ಬೆಂಗಳೂರು ನಗರದಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣ; ಪ್ರಚಾರದ ಹುಚ್ಚಿನಿಂದ ಹಲ್ಲೆ ಮಾಡಿರುವುದಾಗಿ ಹೇಳಿಕೆ

TV9 Digital Desk

| Edited By: preethi shettigar

Updated on:Sep 20, 2021 | 2:33 PM

ಸಣ್ಣ ಸಣ್ಣ ವಿಡಿಯೋಗಳನ್ನು ಫೇಸ್‌ಬುಕ್‌ನಲ್ಲಿ ಹಾಕುತ್ತಿದ್ದೆ. ಅದರಂತೆ ಈ ವಿಡಿಯೋ ಸಹ ಅಪ್‌ಲೋಡ್ ಮಾಡಿದ್ದೆ. ಸುದ್ದಿ ವೈರಲ್ ಆಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ್ದೆ ಎಂದು ಸುದ್ದುಗುಂಟೆಪಾಳ್ಯ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣ; ಪ್ರಚಾರದ ಹುಚ್ಚಿನಿಂದ ಹಲ್ಲೆ ಮಾಡಿರುವುದಾಗಿ ಹೇಳಿಕೆ
ಸಾಂದರ್ಭಿಕ ಚಿತ್ರ

Follow us on

ಬೆಂಗಳೂರು: ಬುರ್ಖಾ ಧರಿಸಿದ ಮಹಿಳೆ ಜತೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ನಿಂದನೆ ಮತ್ತು ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಹಲ್ಲೆ ವಿಡಿಯೋ ವೈರಲ್ ಆದ 12 ಗಂಟೆಯಲ್ಲೇ ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸರು ಹಲ್ಲೆ ನಡೆಸಿದ ಆರೋಪಿಗಳಾದ ಸೊಹೇಲ್ ಮತ್ತು ನಯಾಜ್ ಅನ್ನು ಬಂಧಿಸಿದ್ದಾರೆ. ಆದರೆ ಆರೋಪಿಗಳ ವಿಚಾರಣೆ ವೇಳೆ ಸ್ಫೋಟ ಮಾಹಿತಿ ಬೆಳಕಿಗೆ ಬಂದಿದ್ದು, ಬೆಂಗಳೂರು ನಗರದಲ್ಲಿನ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ತಿರುವು ಸಿಕ್ಕಂತಾಗಿದೆ.

ವಿಚಾರಣೆ ವೇಳೆ ಪ್ರಚಾರದ ಹುಚ್ಚಿನಿಂದ ಹಲ್ಲೆ ಮಾಡಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಧರ್ಮದ ಬಗ್ಗೆ ವಿಡಿಯೋ ಮಾಡಿದರೆ ಪ್ರಚಾರ ಸಿಗುತ್ತದೆ. ಆದರೆ ಹೀಗೆ ಉಲ್ಟಾ ಆಗುತ್ತೆ ಎಂದು ಊಹೆ ಮಾಡಿರಲಿಲ್ಲ. ಸಣ್ಣ ಸಣ್ಣ ವಿಡಿಯೋಗಳನ್ನು ಫೇಸ್‌ಬುಕ್‌ನಲ್ಲಿ ಹಾಕುತ್ತಿದ್ದೆ. ಅದರಂತೆ ಈ ವಿಡಿಯೋ ಸಹ ಅಪ್‌ಲೋಡ್ ಮಾಡಿದ್ದೆ. ಸುದ್ದಿ ವೈರಲ್ ಆಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ್ದೆ ಎಂದು ಸುದ್ದುಗುಂಟೆಪಾಳ್ಯ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ನೀಡಿದ ಮಹಿಳೆ ಪೊಲೀಸರ ವಿಚಾರಣೆ ವೇಳೆ ಅಂದು ರಾತ್ರಿ ತಡವಾಗಿ ಬಂದಿದಕ್ಕೆ ಮಹಿಳೆ ಕಾರಣ ನೀಡಿದ್ದಾರೆ. ಘಟನೆ ನಡೆದ ದಿನವೇ ಮಹಿಳೆ ಅವರ ಬ್ಯಾಂಕ್​ನಲ್ಲಿ ಸನ್ಮಾನ ಮಾಡಲಾಗಿತ್ತು. ಶುಕ್ರವಾರ ಬೆಸ್ಟ್ ಎಂಪ್ಲಾಯ್ ಅವಾರ್ಡ್ ಅಂತ ಲ್ಯಾಪ್​ಟ್ಯಾಪ್​ ಕೊಟ್ಟು ಸನ್ಮಾನ ಮಾಡಿದ್ದರು. ಇದೇ ಕಾರಣಕ್ಕೆ ತಡ ಆಗುತ್ತದೆ ಮನೆಗೆ ಬರೋದು ಅಂತ ಗಂಡನಿಗೆ ಕರೆ ಮಾಡಿದ್ದಾರೆ. ಹೀಗಾಗಿ ತನ್ನ ಜೊತೆ ಕೆಲಸ ಮಾಡುತ್ತಿದ್ದ ಮಹೇಶ್ ಜೊತೆ ಬರುವುದಾಗಿ ಹೇಳಿದ್ದರು. ಕಾರ್ಯಕ್ರಮ ಮುಗಿಸಿ ಬರೋದಕ್ಕೆ ರಾತ್ರಿ 9 ಗಂಟೆ ಆಯ್ತು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ವಿಡಿಯೋದಲ್ಲಿ ಹಲ್ಲೆ ಮಾಡಿರುವ ವ್ಯಕ್ತಿ ಸೊಹೇಲ್ ಮತ್ತು ವಿಡಿಯೋ ಮಾಡಿದ್ದ ವ್ಯಕ್ತಿ ನಯಾಜ್. ನಯಾಜ್​ ಖಾಸಗಿ ಕಾಲೇಜಿನಲ್ಲಿ ಇಂಜನಿಯರಿಂಗ್ ವಿದ್ಯಾರ್ಥಿ. ಸೊಹೇಲ್ ಮಾತು ಕೇಳಿ ವಿಡಿಯೋ ಮಾಡಿ ಭವಿಷ್ಯ ಹಾಳು ಮಾಡಿಕೊಂಡೆ ಎಂದು ಪೊಲೀಸರ ವಿಚಾರಣೆ ವೇಳೆ ಆರೋಪಿ ಸಯಾಜ್​ ಕಣ್ಣೀರು ಹಾಕಿದ್ದಾನೆ.

ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ತಿಳಿಸಿದ್ದರು. ಕೆಲ ದಿನಗಳ ಹಿಂದೆ ಡೈರಿ ಸರ್ಕಲ್ ಫ್ಲೈ ಓವರ್ ಬಳಿ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಹಲ್ಲೆಯ ವಿಡಿಯೋ ಮೊನ್ನೆಯಿಂದ ವೈರಲ್ ಆಗಿತ್ತು. ಘಟನಾ ಸ್ಥಳ, ಬಾತ್ಮೀದಾರರು ನೀಡಿದ ಮಾಹಿತಿಯ ಅನ್ವಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ತರಬೇತಿಗೆ ಬಾರದೆ ಸತಾಯಿಸುತ್ತಿದ್ದ ಎಂದು ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿದ ಕೋಚ್, ವಿದ್ಯಾರ್ಥಿ ಕೈಮುರಿತ

ಬುರ್ಖಾಧಾರಿ ಮಹಿಳೆ ಜತೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ಮೇಲೆ ಹಲ್ಲೆ: ಇಬ್ಬರ ಬಂಧನ; ಕಠಿಣ ಕ್ರಮದ ಭರವಸೆ ನೀಡಿದ ಸಿಎಂ

ತಾಜಾ ಸುದ್ದಿ

Related Stories

Click on your DTH Provider to Add TV9 Kannada