ಪ್ರಯಾಣಿಕರ ಹಣ ಉಳಿಸಲು ಷೇರ್​ ಆಟೋರಿಕ್ಷಾ ಮೀಟರ್​ ತಯಾರಿಸಿದ ಬೆಂಗಳೂರಿನ ವ್ಯಕ್ತಿ

ಕೋಲ್ಕತ್ತಾ, ಹೈದರಾಬಾದ್‌ ನಗರಗಳಲ್ಲಿ ಶೇರಿಂಗ್​ ಆಟೋರಿಕ್ಷಾಗಳಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿಗೂ ಕಾಲಿಡಲಿವೆ. ಈ ಶೇರಿಂಗ್​ ಆಟೋರಿಕ್ಷಾಗಳಿಗೆ ಈ ಮೀಟರ್​​​​​ ಅಳವಡಿಸುವುದರಿಂದ ಇದರಿಂದ ಚಾಲಕರಿಗೆ ಹೆಚ್ಚು ಲಾಭವಾಗುತ್ತದೆ. ಆಟೋ ಚಾಲಕರು ಕಡಿಮೆ ಪ್ರಯಾಣದಲ್ಲಿ ಹೆಚ್ಚು ಹಣವನ್ನು ಗಳಿಸಬಹುದು.

ಪ್ರಯಾಣಿಕರ ಹಣ ಉಳಿಸಲು ಷೇರ್​ ಆಟೋರಿಕ್ಷಾ ಮೀಟರ್​ ತಯಾರಿಸಿದ ಬೆಂಗಳೂರಿನ ವ್ಯಕ್ತಿ
ಮೀಟರ್​ ತಯಾರಿಸಿ ಷಣ್ಮಗಂ
Follow us
ವಿವೇಕ ಬಿರಾದಾರ
|

Updated on: Aug 23, 2023 | 1:09 PM

ಬೆಂಗಳೂರು: ಶೇರಿಂಗ್​ ಮೇಲೆ ಅಪರಿಚಿತರೊಂದಿಗೆ ಆಟೋದಲ್ಲಿ (Auto) ಪ್ರಯಾಣ ಮಾಡಿ ಕೊನೆಗೆ ಹಣ ನೀಡುವ ಸಂದರ್ಭದಲ್ಲಿ ಕೆಲವೊಂದು ಸಾರಿ ಒಬ್ಬರಿಗೆ ಜಾಸ್ತಿ ಅಥವಾ ಕಡಿಮೆ ಬರುವುದುಂಟು ಇದರಿಂದ ಗೊಂದಲವಾಗುತ್ತದೆ. ಇದನ್ನು ತಡೆಯಲು (Share Auto Meter) ಬೆಂಗಳೂರಿನ 54 ವರ್ಷದ ಷಣ್ಮುಗಂ “ಲೆಕ್ಕಾಚಾರ ಮಾಡವ ಡಿಜಿಟಲ್ ಆಟೋರಿಕ್ಷಾ ಮೀಟರ್” ಅನ್ನು ತಯಾರಿಸಿದ್ದಾರೆ. ಕೊರೊನಾ ಮೊದಲನೇ ಅಲೆಯಲ್ಲಿ ಷಣ್ಮುಗಂ ಅವರು ಸಾಫ್ಟ್‌ವೇರ್ ಇಂಜಿನಿಯರ್ ಆದ ಪುತ್ರಿಯ ಸಹಾಯದಿಂದ ಈ ಮೀಟರ್​​ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಈ ಮೀಟರ್​​ ಅನ್ನು ಆಟೋರಿಕ್ಷಾಗಳಲ್ಲಿ ಅಳವಡಿಸಲು ಅನುಮತಿ ನೀಡುವಂತೆ ಆರ್‌ಟಿಒ ಸಿಬ್ಬಂದಿಯನ್ನು ಭೇಟಿ ಮಾಡಿದೆ. ಆದರೆ ಅವರು ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡುವವರೆಗೆ ಆಟೋರಿಕ್ಷಾಗಳಲ್ಲಿ ಈ ಮೀಟರ್​​ ಅಳವಡಿಸಲು ಸಾಧ್ಯವಿಲ್ಲ ಅಂತ ಜಾರಿಕೊಂಡರು ಎಂದು ಷಣ್ಮುಗಂ ಹೇಳಿದರು. ಕಳೆದ ತಿಂಗಳು ಆಟೋರಿಕ್ಷಾ ಚಾಲಕರ ಒಕ್ಕೂಟ (ARDU) ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ ಸಭೆಯಲ್ಲಿ ನನ್ನ ಮೀಟರ್ ಬಗ್ಗೆ ಚರ್ಚಿಸಿದ್ದಾರೆ. ಅಲ್ಲಿಯೂ ಕಾನೂನು ತೊಡಕು ಅಡ್ಡ ಬಂತು ಎಂದು ಹೇಳಿದರು.

ಷಣ್ಮುಗಂ ಅವರು 10ನೇ ತರಗತಿವರೆಗು ಮಾತ್ರ ಓದಿದ್ದಾರೆ. ಇವರು ಖಾಸಗಿ ಎಲೆಕ್ಟ್ರಿಕ್​​ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸಿದ್ದಾರೆ. ನಂತರ ಕೆಲ ದಿನಗಳ ಕಾಲ ಆಟೋ ಚಾಲಕರಾಗಿ ಕೆಲಸ ಮಾಡಿದ್ದಾರೆ. ಇದೀಗ ಮೀಟರ್ ತಯಾರಿಕಾ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹೃದಯಾಘಾತಕ್ಕೆ ಆಟೋ ಚಾಲಕ ಬಲಿ, ಎದೆ ನೋವಿನಿಂದ ಒದ್ದಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕೋಲ್ಕತ್ತಾ, ಹೈದರಾಬಾದ್‌ ನಗರಗಳಲ್ಲಿ ಶೇರಿಂಗ್​ ಆಟೋರಿಕ್ಷಾಗಳಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿಗೂ ಕಾಲಿಡಲಿವೆ. ಈ ಶೇರಿಂಗ್​ ಆಟೋರಿಕ್ಷಾಗಳಿಗೆ ಈ ಮೀಟರ್​​​​​ ಅಳವಡಿಸುವುದರಿಂದ ಇದರಿಂದ ಚಾಲಕರಿಗೆ ಹೆಚ್ಚು ಲಾಭವಾಗುತ್ತದೆ. ಆಟೋ ಚಾಲಕರು ಕಡಿಮೆ ಪ್ರಯಾಣದಲ್ಲಿ ಹೆಚ್ಚು ಹಣವನ್ನು ಗಳಿಸಬಹುದು ಎಂದರು.

ಇದು ಹೇಗೆ ಕೆಲಸ ಮಾಡುತ್ತದೆ

ಒಬ್ಬ ವ್ಯಕ್ತಿ ಒಂದು ಸ್ಥಳದಿಂದ ಆಟೋ ಹತ್ತಿ ತಾನು ತಲುಪಬೇಕಾದ ಸ್ಥಳವನ್ನು ತಲುಪುವ ಮುನ್ನ ಮಧ್ಯೆದಲ್ಲಿಯೇ ಇಳಿದರೂ ಆತ ಸಂಪೂರ್ಣ ಹಣವನ್ನು ಕೊಡಬೇಕಾಗುತ್ತದೆ. ಆದರೇ ಈ ಮೀಟರ್​ ಅಳವಡಿಸಿದರೇ ಆತ ಪೂರ್ತಿ ಹಣ ಕೊಡಬೇಕಾಗಿಲ್ಲ. ಈ ಮೀಟರ್​​ ಆತನು ಎಷ್ಟು ದೂರ ಪ್ರಯಾಣ ಮಾಡಿದ್ದಾನೆ ಎಂದು ಲೆಕ್ಕ ಹಾಕುತ್ತದೆ. ನಂತರ ಮೀಟರ್​​ ಎಷ್ಟು ಚಾರ್ಜ್​ ಆಯ್ತು ಅಂತ ತೋರಿಸುತ್ತದೆ. ಇದರಿಂದ ಪ್ರಯಾಣಿಕನಿಗೂ ಹಣ ಉಳಿಯುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ