Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೆಗೆಟಿವ್ ಕಮೆಂಟ್ ಮಾಡಿ ಕಾಲೆಳೆಯಬೇಡಿ’; ಧ್ರುವ ಸರ್ಜಾ ವಿಶೇಷ ಮನವಿ ಮಾಡಿದ್ದು ಯಾರಿಗೆ?

‘ನೆಗೆಟಿವ್ ಕಮೆಂಟ್ ಮಾಡಿ ಕಾಲೆಳೆಯಬೇಡಿ’; ಧ್ರುವ ಸರ್ಜಾ ವಿಶೇಷ ಮನವಿ ಮಾಡಿದ್ದು ಯಾರಿಗೆ?

TV9 Web
| Updated By: ರಾಜೇಶ್ ದುಗ್ಗುಮನೆ

Updated on:Apr 09, 2022 | 3:18 PM

‘ಬಾಂಡ್ ರವಿ’ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಧ್ರುವ-ವಿನೋದ್ ಅವರು ಪ್ರಮೋದ್ ಬೆನ್ನುತಟ್ಟಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ವೇಳೆ ಧ್ರುವ ಅವರು ಪ್ರಮೋದ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಧನಂಜಯ (Dhananjay) ನಟನೆಯ ‘ರತ್ನನ್ ಪ್ರಪಂಚ’ ಸಿನಿಮಾದಲ್ಲಿ ಪ್ರಮೋದ್ (Pramod) ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಹೀರೋ  ಆಗಿ ನಟಿಸುತ್ತಿದ್ದಾರೆ. ‘ಬಾಂಡ್ ರವಿ’ ಸಿನಿಮಾದಲ್ಲಿ ಪ್ರಮೋದ್ ಲೀಡ್ ರೋಲ್ ಮಾಡುತ್ತಿದ್ದು, ಈ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಈ ಚಿತ್ರಕ್ಕೆ ಧ್ರುವ ಸರ್ಜಾ (Dhruva Sarja) ಹಾಗೂ ವಿನೋದ್ ಪ್ರಭಾಕರ್ ಸಾಥ್ ಕೊಟ್ಟಿದ್ದಾರೆ. ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಧ್ರುವ-ವಿನೋದ್ ಅವರು ಪ್ರಮೋದ್ ಬೆನ್ನುತಟ್ಟಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ವೇಳೆ ಧ್ರುವ ಅವರು ಪ್ರಮೋದ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ಪ್ರಮೋದ್​ ಭರವಸೆಯ ನಟ. ಪ್ರತಿಯೊಬ್ಬರಲ್ಲೂ ಟ್ಯಾಲೆಂಟ್ ಇರುತ್ತದೆ. ಅದನ್ನು ನಾವು ಗುರುತಿಸಬೇಕು. ಎಲ್ಲರನ್ನೂ ಪ್ರೋತ್ಸಾಹಿಸಬೇಕು. ನೆಗೆಟಿವ್ ಕಮೆಂಟ್ ಮಾಡಿ ಕೆಳಗಿಳಿಸುವ ಪ್ರಯತ್ನ ಮಾಡಬಾರದು’ ಎಂದರು ಧ್ರುವ. ಮುಹೂರ್ತ ಕಾರ್ಯಕ್ರಮ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ಧ್ರುವ ಸರ್ಜಾ ಕ್ಯಾಮೆರಾಗೆ ಚಾಲನೆ ನೀಡಿದರೆ, ವಿನೋದ್​ ಪ್ರಭಾಕರ್ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.

ಇದನ್ನೂ ಓದಿ: ಚಿರು ಸರ್ಜಾ ಕೊನೇ ಸಿನಿಮಾಗೆ ಕಂಠದಾನ ಮಾಡಿದ ಧ್ರುವ ಸರ್ಜಾ

ಪುನೀತ್​ ರಾಜ್​ಕುಮಾರ್ ಫೋಟೋಗೆ ಧ್ರುವ ಸರ್ಜಾ ಪುಷ್ಪ ನಮನ

Published on: Apr 09, 2022 03:16 PM