ಬೆಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣ; ಆರೋಪಿಗಳ ಮೇಲೆ 7 ಸೆಕ್ಷನ್ಗಳನ್ನು ಹಾಕಿದ ಪೊಲೀಸರು
ಪೊಲೀಸರಿಗೆ ಮಹಿಳೆ ಕೊಟ್ಟಿರುವ ದೂರಿನಲ್ಲಿರುವ ಮಾಹಿತಿ ಆಧರಿಸಿ, ಸೋಹೆಲ್ ಹಾಗೂ ನಯಾಜ್ ಮೇಲೆ ಹಲವು ಕೇಸ್ಗಳು ದಾಖಲಾಗಿದೆ. ಒಟ್ಟು 7 ಸೆಕ್ಷನ್ಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಆರೋಪಿಗಳ ಮೇಲೆ ಹಾಕಿದ್ದಾರೆ. IPC 153(A), 506, 341, 34, 504, 323 ಹಾಗೂ 354 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು: ಬುರ್ಖಾ ಧರಿಸಿದ ಮಹಿಳೆ ಜತೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ನಿಂದನೆ ಮತ್ತು ಹಲ್ಲೆ ಪ್ರಕರಣದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಹಲ್ಲೆ ವಿಡಿಯೋ ವೈರಲ್ ಆದ 12 ಗಂಟೆಯಲ್ಲೇ ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸರು ಆರೋಪಿಗಳಾದ ಸೊಹೇಲ್ ಮತ್ತು ನಯಾಜ್ ಅನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ.
ಪೊಲೀಸರಿಗೆ ಮಹಿಳೆ ಕೊಟ್ಟಿರುವ ದೂರಿನಲ್ಲಿರುವ ಮಾಹಿತಿ ಆಧರಿಸಿ, ಸೋಹೆಲ್ ಹಾಗೂ ನಯಾಜ್ ಮೇಲೆ ಹಲವು ಕೇಸ್ಗಳು ದಾಖಲಾಗಿದೆ. ಒಟ್ಟು 7 ಸೆಕ್ಷನ್ಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಆರೋಪಿಗಳ ಮೇಲೆ ಹಾಕಿದ್ದಾರೆ. IPC 153(A), 506, 341, 34, 504, 323 ಹಾಗೂ 354 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಆರೋಪಿಗಳ ಮೇಲೆ ಹಾಕಿರುವ ಸೆಕ್ಷನ್ ಏನು ಹೇಳುತ್ತದೆ? IPC 153(A) – ಉದ್ದೇಶ ಪೂರ್ವಕವಾಗಿ ಎರಡು ಧರ್ಮಗಳ ಮಧ್ಯೆ ದ್ವೇಷ ಉಂಟುಮಾಡುವುದು(3 ವರ್ಷದವರೆಗೂ ಶಿಕ್ಷೆ ಹಾಗೂ ದಂಡ – ನಾನ್ ಬೇಲೆಬಲ್) 506 – ಜೀವ ಬೆದರಿಕೆ ( 2 ವರ್ಷ ಶಿಕ್ಷೆ ಹಾಗೂ ದಂಡ ) 341 – ಅಕ್ರಮ ತಡೆಯುವುದು (ಒಂದು ತಿಂಗಳು ಶಿಕ್ಷೆ ಹಾಗೂ ದಂಡ ) 34 – ಒಂದೇ ಉದ್ದೇಶದಿಂದ ಎರಡು ಮೂರು ಜನರಿಗೆ ನೋವುಂಟು ಮಾಡುವುದು 504 – ಮಾನಹಾನಿ ಮಾಡುವುದು 323 – ಮನಸ್ಸಿಗೆ ಘಾಸಿ ಮಾಡುವುದು ( 1 ವರ್ಷ ಶಿಕ್ಷೆ) 354 – ಮಹಿಳೆಗೆ ದೌರ್ಜನ್ಯ ( 2-3 ವರ್ಷ ಜೈಲು ಹಾಗೂ ದಂಡ)
ಮಹಿಳೆ ಕೊಟ್ಟ ದೂರಿನಲ್ಲಿ ಏನಿದೆ? ಕಾರ್ಯಕ್ರಮ ಇದ್ದ ಕಾರಣಕ್ಕೆ ಕಚೇರಿಯಿಂದ ಹೋಗಲು ತಡ ಆಯ್ತು. ಡ್ರಾಪ್ ಪಡೆಯುವುದಾಗಿ ಮನೆಯವರ ಅನುಮತಿ ಪಡೆದಿದ್ದೆ. ಅದರಂತೆ ಜೊತೆಯಲ್ಲಿ ಕೆಲಸ ಮಾಡುವ ಮಹೇಶ್ ಜೊತೆ ಬರುತ್ತಾ ಇದ್ದೇ. ರಾತ್ರಿ 9:20 ರ ವೇಳೆಗೆ ಅಪರಿಚಿತ ವ್ಯಕ್ತಿಗಳು ಡೈರಿ ಸರ್ಕಲ್ ಬಳಿ ಬೈಕ್ ತಡೆದರು. ಈ ವೇಳೆ ನನ್ನ ಪತಿಯ ಮೊಬೈಲ್ ನಂಬರ್ ಪಡೆದು ಮುಖಕ್ಕೆ ಮೊಬೈಲ್ ಟಾರ್ಚ್ ಹಾಕಿದರು. ನಂತರ ಮಹೇಶ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಹಿಂದೂ ಹುಡುಗನ ಜೊತೆ ಯಾಕೆ ಹೋಗುತ್ತಾ ಇದ್ದೀಯಾ ಅಂತ ಬೆದರಿಸಿದರು. ಹೋಗೋದಾದರೆ ಬುರ್ಖಾ ತೆಗೆದು ಹೋಗು ಅಂತ ಮಾತನಾಡಿದರು. ನಂತರ ಆಟೋ ಹಿಡ್ಕೊಂಡು ಮನೆಗೆ ಹೋಗುವಂತೆ ಬೆದರಿಕೆ ಹಾಕಿದರು. ಭಯ ಆಗಿ ನಾನೇ ಬಾಡಿಗೆ ಅಟೋ ತಗೊಂಡು ಮನೆಗೆ ಹೋದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣ; ಪ್ರಚಾರದ ಹುಚ್ಚಿನಿಂದ ಹಲ್ಲೆ ಮಾಡಿರುವುದಾಗಿ ಹೇಳಿಕೆ
ಬುರ್ಖಾಧಾರಿ ಮಹಿಳೆ ಜತೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ಮೇಲೆ ಹಲ್ಲೆ: ಇಬ್ಬರ ಬಂಧನ; ಕಠಿಣ ಕ್ರಮದ ಭರವಸೆ ನೀಡಿದ ಸಿಎಂ
Published On - 10:31 am, Tue, 21 September 21