ವಜಾಗೊಂಡಿದ್ದ ಅಷ್ಟೂ ಸಾರಿಗೆ ನೌಕರರ ಮರು ನೇಮಕ; ಸಿಹಿ ಸುದ್ದಿ ಕೊಟ್ಟ ಶ್ರೀರಾಮುಲು

| Updated By: sandhya thejappa

Updated on: Sep 21, 2021 | 12:40 PM

ವೇತನ ತಾರತಮ್ಯ ಬಗ್ಗೆಯೂ ಸಾರಿಗೆ ನೌಕರರ ಬೇಡಿಕೆ ಇಟ್ಟಿದ್ದರು. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆಯೂ ಮಾತಾನಾಡುವ ಯೋಚನೆ ಇದೆ. ಅವರ ಪ್ರಮುಖವಾದ 4,200 ಸಾರಿಗೆ ನೌಕರರನ್ನ ಪುನರ್ ನೇಮಕ ಬಗ್ಗೆ ಒತ್ತಡ ಇತ್ತು.

ವಜಾಗೊಂಡಿದ್ದ ಅಷ್ಟೂ ಸಾರಿಗೆ ನೌಕರರ ಮರು ನೇಮಕ; ಸಿಹಿ ಸುದ್ದಿ ಕೊಟ್ಟ ಶ್ರೀರಾಮುಲು
ಸಾರಿಗೆ ಅಧಿಕಾರಿಗಳ ಜೊತೆ ಶ್ರೀರಾಮುಲು ಸಭೆ
Follow us on

ಬೆಂಗಳೂರು: ವಜಾಗೊಂಡಿದ್ದ ಸಾರಿಗೆ ನೌಕರರ (Transportation Employees) ಮರು ನೇಮಕಕ್ಕೆ ಸರ್ಕಾರ (Karnataka Government) ಆದೇಶ ನೀಡಿದೆ. ಈ ಮೂಲಕ 4,200 ಸಾರಿಗೆ ನೌಕರರಿಗೆ ಸಚಿವ ಬಿ.ಶ್ರೀರಾಮುಲು (B Sriramulu) ಸಿಹಿ ಸುದ್ದಿ ನೀಡಿದ್ದಾರೆ. ವಜಾಗೊಂಡಿದ್ದ ಅಷ್ಟೂ ಸಾರಿಗೆ ನೌಕರರನ್ನು ಮರು ನೇಮಕ ಮಾಡಲು ಸರ್ಕಾರ ಆದೇಶ ನೀಡಿದ್ದು, ಸಾರಿಗೆ ಸಚಿವರು ಹಾಗು ನೌಕರರ ನಡುವೆ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಸಾರಿಗೆ ಯೂನಿಯನ್ ನಾಯಕರ ಜೊತೆ ಚರ್ಚೆ ಮಾಡಲಾಗಿದೆ. 12 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು. ನಿನ್ನೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲಾಗಿದೆ. ಸಾರಿಗೆ ಇಲಾಖೆಯಲ್ಲಿ ಯಾವುದೇ ರೀತಿ ತೊಂದರೆಯಾಗಬಾರದೆಂದು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ವೇತನ ತಾರತಮ್ಯ ಬಗ್ಗೆಯೂ ಸಾರಿಗೆ ನೌಕರರ ಬೇಡಿಕೆ ಇಟ್ಟಿದ್ದರು. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆಯೂ ಮಾತಾನಾಡುವ ಯೋಚನೆ ಇದೆ. ಅವರ ಪ್ರಮುಖವಾದ 4,200 ಸಾರಿಗೆ ನೌಕರರನ್ನ ಪುನರ್ ನೇಮಕ ಬಗ್ಗೆ ಒತ್ತಡ ಇತ್ತು. ಈ ಬಗ್ಗೆ ಮೊದಲು ಆದ್ಯತೆ ಕೊಟ್ಟು ಮರು ನೇಮಕ ಮಾಡುತ್ತೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ಬಹುತೇಕ ಎಲ್ಲಾ ಸಮಸ್ಯೆ ಪರಿಹಾರಿಸೋದಾಗಿ ಶ್ರೀರಾಮುಲು ಭರವಸೆ ನೀಡಿದ್ದಾರೆ. ಕಳೆದ ಮುಷ್ಕರದ ವೇಳೆ 4,200 ನೌಕರರನ್ನ ನಿಗಮಗಳು ವಜಾಗೊಳಿಸಿತ್ತು. ಮರು ನೇಮಕಕ್ಕಾಗಿ ಸಾರಿಗೆ ನೌಕರರ ಯೂನಿಯನ್ ಬೇಡಿಕೆ ಇಟ್ಟಿತ್ತು. ಹಲವಾರು ಪ್ರತಿಭಟನೆ ಸಹ ನಡೆದಿತ್ತು. ರಾಮುಲು ಎಲ್ಲಾ ನೌಕರರ ಯೂನಿಯನ್ ಮುಖಂಡರನ್ನ ಕರೆಸಿ ಮಾತುಕತೆ ನಡೆಸಿದರು. ಸಾರಿಗೆ ನೌಕರರ ಮುಖಂಡರಾದ ಅನಂತ ಸುಬ್ಬಾರಾವ್, ಸಿಐಟಿಯು ಮಂಜುನಾಥ್, ಪ್ರಕಾಶ್ ಸೇರಿ ಹಲವು ಮುಖಂಡರ ಜೊತೆ ಚರ್ಚಿಸಿದರು.

ಇನ್ನು ಸಾರಿಗೆ ಸಚಿವರು ಶಾಲಾ, ಕಾಲೇಜಿಗೆ ಹೋಗುವುದಕ್ಕೆ ಮಕ್ಕಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಡಿಪೋಗಳಲ್ಲಿ ಕೆಲಸ ಮಾಡುವ ಸಾರಿಗೆ ನೌಕರರಿಗೆ ಕಿರುಕುಳ, ಸಾರಿಗೆ ನೌಕರರ ಎಲ್ಲಾ ಸಮಸ್ಯೆ, ಬೇಡಿಕೆಗಳನ್ನ ಬಗೆಹರಿಸುತ್ತೇವೆ. ಸ್ವತಃ ನಾನೇ ಡಿಪೋಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಎಲ್ಲದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ರಾಮುಲು ಹೇಳಿದರು.

ಇದನ್ನೂ ಓದಿ

ಬೆಳಗಾವಿಯಲ್ಲಿ ಎಂಇಎಸ್‌ನಿಂದ ದಿನಕ್ಕೊಂದು ನಾಟಕ; ಭಾಷಾ ರಾಜಕಾರಣದ ಹೆಸರಲ್ಲಿ ವಿಷಬೀಜ ಬಿತ್ತಲು ಪ್ರಯತ್ನ

ಜಸ್ಟ್​ ಮಿಸ್; ಮಂಗಳೂರಿನಲ್ಲಿ ಕಾರಿನಡಿ ಬಿದ್ದರೂ ಬಾಲಕ ಪವಾಡಸದೃಶ ಪಾರು! ವಿಡಿಯೋ ನೋಡಿ

(Minister b sriramulu says KSRTC transportation employees will be re appointed to work)

Published On - 12:12 pm, Tue, 21 September 21