ಬೆಂಗಳೂರಿನಲ್ಲಿ ಸದ್ದು ಮಾಡುತ್ತಿವೆ ಲಾಂಗು, ಮಚ್ಚು: ಹಣಕ್ಕಾಗಿ ಮಾರಕಾಸ್ತ್ರಗಳಿಂದ ಹಲ್ಲೆ, ಮತ್ತೊಂದೆಡೆ ಹುಡುಗಿಗಾಗಿ ಲಾಂಗ್​ ಹಿಡಿದು ಮಾರಾಮಾರಿ

| Updated By: ಆಯೇಷಾ ಬಾನು

Updated on: Sep 20, 2022 | 12:14 PM

ಪ್ಲೇವುಡ್ ಅಂಗಡಿಗೆ ಏಕಾಏಕಿ ನುಗ್ಗಿದ ಕೆಲ ಯುವಕರು ಹಣ ಕೊಡುವಂತೆ ಡಿಮ್ಯಾಂಡ್ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಅಂಗಡಿ ಮಾಲೀಕ ಪನ್ನಾ ಲಾಲ್ ಮೇಲೆ ಹಲ್ಲೆ ಮಾಡ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರಿನಲ್ಲಿ ಸದ್ದು ಮಾಡುತ್ತಿವೆ ಲಾಂಗು, ಮಚ್ಚು: ಹಣಕ್ಕಾಗಿ ಮಾರಕಾಸ್ತ್ರಗಳಿಂದ ಹಲ್ಲೆ, ಮತ್ತೊಂದೆಡೆ ಹುಡುಗಿಗಾಗಿ ಲಾಂಗ್​ ಹಿಡಿದು ಮಾರಾಮಾರಿ
ಹಣಕ್ಕಾಗಿ ಮಾರಕಾಸ್ತ್ರಗಳಿಂದ ಹಲ್ಲೆ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಪೊಲೀಸರು ಅಂದ್ರೆ ಭಯವೇ ಇಲ್ಲದಂತಾಗುತ್ತಿದೆ. ಹಾಡ ಹಗಲೇ ಯುವಕರು ಲಾಂಗ್, ಮಚ್ಚು ಹಿಡಿದು ಸಾರ್ವಜನಿಕರನ್ನು ಬೆದರಿಸುತ್ತಿರುವ ಘಟನೆ ನಗರದಲ್ಲಿ ನಡೆದಿದೆ.

ಸೆ. 2ರ ಮಧ್ಯಾಹ್ನ ಹೆಣ್ಣೂರು ಠಾಣಾ ವ್ಯಾಪ್ತಿಯ ಪ್ಲೇವುಡ್ ಅಂಗಡಿಗೆ ಏಕಾಏಕಿ ನುಗ್ಗಿದ ಕೆಲ ಯುವಕರು ಹಣ ಕೊಡುವಂತೆ ಡಿಮ್ಯಾಂಡ್ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಅಂಗಡಿ ಮಾಲೀಕ ಪನ್ನಾ ಲಾಲ್ ಮೇಲೆ ಹಲ್ಲೆ ಮಾಡ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆ. 2ರಂದು ಖದೀಮರು ಮಚ್ಚು ಹಿಡಿದು ಹಣ ಕೊಡು ಇಲ್ಲವಾದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರಂತೆ. ಬಳಿಕ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾಗಿದ್ದು, ಈ ವೇಳೆ ಭಯದಿಂದ ಮಾಲೀಕ ಕಿರುಚಿಕೊಂಡಿದ್ದ. ಇದೇ ವೇಳೆ ಅಕ್ಕಪಕ್ಕದ ಜನ ಸೇರುತ್ತಿದ್ದಂತೆ, ಅಲ್ಲಿಂದ ಖದೀಮರು ಕಾಲ್ಕಿತ್ತಿದ್ದರು. ಸದ್ಯ ಖದೀಮರ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಹುಡುಕಾಡುತ್ತಿದ್ದಾರೆ.

ಹುಡುಗಿ ವಿಚಾರಕ್ಕೆ ಯುವಕರ ಮಾರಾಮಾರಿ

ಇನ್ನು ಮತ್ತೊಂದು ಕಡೆ ಬೆಂಗಳೂರಿನ ಕ್ವೀನ್ಸ್​​ ರಸ್ತೆಯಲ್ಲಿ ಕೆಲ ಯುವಕರು ಹುಡುಗಿ ವಿಚಾರಕ್ಕೆ ಮಾರಾಮಾರಿ ಮಾಡಿಕೊಂಡಿದ್ದಾರೆ. ಲಾಂಗ್​ ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ನಗರ ಪೊಲೀಸ್ ಆಯಕ್ತರ ಕಚೇರಿ ಬಳಿಯೇ ಘಟನೆ ನಡೆದಿದ್ದು ಘಟನೆ ಕುರಿತು ವಿಧಾನಸೌಧ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಗಲಾಟೆಯ ವಿಡಿಯೋ ವೈರಲ್ ಆಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ