ಬೆಂಗಳೂರು: ಮೀಸಲಾತಿಯಿಂದ, ನೀಟ್ ವ್ಯವಸ್ಥೆಯಿಂದಲೇ ಮಗನ ಸೀಟು ಕೈ ತಪ್ಪಿತು ಎಂದು ಉಕ್ರೇನ್ನಲ್ಲಿ ಮೃತ ನವೀನ್ ಪೋಷಕರ ಆರೋಪ ವಿಚಾರಕ್ಕೆ ಸಂಬಂಧಿಸಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮಾತನಾಡಲು ಸಂದರ್ಭ ಅಲ್ಲ. ಫೀ ಸ್ಟ್ರಕ್ಚರ್ ಹೇಗಿದೆ ಅನ್ನೋದು ಗೊತ್ತಿದೆ. ಶೇ. 45 ಉಚಿತ ಸೀಟುಗಳನ್ನು ಕೊಡಲಾಗುತ್ತಿದೆ. ಯಾವುದೇ ಮ್ಯಾನೇಜ್ಮೆಂಟ್ ಕಡಿಮೆ ದರದಲ್ಲಿ ಡಾಕ್ಟರ್ ಮಾಡಲು ಸಾಧ್ಯವಿಲ್ಲ. ಎಲ್ಲರೂ ಡಾಕ್ಟರ್ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಅತಿ ಹೆಚ್ಚು ವೈದ್ಯಕೀಯ ಶಿಕ್ಷಣ ಪಡೆಯಲು ಮುಂದಾಗುತ್ತಿದ್ದಾರೆ. ಮೀಸಲಾತಿ ಬಗ್ಗೆ ಮಾತು ಇದ್ದೇ ಇರುತ್ತದೆ. ಕಡು ಬಡವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಪ್ರಧಾನಿಗಳಿಗೆ 60:40 ಅನುಪಾತದಲ್ಲಿ ಎಲ್ಲೆಡೆ ಮೆಡಿಕಲ್ ಕಾಲೇಜು ಇರಬೇಕು ಎಂಬ ಹಂಬಲ ಇದೆ. ಹಾಗಾಗಿ ಬಡವರಿಗೂ ಮೆಡಿಕಲ್ ಸೀಟು ಸಿಗುವ ಕೆಲಸ ಆಗುತ್ತಿದೆ. ನೀಟ್ ಮೂಲಕ ವ್ಯವಸ್ಥೆ ಸರಿಪಡಿಸುವ ಕೆಲಸ ಆಗುತ್ತಿದೆ. ನೀಟ್ ಸಾಮಾನ್ಯ ವ್ಯಕ್ತಿಗೂ ನ್ಯಾಯ ಸಿಗುವ ಕೆಲಸ ಮಾಡುತ್ತಿದೆ. ನೀಟ್ ದೇಶದ ಉತ್ತಮ ವ್ಯವಸ್ಥೆ ಆಗಿದೆ. ನೀಟ್ ವಿರೋಧಿಸುವವರು ಹಣ ಮಾಡುವವರು, ದ್ರೋಹಿಗಳು ಎಂದು ತಿಳಿಸಿದ್ದಾರೆ.
20 ಸಾವಿರ ಭಾರತೀಯರು ಉಕ್ರೇನ್ ದೇಶದಲ್ಲಿದ್ದಾರೆ. ಈವರೆಗೆ 2 ಸಾವಿರ ಜನರನ್ನು ಭಾರತಕ್ಕೆ ಕರೆತರಲಾಗಿದೆ. ಸವಾಲಿನ ಮಧ್ಯೆ ನಮ್ಮವರನ್ನ ವಾಪಸ್ ಕರೆ ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಏರ್ಲಿಫ್ಟ್ ಮಾಡಲು ಸರ್ಕಾರದ ಸರಿ ಕ್ರಮ ಕೈಗೊಳ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಸಚಿವ ಡಾ. ಅಶ್ವತ್ಥ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಅಪಾದನೆ ಯಾವಾಗಲೂ ರಾಜಕೀಯ ಪ್ರೇರಿತ ಆಗಿರುತ್ತದೆ. ಉಕ್ರೇನ್ ದೇಶ ಫ್ಲೈಯಿಂಗ್ ಝೋನ್ ಆಗಿದೆ. ಸ್ಥಳೀಯದ ದೇಶಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಇದನ್ನೂ ಓದಿ: ನವೀನ್ ಕುಟುಂಬಕ್ಕೆ ಪರಿಹಾರವನ್ನು ನೀಡುತ್ತೇವೆ, ಯುದ್ಧದಿಂದ ಮೃತದೇಹ ತರಲು ಕಷ್ಠ; ಸಿಎಂ ಬೊಮ್ಮಾಯಿ
ಇದನ್ನೂ ಓದಿ: ನವೀನ್ ಮೃತದೇಹ ಸ್ವಗ್ರಾಮಕ್ಕೆ ತರುವಂತೆ ಸಿಎಂಗೆ ಮನವಿ ಮಾಡಿದ ತಂದೆ ಶೇಖರ್‌ಗೌಡ