡಿಯು ಸಹ ಟಚ್‌ ಆಗಿಲ್ಲ. ಅವರು ಹೇ ಉರ್ದು ಮಾತನಾಡು ಎಂದು ಹೇಳಿದ್ದಾರೆ. ನಮ್ಮ ಹುಡಗ ಕನ್ನಡ ಮಾತನಾಡಿಲ್ಲ ಎಂದು ಕೊಲೆ ಮಾಡಿದ್ದಾರೆ. ನಾವು ಇನ್ನೂ ಸೈಮನ್ ಜೊತೆ ಮಾತನಾಡಿಲ್ಲ. ಅವರ ಮುಖ ನಾನು ಇನ್ನೂ ನೋಡಿಲ್ಲ. ಸಿಸಿಟಿವಿ ವಿಡಿಯೋ ಮೇಲೆ ನಮಗೆ ಗೋತ್ತಾಗಿದ್ದು. ಲೋಕಲ್ ಪೊಲೀಸರ ಮೇಲೆ ನಮಗೆ ನಂಬಿಕೆ ಇಲ್ಲ. ಹಣ ಕೊಟ್ಟು ನಾವು ಉಲ್ಟಾ ಹೊಡಿದಿಲ್ಲ. ನಮಗೆ ಟೀ ಕುಡಿಯಲು ಸಹ ದುಡ್ಡು ಕೊಟ್ಟಿಲ್ಲ  ಸೈಮನ್‌ಗೆ ದುಡ್ಡು ಕೊಟ್ಟಿರುವುದು ಸುಳ್ಳು. ಅವನಿಗೆ ಯಾವುದೇ ದುಡ್ಡು ಕೊಟ್ಟಿಲ್ಲ ಎಂದು ಚಂದ್ರು ಅಜ್ಜಿ ಮಾರಿಯಮ್ಮ ಹೇಳಿದರು.

ಬೈಕ್​ಗೆ ಯಾವುದೇ ಹಾನಿ ಆಗಿಲ್ಲ: ಜೆಜೆ ನಗರ ಠಾಣೆ ಪೊಲೀಸರು ಬೈಕ್​ನ ವಶಕ್ಕೆ ಪಡೆದಿದ್ದಾರೆ. ಕೆಎ 02 ಕೆಜೆ 4195 ನಂಬರ್​ನ ಆ್ಯಕ್ಟಿವಾ ಬೈಕ್ ಪೊಲೀಸರ ವಶದಲ್ಲಿದೆ. ಆದರೆ ಬೈಕ್​ಗೆ ಯಾವುದೇ ಹಾನಿ ಕೂಡ ಆಗಿಲ್ಲ. ಅಪಘಾತ ಆಗಿದೇ ಅನ್ನೋದಕ್ಕೆ ಯಾವ ಕುರುಹು ಕೂಡ ಇಲ್ಲ. ಸಣ್ಣ ಡ್ಯಾಮೆಜ್ ಕೂಡ ಬೈಕ್​ಗೆ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ವರ್ಷಗಟ್ಟಲೆ ಕುಳಿತು ಓದಿದವರಿಗೆ ಅನ್ಯಾಯವಾಗಬಾರದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿ ನಡೆಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 545 ಸಬ್ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಸಾಕಷ್ಟು ವಂಚನೆ ಕೇಳಿಬಂದ ಹಿನ್ನೆಲೆ ಸಿಐಡಿಗೆ ಕೊಟ್ಟಿದ್ವಿ. ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ವರ್ಷಗಟ್ಟಲೆ ಕುಳಿತು ಓದಿದವರಿಗೆ ಅನ್ಯಾಯವಾಗಬಾರದು. ಹೀಗಾಗಿ ಸಿಐಡಿ ಅಧಿಕಾರಿಗಳ ತಂಡವನ್ನ ಅಲ್ಲಿ ಕಳುಹಿಸಿದ್ದೇವೆ. ಕಲಬುರಗಿಯಲ್ಲಿ ವೀರೇಶ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಪರೀಕ್ಷೆಯಲ್ಲಿ 24 ಅಂಕಗಳಿಗೆ ಮಾತ್ರ ಫಿಲ್ ಅಪ್ ಮಾಡಿದ್ದ. ಒರಿಜಿನಲ್ ಶೀಟ್ ತರಿಸಿದಾಗ 100 ಮಾರ್ಕ್ಸ್ ಬರೆಯಲಾಗಿತ್ತು. ಅನುಮಾನ ಹಿನ್ನೆಲೆ ವೀರೇಶ್​ನನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

ಬಬಿಎಂಟಿಸಿ ಬಸ್​ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು? ಪ್ರಯಾಣಿಕರ ಆತಂಕಕ್ಕೆ ಮುಕ್ತಿ ಯಾವಾಗ?

ಭಾರತೀಯ ಕರೆನ್ಸಿ ನೋಟುಗಳಲ್ಲಿ ಯಾವೆಲ್ಲಾ ಭಾಷೆಗಳಲ್ಲಿ ಮಾಹಿತಿ ನೀಡಿರುತ್ತಾರೆ ಎನ್ನುವುದು ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ

Published On - 11:42 am, Sun, 10 April 22