ಮಡಿಕೇರಿ: ಆಸ್ತಿ ಆಸೆಗೆ ವಿಕಲಚೇತನ ವ್ಯಕ್ತಿಯನ್ನೇ ಕೊಲೆಗೈದ ಚಿಕ್ಕಪ್ಪ; ಆರೋಪಿಗಳನ್ನು ಬಂಧಿಸಿದ ಪೊಲೀಸರು

Crime News: ಮುಕ್ಕಾಲು ಎಕರೆ ಕಾಫಿ ತೋಟ ಹೊಂದಿದ್ದ ಉದಯ್ ಕುಮಾರ್ ಅವಿವಾಹಿತನಾಗಿದ್ದರು. ವಿಕಲಾಂಗ ಚೇತನ ವ್ಯಕ್ತಿ ಆಗಿದ್ದರು. ಉದಯ್ ಕುಮಾರ್ ಆಸ್ತಿ ಮೇಲೆ ಚಿಕ್ಕಪ್ಪನಿಗೆ ಮೊದಲಿನಿಂದಲೂ ಕಣ್ಣು ಇತ್ತು ಎಂದು ತಿಳಿದುಬಂದಿದೆ.

ಮಡಿಕೇರಿ: ಆಸ್ತಿ ಆಸೆಗೆ ವಿಕಲಚೇತನ ವ್ಯಕ್ತಿಯನ್ನೇ ಕೊಲೆಗೈದ ಚಿಕ್ಕಪ್ಪ; ಆರೋಪಿಗಳನ್ನು ಬಂಧಿಸಿದ ಪೊಲೀಸರು
ಪ್ರಾತಿನಿದಿಕ ಚಿತ್ರ

ಮಡಿಕೇರಿ: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಳತ್ಮಾಡು ಗ್ರಾಮದಲ್ಲಿ ವಿಕಲಚೇತನ ವ್ಯಕ್ತಿಯನ್ನು ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ವಿಕಲಾಂಗ ಚೇತನ ಉದಯ್ ಕುಮಾರ್ (56) ಎಂಬವರು ಕೊಲೆಯಾದ ದುರ್ದೈವಿ ಆಗಿದ್ದಾರೆ. ಆಸ್ತಿಮೇಲಿನ ಆಸೆಗಾಗಿ ಸ್ವಂತ ಚಿಕ್ಕಪ್ಪನಿಂದಲೇ ಈ ಕೊಲೆ ನಡೆದಿದೆ ಎಂಬ ಬಗ್ಗೆ ಕೊಡಗು ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಹಾಗೂ ಯಶಸ್ವಿಯಾಗಿ ಪ್ರಕರಣವನ್ನು ಬೇಧಿಸಿದ್ದಾರೆ.

ಚಿಕ್ಕಪ್ಪ ಸುಂದರ, ಸುಂದರನ ಪುತ್ರ ಸಂದೀಪ, ಸ್ನೇಹಿತ ಸುಲೈಮಾನ್ ಕೊಲೆ‌ ಆರೋಪಿಗಳಾಗಿದ್ದಾರೆ. 50 ಕ್ಕೂ ಅಧಿಕ ಬಾರಿ‌ ಮರ್ಮಾಂಗಕ್ಕೆ ಗುದ್ದಿ ಕೊಲೆ ಮಾಡಿರುವ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ. ಕೊಲೆಗೂ ಮುನ್ನ ಕಂಠಪೂರ್ತಿ ಮಧ್ಯ ಕುಡಿಸಿದ್ದರು. ಮತ್ತಿನಲ್ಲಿದ್ದ ಉದಯ್ ಅವರನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಕೊಲೆ ಮಾಡಿದ್ದರು. ಕೊಲೆ ಬಳಿಕ ಆರೋಪಿಗಳು ಹೆಣವನ್ನು ಮರಳಿ ಮನೆಗೆ ತಂದಿಟ್ಟಿದ್ದರು. ಮರುದಿನ ಸಹಜ ಸಾವೆಂದು ಬಿಂಬಿಸಿ ಅಂತ್ಯ ಸಂಸ್ಕಾರದ ನಾಟಕ ಮಾಡಿದ್ದರು.

ಮರ್ಮಾಂಗದಲ್ಲಿ ರಕ್ತ ಸೋರಿಕೆ ಹಿನ್ನೆಲೆ ಗ್ರಾಮಸ್ಥರಲ್ಲಿ ಸಂಶಯ ಮೂಡಿತ್ತು. ಹೀಗಾಗಿ ಗ್ರಾಮಸ್ಥರಿಂದ ಪೊಲೀಸರಿಗೆ ದೂರು ಕೊಡಲಾಗಿತ್ತು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು. ಆ ಬಳಿಕ, ತನಿಖೆ ನಡೆಸಿದಾಗ ನಿಜ ವಿಚಾರ ಬಯಲಾಗಿದ್ದು ಈಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮುಕ್ಕಾಲು ಎಕರೆ ಕಾಫಿ ತೋಟ ಹೊಂದಿದ್ದ ಉದಯ್ ಕುಮಾರ್ ಅವಿವಾಹಿತನಾಗಿದ್ದರು. ವಿಕಲಾಂಗ ಚೇತನ ವ್ಯಕ್ತಿ ಆಗಿದ್ದರು. ಉದಯ್ ಕುಮಾರ್ ಆಸ್ತಿ ಮೇಲೆ ಚಿಕ್ಕಪ್ಪನಿಗೆ ಮೊದಲಿನಿಂದಲೂ ಕಣ್ಣು ಇತ್ತು ಎಂದು ತಿಳಿದುಬಂದಿದೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ: ಮಂಗಳೂರು: ಸರ್ಕಾರಿ ಕಚೇರಿಯಲ್ಲಿದ್ದ ಮೂವರು ಮಹಿಳೆಯರ ಮೇಲೆ ತಲ್ವಾರ್​ನಿಂದ ಹಲ್ಲೆ

ಇದನ್ನೂ ಓದಿ: ಒಂದೇ ಕುಟುಂಬದ 5 ಮಂದಿ ಆತ್ಮಹತ್ಯೆ ಪ್ರಕರಣ: ಪೊಲೀಸರಿಗೆ ಸಿಕ್ಕಿದ್ದು ಒಟ್ಟು 27 ಪುಟಗಳ ಡೆತ್ ನೋಟ್!

Read Full Article

Click on your DTH Provider to Add TV9 Kannada