ಕಷ್ಟ ಹೇಳಿಕೊಂಡು ಬಂದ ವಿದ್ಯಾರ್ಥಿಗೆ ನಿಂತಲ್ಲೇ ವಿಮಾನ ಟಿಕೆಟ್ ಬುಕ್ ಮಾಡಿಕೊಟ್ಟ ಸಚಿವ ಜಮೀರ್ ಅಹ್ಮದ್

| Updated By: ಆಯೇಷಾ ಬಾನು

Updated on: Aug 23, 2023 | 2:50 PM

Zameer Ahmed Khan: ಹೆಬ್ಬಾಳದ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಮೊಹಮ್ಮದ್ ತಾಹೀರ್ ಆಮೀರ್​ಗೆ ಸಚಿವ ಜಮೀರ್ ಸಹಾಯ ಮಾಡಿದರು. ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಸ್ ಸ್ಪರ್ಧೆಯಲ್ಲಿ ಭಾಗಿಯಾಗಲು 60 ಸಾವಿರ ರೂ ವೆಚ್ಚದ ಟಿಕೆಟ್ ಬುಕ್ ಮಾಡಿಕೊಂಡರು. ಟಿಕೆಟ್ ಮಾಡಿಸಿ ಶುಭ ಹಾರೈಸಿದರು.

ಕಷ್ಟ ಹೇಳಿಕೊಂಡು ಬಂದ ವಿದ್ಯಾರ್ಥಿಗೆ ನಿಂತಲ್ಲೇ ವಿಮಾನ ಟಿಕೆಟ್ ಬುಕ್ ಮಾಡಿಕೊಟ್ಟ ಸಚಿವ ಜಮೀರ್ ಅಹ್ಮದ್
ವಿದ್ಯಾರ್ಥಿಗೆ ನಿಂತಲ್ಲೇ ವಿಮಾನ ಟಿಕೆಟ್ ಬುಕ್ ಮಾಡಿಕೊಟ್ಟ ಸಚಿವ ಜಮೀರ್
Follow us on

ಬೆಂಗಳೂರು, ಆ.23: ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್(Zameer Ahmed Khan) ಸಹಾಯ ಮಾಡಿದ್ದು ಸ್ಥಳದಲ್ಲೇ ವಿಮಾನದ ಟಿಕೆಟ್ ಬುಕ್ ಮಾಡಿಕೊಟ್ಟಿದ್ದಾರೆ. ಸಚಿವ ಜಮೀರ್ ಅಹ್ಮದ್ ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು. ಈ ವೇಳೆ ಹೆಬ್ಬಾಳದ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಮೊಹಮ್ಮದ್ ತಾಹೀರ್ ಆಮೀರ್​ಗೆ ಸಚಿವ ಜಮೀರ್ ಸಹಾಯ ಮಾಡಿದರು.

ಸೆ.19 ರಿಂದ 24 ವರೆಗೆ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಸ್ ಸ್ಪರ್ಧೆಗೆ ವಿದ್ಯಾರ್ಥಿ ಮೊಹಮ್ಮದ್ ತಾಹೀರ್ ಆಯ್ಕೆ ಆಗಿದ್ದು ಆರ್ಥಿಕ ಸಂಕಷ್ಟದಿಂದಾಗಿ ಇಂಡೋನೇಷ್ಯಾಗೆ ತೆರಳಿ ಸ್ಪರ್ಧೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂದು ಸಚಿವ ಜಮೀರ್ ಅಹ್ಮದ್ ಅವರನ್ನು ಭೇಟಿ ಮಾಡಿ ವಿದ್ಯಾರ್ಥಿ ತಾಹೀರ್ ಹಾಗೂ ಕುಟುಂಬ ಅಳಲು ತೋಡಿಕೊಂಡಿತ್ತು. ಸಮಸ್ಯೆ ತಿಳಿಯುತ್ತಿದ್ದಂತೆಯೇ ಸಚಿವ ಜಮೀರ್ ಅಹ್ಮದ್ ತಕ್ಷಣ ತಮ್ಮ ವೈಯಕ್ತಿಕ ವೆಚ್ಚದಲ್ಲಿ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ. ಸ್ಥಳದಲ್ಲೇ ಸ್ಪರ್ಧೆಗೆ ಹೋಗಿ ಬರುವ ವಿಮಾನ ವೆಚ್ಚ 60 ಸಾವಿರ ರೂ. ಟಿಕೆಟ್ ಮಾಡಿಸಿ ಶುಭ ಹಾರೈಸಿದ್ದಾರೆ. ಸಚಿವರು ಸಮಸ್ಯೆ ಆಲಿಸಿ ಕ್ಷಣ ಮಾತ್ರದಲ್ಲೇ ಸಹಾಯ ಮಾಡಿದ ಬಗ್ಗೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ 8 ಯೋಜನೆಗಳು ಜಾರಿ: ಯಾವುವು? ಜಮೀರ್ ಅಹ್ಮದ್ ಹೇಳಿದ್ದಿಷ್ಟು

ಸಚಿವ ಜಮೀರ್ ಅಹ್ಮದ್ ಖಾನ್ ಸಹಾಯ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಬಾರಿ ಸಹಾಯ ಮಾಡಿದ್ದಾರೆ. ಸಹಾಯ ಕೇಳಿ ತಮ್ಮ ಬಳಿ ಬರುವವರನ್ನು ನಿರಾಸೆ ಮಾಡದೆ ಸಹಾಯ ಮಾಡುವ ಮನೋಭಾವ ಜಮೀರ್ ಅವರದು. ತಮ್ಮ ಜೇಬಲ್ಲಿ ಹಣವಿದ್ದರೆ ಅದು ಎಷ್ಟಿದೆ ಎಂದು ಲೆಕ್ಕವೂ ಹಾಕದೆ ಸಹಾಯಕ್ಕೆ ಕೈವೊಡ್ಡಿದವರಿಗೆ ಅರ್ಪಿಸಿಬಿಡುತ್ತಾರೆ. ಮಾಜಿ ಸಚಿವ ಡಾ. ಸುಧಾಕರ್​ ಸಹಾಯ ಮಾಡದ ಮಹಿಳೆಗೆ ಸ್ಥಳದಲ್ಲೇ ಸಹಾಯ ಮಾಡಿ ಜಮೀರ್ ಮಾನವೀಯತೆ ಮೆರೆದಿದ್ದರು.​

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:56 pm, Wed, 23 August 23