ಬಬಿಎಂಟಿಸಿ ಬಸ್ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು? ಪ್ರಯಾಣಿಕರ ಆತಂಕಕ್ಕೆ ಮುಕ್ತಿ ಯಾವಾಗ?
ಕಳೆದ ಎರಡು ತಿಂಗಳಲ್ಲಿ ಮೂರು ಬಸ್ಗಳು ಸುಟ್ಟು ಹೋಗಿವೆ. ನಿತ್ಯ ಲಕ್ಷಾಂತರ ಪ್ರಯಾಣಿಕರು (Passengers) ಸಂಚಾರ ಮಾಡುವ ಬಿಎಂಟಿಸಿ ಬಸ್ಗಳು ಸುರಕ್ಷಿತ ಅಲ್ವಾ? ಎಂಬ ಅನುಮಾನ ಮೂಡಿದೆ.
ಬೆಂಗಳೂರು: ಇತ್ತೀಚೆಗೆ ಬಿಎಂಟಿಸಿ ಬಸ್ಗಳು (BMTC Buses) ಹೊತ್ತಿ ಉರಿಯುತ್ತಿವೆ. ಮೂರು ನಾಲ್ಕು ತಿಂಗಳುಗಳಿಂದ ಬಸ್ಗಳು ಬೆಂಕಿಗಾಹುತಿಯಾಗುತ್ತಿವೆ. ಕಳೆದ ಎರಡು ತಿಂಗಳಲ್ಲಿ ಮೂರು ಬಸ್ಗಳು ಸುಟ್ಟು ಹೋಗಿವೆ. ನಿತ್ಯ ಲಕ್ಷಾಂತರ ಪ್ರಯಾಣಿಕರು (Passengers) ಸಂಚಾರ ಮಾಡುವ ಬಿಎಂಟಿಸಿ ಬಸ್ಗಳು ಸುರಕ್ಷಿತ ಅಲ್ವಾ? ಎಂಬ ಅನುಮಾನ ಮೂಡಿದೆ. ಜೊತೆಗೆ ಬಿಎಂಟಿಸಿ ಬಸ್ಗಳ ನಿರ್ವಹಣೆಯಲ್ಲಿ ಪದೇ ಪದೇ ನಿರ್ಲಕ್ಷ್ಯ ವಹಿಸಿದ್ಯಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಅಧಿಕಾರಿಗಳ ಬೇಜವಾಬ್ದಾರಿನೇ ಇದಕ್ಕೆ ಕಾರಣ ಆಯಿತಾ? ಅಧಿಕಾರಿಗಳ ಕಮಿಷನ್ ಧನದಾಹಕ್ಕೆ ಬಿಎಂಟಿಸಿ ಬಸ್ಗಳು ಬೆಂಕಿ ಆಹುತಿ ಆಗುತ್ತಿದ್ಯಾ? ಈ ಹಿಂದೆ ಎರಡು ಬಸ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೂ ಅಧಿಕಾರಿಗಳು ಯಾಕೆ ಎಚ್ಚೆತ್ತುಕೊಂಡಿಲ್ಲ? ಎಂಬ ಪ್ರಶ್ನೆಗಳ ಸರಮಾಲೆ ಹುಟ್ಟಿಕೊಂಡಿದ್ದು, ಸಾಲು ಸಾಲು ಬಸ್ಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಪ್ರಯಾಣಿಕರಿಗೆ ಆತಂಕ ಹೆಚ್ಚಾಗಿದೆ.
ಬಿಎಂಟಿಸಿ ಬಸ್ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು?: * ಅಶೋಕ್ ಲೇಲ್ಯಾಂಡ್ ಕಂಪನಿಯಲ್ಲಿ ಬಸ್ಗಳ ವಿನ್ಯಾಸ ಲೋಪದೋಷ. * ನಗರದ 48 ಡಿಪೋಗಳಲ್ಲಿ ಬಸ್ ನಿರ್ವಹಣೆಯಲ್ಲಿ ವೈಫಲ್ಯ. * ಬಸ್ ಡಿಪೋಗಳಿಂದ ಹೊರಬರುವ ಮುನ್ನ ಬಸ್ಗಳನ್ನ ಪರಿಶೀಲನೆ ಮಾಡುತ್ತಿಲ್ಲ. * ಕಳಪೆ ಗುಣಮಟ್ಟದ ಸ್ಪೇರ್ ಪಾರ್ಟ್ಸ್ ಖರೀದಿ. * ಬಿಸಿಲಿನ ಧಗೆಯಿಂದ ಇಂಜಿನ್ನಲ್ಲಿ ತಾಂತ್ರಿಕ ದೋಷ.
ಕಳೆದಬಾರಿ ಚಾಮರಾಜಪೇಟೆ ಪೊಲೀಸ್ ಸ್ಟೇಶನ್ ಠಾಣೆ ವ್ಯಾಪ್ತಿಯಲ್ಲಿ (ಮಕ್ಕಳ ಕೂಟ) ಚಲಿಸುತ್ತಿದ್ದ ಬಿಎಂಟಿಸಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಬಾರಿ ಅಂದರೆ ಶನಿವಾರ ಶೇಷಾದ್ರಿಪುರಂನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿತು. ಅದೃಷ್ಟದ ಸಂಗತಿಯೆಂದರೆ ಈ ಅನಾಹುತದಲ್ಲಿ ಯಾರೂ ತೊಂದರೆಗೊಳಗಾಗಿಲ್ಲ, ಗಾಯಗಳಾಗಿಲ್ಲ. ಇಂಜಿನ್ನಿಂದ ಹೊಗೆ ಬರುತ್ತಿರುವುದನ್ನು ಕಂಡಕೂಡಲೇ ಜಾಗೃತರಾದ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದರು.
ಇದನ್ನೂ ಓದಿ
Published On - 11:13 am, Sun, 10 April 22