ನವ ಭಾರತಕ್ಕಾಗಿ ಯುವ ಭಾರತ: ವಿದ್ಯಾರ್ಥಿಗಳೊಂದಿಗೆ ಸಚಿವ ರಾಜೀವ್ ಚಂದ್ರಶೇಖರ್​​​ ಸಂವಾದ

|

Updated on: Mar 16, 2023 | 8:02 PM

ನವ ಭಾರತಕ್ಕಾಗಿ ಯುವ ಭಾರತ ಸಂವಾದ ಕಾರ್ಯಕ್ರಮದಲ್ಲಿ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ​

ನವ ಭಾರತಕ್ಕಾಗಿ ಯುವ ಭಾರತ: ವಿದ್ಯಾರ್ಥಿಗಳೊಂದಿಗೆ ಸಚಿವ ರಾಜೀವ್ ಚಂದ್ರಶೇಖರ್​​​ ಸಂವಾದ
ಸಚಿವ ರಾಜೀವ್ ಚಂದ್ರಶೇಖರ್
Image Credit source: news18.com
Follow us on

ಬೆಂಗಳೂರು: ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿ​ “ನವ ಭಾರತಕ್ಕಾಗಿ ಯುವ ಭಾರತ” (Young India for New India) ಸಂವಾದ ಕಾರ್ಯಕ್ರಮವನ್ನು ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅವರು ನಾಳೆಯಿಂದ (ಮಾ. 17) ಮೂರು ದಿನಗಳು ಅಧಿಕೃತ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ವೇಳೆ ಬೆಂಗಳೂರಿನ ಶ್ರೀ ಕೃಷ್ಣ ರಾಜೇಂದ್ರ ರಜತ ಮಹೋತ್ಸವ ತಾಂತ್ರಿಕ ಸಂಸ್ಥೆಯ (SKSJTI) ವಿದ್ಯಾರ್ಥಿಗಳೊಂದಿಗೆ IndiaTechade ನಲ್ಲಿ ಯುವ ಭಾರತೀಯರಿಗೆ ಲಭ್ಯವಿರುವ ಅವಕಾಶಗಳ ಬಗ್ಗೆ ಮಾತನಾಡಲಿದ್ದಾರೆ. ಈ ಉಪಕ್ರಮದ ಭಾಗವಾಗಿ, ಸಚಿವರು ಕಳೆದ 18 ತಿಂಗಳುಗಳಲ್ಲಿ ದೇಶಾದ್ಯಂತ 43 ಕಾಲೇಜುಗಳಿಗೆ ಭೇಟಿ ನೀಡಿದ್ದು ವಿದ್ಯಾರ್ಥಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಿಗಳೊಂದಿಗೆ ನವ ಭಾರತದಲ್ಲಿ ಅವರಿಗೆ ಲಭ್ಯವಿರುವ ಅವಕಾಶಗಳು ಮತ್ತು ಭಾರತ ಟೆಕ್ಕೇಡ್​ನ್ನು ವೇಗಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಯತ್ನಗಳ ಕುರಿತು ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ: DK Shivakumar: ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾವಾಗ? ನಾಳೆ ಸಿಗಲಿದೆ ಉತ್ತರ

ಇಂತಹ ಸೆಷನ್‌ಗಳನ್ನು ವಿದ್ಯಾರ್ಥಿಗಳು, ಕಾಲೇಜು ಅಧಿಕಾರಿಗಳು ಉತ್ತಮವಾಗಿ ಸ್ವೀಕರಿಸುತ್ತಾರೆ. ಮತ್ತು ಇವು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿವೆ. ಸ್ವತಃ ಚಿಪ್ ಡಿಸೈನರ್ ಮತ್ತು ಯಶಸ್ವಿ ಉದ್ಯಮಿಯಾಗಿರುವ ರಾಜೀವ್ ಚಂದ್ರಶೇಖರ್ ತಮ್ಮ ಜೀವನ ಪಯಣದ ಸ್ವಾರಸ್ಯಕರ ಪ್ರಸಂಗಗಳನ್ನು ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: Mangaluru: ಪಿಹೆಚ್​ಡಿ ಪದವಿ ಪಡೆದ 80ರ ಸಾಧಕ, ಮುಗಿಲು ಮುಟ್ಟಿದ ಚಪ್ಪಾಳೆ

ಕೌಶಲ್ಯಗಳು, ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಸ್ಟಾರ್ಟ್‌ಅಪ್‌ಗಳ ಪರಿಸರ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯುವ ಅಧಿವೇಶನದಲ್ಲಿ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:02 pm, Thu, 16 March 23