ಡ್ರ್ಯಾಗರ್ ಹಿಡಿದು ಫ್ಯಾಕ್ಟರಿಯೊಳಕ್ಕೆ ನುಗ್ಗಿದ ದುಷ್ಕರ್ಮಿ, ಕಾರ್ಮಿಕರು ದಿಕ್ಕಾಪಾಲು!

|

Updated on: Feb 06, 2020 | 1:25 PM

ಬೆಂಗಳೂರು: ಹಾಡಹಗಲೇ ದುಷ್ಕರ್ಮಿಯೊಬ್ಬ ಡ್ರ್ಯಾಗರ್ ಹಿಡಿದು ಫ್ಯಾಕ್ಟರಿಗೆ ನುಗ್ಗಿ ಸುಲಿಗೆಗೆ ಯತ್ನಿಸಿರುವ ಘಟನೆ ಬೆಂಗಳೂರು ಹೊರವಲಯದ ತಾತಗುಣಿ ಬಳಿ ಅಗರ ಗ್ರಾಮದ ಮೆಟ್ರೋ ಪ್ಲಾಂಟ್ ಸಮೀಪದ ಟಾರ್ಪಲಿನ್ ಫ್ಯಾಕ್ಟರಿಯಲ್ಲಿ ನಡೆದಿದೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಡ್ರ್ಯಾಗರ್ ಹಿಡಿದು ದುಷ್ಕರ್ಮಿ ಫ್ಯಾಕ್ಟರಿಯೊಳಕ್ಕೆ ನುಗ್ಗಿ ಅಲ್ಲಿದ್ದ ಕಾರ್ಮಿಕರನ್ನ ಬೆದರಿಸಿದ್ದಾನೆ. ಫ್ಯಾಕ್ಟರಿಯಲ್ಲಿ 15 ಕ್ಕೂ ಹೆಚ್ಚು ಜನರು ಕೆಲಸ ಮಾಡ್ತಿದ್ದರು. ಡ್ರ್ಯಾಗರ್ ಹಿಡಿದು ಒಳನುಗ್ಗಿದ್ದ ದುಷ್ಕರ್ಮಿಯನ್ನು ಕಂಡು ಅಲ್ಲಿದ್ದ ಕಾರ್ಮಿಕರು ಭಯಗೊಂಡಿದ್ದಾರೆ. ದಿಕ್ಕಾಪಾಲಾಗಿ ಓಡಿದ್ದಾರೆ. ಸುಲಿಗೆಕೋರನ ಸಂಪೂರ್ಣ ಚಲನವಲನ […]

ಡ್ರ್ಯಾಗರ್ ಹಿಡಿದು ಫ್ಯಾಕ್ಟರಿಯೊಳಕ್ಕೆ ನುಗ್ಗಿದ ದುಷ್ಕರ್ಮಿ, ಕಾರ್ಮಿಕರು ದಿಕ್ಕಾಪಾಲು!
Follow us on

ಬೆಂಗಳೂರು: ಹಾಡಹಗಲೇ ದುಷ್ಕರ್ಮಿಯೊಬ್ಬ ಡ್ರ್ಯಾಗರ್ ಹಿಡಿದು ಫ್ಯಾಕ್ಟರಿಗೆ ನುಗ್ಗಿ ಸುಲಿಗೆಗೆ ಯತ್ನಿಸಿರುವ ಘಟನೆ ಬೆಂಗಳೂರು ಹೊರವಲಯದ ತಾತಗುಣಿ ಬಳಿ ಅಗರ ಗ್ರಾಮದ ಮೆಟ್ರೋ ಪ್ಲಾಂಟ್ ಸಮೀಪದ ಟಾರ್ಪಲಿನ್ ಫ್ಯಾಕ್ಟರಿಯಲ್ಲಿ ನಡೆದಿದೆ.

ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಡ್ರ್ಯಾಗರ್ ಹಿಡಿದು ದುಷ್ಕರ್ಮಿ ಫ್ಯಾಕ್ಟರಿಯೊಳಕ್ಕೆ ನುಗ್ಗಿ ಅಲ್ಲಿದ್ದ ಕಾರ್ಮಿಕರನ್ನ ಬೆದರಿಸಿದ್ದಾನೆ. ಫ್ಯಾಕ್ಟರಿಯಲ್ಲಿ 15 ಕ್ಕೂ ಹೆಚ್ಚು ಜನರು ಕೆಲಸ ಮಾಡ್ತಿದ್ದರು. ಡ್ರ್ಯಾಗರ್ ಹಿಡಿದು ಒಳನುಗ್ಗಿದ್ದ ದುಷ್ಕರ್ಮಿಯನ್ನು ಕಂಡು ಅಲ್ಲಿದ್ದ ಕಾರ್ಮಿಕರು ಭಯಗೊಂಡಿದ್ದಾರೆ. ದಿಕ್ಕಾಪಾಲಾಗಿ ಓಡಿದ್ದಾರೆ. ಸುಲಿಗೆಕೋರನ ಸಂಪೂರ್ಣ ಚಲನವಲನ ಫ್ಯಾಕ್ಟರಿಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ.