ತರಬೇತಿಗೆ ಬಾರದೆ ಸತಾಯಿಸುತ್ತಿದ್ದ ಎಂದು ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿದ ಕೋಚ್, ವಿದ್ಯಾರ್ಥಿ ಕೈಮುರಿತ

ಕೊಡಗಿನ ಪೊನ್ನಂಪೇಟೆಯಲ್ಲಿರುವ ಸಾಯಿ ಕ್ರೀಡಾ ಶಾಲೆಯಲ್ಲಿ ವಿದ್ಯಾರ್ಥಿಗೆ ಹಾಕಿ ಸ್ಟಿಕ್‌ನಿಂದ ಕೋಚ್ ಬುಟ್ಟಿಯಂಡ ಚಂಗಪ್ಪ ಹೊಡೆದಿದ್ದಾರೆ ಎಂದು ಕೋಚ್ ವಿರುದ್ಧ ವಿಪುಲ್ ಉತ್ತಪ್ಪ ಪೋಷಕರು ಆರೋಪ ಮಾಡಿದ್ದು ಆಕ್ರೋಶ ಹೊರ ಹಾಕಿದ್ದಾರೆ.

ತರಬೇತಿಗೆ ಬಾರದೆ ಸತಾಯಿಸುತ್ತಿದ್ದ ಎಂದು ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿದ ಕೋಚ್, ವಿದ್ಯಾರ್ಥಿ ಕೈಮುರಿತ
ತರಬೇತಿಗೆ ಬಾರದೆ ಸತಾಯಿಸುತ್ತಿದ್ದ ಎಂದು ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿದ ಕೋಚ್, ವಿದ್ಯಾರ್ಥಿ ಕೈಮುರಿತ

ಮಡಿಕೇರಿ: ಪೊನ್ನಂಪೇಟೆಯ ಸಾಯಿ ಕ್ರೀಡಾ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ಕೋಚ್ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕೋಚ್, ವಿದ್ಯಾರ್ಥಿಗೆ ಹಾಕಿ ಸ್ಟಿಕ್‌ನಿಂದ ಹೊಡೆದಿರುವ ಆರೋಪ ಕೇಳಿ ಬಂದಿದ್ದು ಕ್ರೀಡಾ ಹಾಸ್ಟೆಲ್‌ನ ವಿದ್ಯಾರ್ಥಿಯ ಕೈ ಮುರಿದಿದೆ. ವಿಪುಲ್ ಉತ್ತಪ್ಪ(13) ಎಂಬ ವಿದ್ಯಾರ್ಥಿಗೆ ಕೈಮುರಿದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಡಗಿನ ಪೊನ್ನಂಪೇಟೆಯಲ್ಲಿರುವ ಸಾಯಿ ಕ್ರೀಡಾ ಶಾಲೆಯಲ್ಲಿ ವಿದ್ಯಾರ್ಥಿಗೆ ಹಾಕಿ ಸ್ಟಿಕ್‌ನಿಂದ ಕೋಚ್ ಬುಟ್ಟಿಯಂಡ ಚಂಗಪ್ಪ ಹೊಡೆದಿದ್ದಾರೆ ಎಂದು ಕೋಚ್ ವಿರುದ್ಧ ವಿಪುಲ್ ಉತ್ತಪ್ಪ ಪೋಷಕರು ಆರೋಪ ಮಾಡಿದ್ದು ಆಕ್ರೋಶ ಹೊರ ಹಾಕಿದ್ದಾರೆ. ಘಟನೆಯಲ್ಲಿ ವಿಪುಲ್ ಕೈ ಮುರಿದಿದ್ದು ಮಡಿಕೇರಿಯ ಕಿಮ್ಸ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು ಘಟನೆ ಸಂಬಂಧ ಸ್ಪಷ್ಟನೆ ನೀಡಿದ ಕೋಚ್ ಬುಟ್ಟಿಯಂಡ ಚಂಗಪ್ಪ, ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಯನ್ನು ಥಳಿಸಿಲ್ಲ. ವಿದ್ಯಾರ್ಥಿ ತರಬೇತಿಗೆ ಬಾರದೆ ಸತಾಯಿಸುತ್ತಿದ್ದ. ಇದು ಆಕಸ್ಮಿಕವಾಗಿ ನಡೆದಿದೆ ಎಂದು ಟಿವಿ9ಗೆ ಕೋಚ್ ಬುಟ್ಟಿಯಂಡ ಚಂಗಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳನ್ನು ಹೊರದಬ್ಬಲಾಗಿದೆ, 11 ಅಧ್ಯಾಪಕರ ಅಮಾನತು; ವಿಶ್ವಭಾರತಿ ಕ್ಯಾಂಪಸ್​​ನಲ್ಲಿ ವಿಸಿ ವಿರುದ್ಧ ಆರೋಪ- ಪ್ರತ್ಯಾರೋಪ, ಪ್ರತಿಭಟನೆ

ರಾಣೆಬೆನ್ನೂರಿನ ದರ್ಗಾ ಮಾರುಕಟ್ಟೆಯಲ್ಲಿ ಬೆಂಕಿ; 200ಕ್ಕೂ ಹೆಚ್ಚು ಅಂಗಡಿ ಭಸ್ಮ

Read Full Article

Click on your DTH Provider to Add TV9 Kannada