ಕಂಪನಿಯ ಇಂಜಿನಿಯರ್ಗಳು ತಪಾಸಣೆ ಮಾಡಿ ಓಕೆ ಅಂದ ಬಳಿಕವೂ ಬಿಎಂಟಿಸಿ ಬಸ್ಸಲ್ಲಿ ಬೆಂಕಿ ಕಾಣಿಸಿಕೊಂಡಿದೆ!
ಎರಡನೇ ಪ್ರಕರಣ ಸಂಭವಿಸಿದಾಗಲೇ ಬಿಎಂಟಿಸಿ ಅಧಿಕಾರಿಗಳು ಅಶೋಕ್ ಲೇಲ್ಯಾಂಡ್ ಕಂಪನಿಗೆ ದೂರು ನೀಡಿದ್ದರು ಮತ್ತು ಕಂಪನಿಯ ಇಂಜಿನಿಯರ್ ಗಳು ಡಿಪೋಗಳಿಗೆ ಆಗಮಿಸಿ ಎಲ್ಲಾ ಬಸ್ ಗಳನ್ನು ತಪಾಸಣೆ ಮಾಡಿ ಸಮಸ್ಯೆ ಬಗಹರಿಸಿದ ಓಕೆ ಹೇಳಿದ ನಂತರವೇ ಈ 186 ಬಸ್ ಗಳನ್ನು ರೋಡಿಗಿಳಿಸಲಾಗಿತ್ತು.
ಬೆಂಗಳೂರು: ಕಳೆದೆರಡು ತಿಂಗಳ ಅವಧಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ನಡುರಸ್ತೆಯಲ್ಲಿ ಹೊತ್ತಿಕೊಂಡು ಉರಿದ ಎರಡನೇ ಪ್ರಕರಣ ಇದಾಗಿದೆ. ಕಳೆದಬಾರಿ ಚಾಮರಾಜಪೇಟೆ ಪೊಲೀಸ್ ಸ್ಟೇಶನ್ ಠಾಣೆ ವ್ಯಾಪ್ತಿಯಲ್ಲಿ (ಮಕ್ಕಳ ಕೂಟ) ಚಲಿಸುತ್ತಿದ್ದ ಬಿ ಎಮ್ ಟಿ ಸಿ (BMTC) ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಬಾರು ಅಂದರೆ ಶನಿವಾರ ಶೇಷಾದ್ರಿಪುರಂನಲ್ಲಿ (Sheshadripuram) ಚಲಿಸುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿತು. ಅದೃಷ್ಟದ ಸಂಗತಿಯೆಂದರೆ ಈ ಅನಾಹುತದಲ್ಲಿ ಯಾರೂ ತೊಂದರೆಗೊಳಗಾಗಿಲ್ಲ, ಗಾಯಗಳಾಗಿಲ್ಲ. ಇಂಜಿನ್ನಿಂದ ಹೊಗೆ ಬರುತ್ತಿರುವುದನ್ನು ಕಂಡಕೂಡಲೇ ಜಾಗೃತರಾದ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದರು. ಕೂಡಲೇ ಅಗ್ನಿಶಾಮಕ ದಳದ (fire brigade) ಕಚೇರಿಗೆ ಫೋನ್ ಮಾಡಲಾಯಿತಾದರೂ ಫೈರ್ ಎಂಜಿನ್ ಬರುವಷ್ಟರಲ್ಲಿ ಬಸ್ಸಿನ ಮುಂಭಾಗ ಭಾಗಶಃ ಸುಟ್ಟು ಹೋಗಿತ್ತು. ಬೆಂಕಿ ಆರಿಸುವಾಗ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು ನಿಮಗೆ ವಿಡಿಯೋನಲ್ಲಿ ಕಾಣುತ್ತದೆ.
ಚಲಿಸುವ ಬಸ್ಸು, ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ಪದೇಪದೆ ತಲೆದೋರುತ್ತಿರುವ ಹಿನ್ನೆಲೆಯಲ್ಲಿ ನಾವು ಅತಂಕ ವ್ಯಕ್ತಪಡಿಸುತ್ತಲೇ ಇದ್ದೇವೆ. ಶನಿವಾರ ಹೊತ್ತಿ ಉರಿದ ಬಸ್ ಮತ್ತು ಇದಕ್ಕೂ ಮೊದಲಿನ ಎರಡು ಪ್ರಕರಣಗಳಲ್ಲಿ ಸುಟ್ಟ ಬಸ್ಗಳ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದೆ. ಎಲ್ಲ ಮೂರು ಬಸ್ಗಳು ಅಶೋಕ್ ಲೇಲ್ಯಾಂಡ್ ಮೇಕ್ ವಾಹನಗಳು. ಮೂಲಗಳ ಪ್ರಕಾರ ಸಾರಿಗೆ ಸಂಸ್ಥೆಯು 2014 ರಲ್ಲಿ 186 ಅಶೋಕ್ ಲೇಲ್ಯಾಂಡ್ ಬಸ್ಸುಗಳನ್ನು ಖರೀದಿ ಮಾಡಿತ್ತು. ಆ 186 ಬಸ್ ಗಳ ಪೈಕಿಯೇ ಮೂರರಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಎರಡನೇ ಪ್ರಕರಣ ಸಂಭವಿಸಿದಾಗಲೇ ಬಿಎಂಟಿಸಿ ಅಧಿಕಾರಿಗಳು ಅಶೋಕ್ ಲೇಲ್ಯಾಂಡ್ ಕಂಪನಿಗೆ ದೂರು ನೀಡಿದ್ದರು ಮತ್ತು ಕಂಪನಿಯ ಇಂಜಿನಿಯರ್ ಗಳು ಡಿಪೋಗಳಿಗೆ ಆಗಮಿಸಿ ಎಲ್ಲಾ ಬಸ್ ಗಳನ್ನು ತಪಾಸಣೆ ಮಾಡಿ ಸಮಸ್ಯೆ ಬಗಹರಿಸಿ ಓಕೆ ಹೇಳಿದ ನಂತರವೇ ಈ 186 ಬಸ್ ಗಳನ್ನು ರೋಡಿಗಿಳಿಸಲಾಗಿತ್ತು.
ಆದರೆ, ಶನಿವಾರ ಮತ್ತೊಂದು ಬಸ್ಸಿಗೆ ಬೆಂಕಿ ಕಾಣಿಸಿಕೊಂಡಿದೆ!
ಇದನ್ನೂ ಓದಿ: ಜೀವನದಲ್ಲಿ ಸ್ನೇಹಿತರೇಕೆ ಬೇಕು? ಆಮೆಯ ವಿಡಿಯೋ ಮೂಲಕ ಸುಂದರವಾಗಿ ವಿವರಿಸಿದ ಆನಂದ್ ಮಹೀಂದ್ರಾ