ಬೆಂಗಳೂರಿನ ಪ್ರತಿಷ್ಠಿತ ​ಹೋಟೆಲ್​ಗೆ ಬಾಂಬ್ ಬೆದರಿಕೆ ಸಂದೇಶ

| Updated By: ರಮೇಶ್ ಬಿ. ಜವಳಗೇರಾ

Updated on: Nov 11, 2024 | 10:22 PM

ಬೆಂಗಳೂರಿನಲ್ಲಿ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್​ ಬರುತ್ತಿದ್ದವು. ಈಗ ಬೆಂಗಳೂರಿನ ಐಷಾರಾಮಿ ಹೋಟೆಲ್​ಗಳಿಗೂ ಬಾಂಬ್ ಬೆದರಿಕೆ ಇ-ಮೇಲ್​ಗಳು ಬರುಲು ಶುರುವಾಗಿವೆ. ಈಗ ಮತ್ತೊಂದು ಬೆಂಗಳೂರಿನ ಐಬಿಎಸ್ ಹೋಟೆಲ್​ಗೆ ಬಾಂಬ್​ ಬೆದರಿಕೆ ಬಂದಿದೆ.

ಬೆಂಗಳೂರಿನ ಪ್ರತಿಷ್ಠಿತ ​ಹೋಟೆಲ್​ಗೆ ಬಾಂಬ್ ಬೆದರಿಕೆ ಸಂದೇಶ
ಐಬಿಎಸ್ ಹೋಟೆಲ್
Follow us on

ಬೆಂಗಳೂರು, (ನವೆಂಬರ್ 11): ಬೆಂಗಳೂರಿನ ಐಬಿಎಸ್ ಹೋಟೆಲ್​ಗೆ ಬಾಂಬ್ ಬೆದರಿಕೆ ಬಂದಿದೆ. ರಾಜಾರಾಮ್ ಮೋಹನ್ ರಾಯ್ ರಸ್ತೆಯಲ್ಲಿರುವ ಐಬಿಎಸ್ ಹೋಟೆಲ್ ಮೇಲ್ ಐಡಿಗೆ ಅಪರಿಚಿತರಿಂದ ಬೆದರಿಕೆ ಸಂದೇಶ ಬಂದಿದೆ. ಇದನ್ನು ನೋಡಿ ನೋಡಿ ಹೋಟೆಲ್​ ಸಿಬ್ಬಂದಿ ಕೆಲ ಕಾಲ ಆತಂಕಗೊಂಡಿದ್ದು, ಕೂಡಲೇ ಸಂಪಂಗಿರಾಮನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಶ್ವಾನ ದಳ, ಬಾಂಬ್ ಪತ್ತೆ ದಳ ದೌಡಾಯಿಸಿ ಹೋಟೆಲ್​ನಲ್ಲಿದ್ದ ಎಲ್ಲರನ್ನೂ ಹೊರಗೆ ಕಳುಹಿಸಿ ತಪಾಸಣೆ ನಡೆಸಿದರು.

ಇಂದು (ನವೆಂಬರ್ 11) ಸಂಜೆ 7 ಗಂಟೆ ಸುಮಾರಿಗೆ ಯಾವುದೇ ಹೋಟೆಲ್ ಹೆಸರು ಅಥವಾ ಸ್ಥಳ ಉಲ್ಲೇಖಿಸದೆ ಐಬಿಎಸ್ ಹೋಟೆಲ್ ಮೇಲ್ ಐಡಿಗೆ ಅಪರಿಚಿತರು ಬೆದರಿಕೆ ಸಂದೇಶ ಕಳುಹಿಸಿದ್ದು, ಯಾವುದೇ ಕ್ಷಣದಲ್ಲಿ ಸ್ಫೋಟವಾಗಬಹುದು ಎಂದು ಉಲ್ಲೇಖಿಸಿದ್ದಾರೆ. ಬಾಂಬ್ ಬೆದರಿಕೆ ಸಂದೇಶ ನೋಡಿ ಹೋಟೆಲ್ ಸಿಬ್ಬಂದಿ ಕೂಡಲೇ ಸಂಪಂಗಿರಾಮನಗರ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಶ್ವಾನ ದಳ, ಬಾಂಬ್ ಪತ್ತೆ ದಳ ಐಬಿಎಸ್ ಹೋಟೆಲ್​ನಲ್ಲಿ ತಪಾಸಣೆ ನಡೆಸಿದೆ. ಆದ್ರೆ, ಹೋಟೆಲ್​ನಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಖಾಸಗಿ ಹೋಟೆಲ್​​ಗೆ ಬಾಂಬ್ ಬೆದರಿಕೆ ಪತ್ರ: ಗ್ರಾಹಕರನ್ನು ಹೊರಕಳಿಸಿ ಪೊಲೀಸರಿಂದ ಪರಿಶೀಲನೆ

ಕಳೆದ ಸೆಪ್ಟೆಂಬರ್​ನಲ್ಲಿ ನಗರದ ತಾಜ್ ವೆಸ್ಟೆಂಡ್ ಹೋಟೆಲ್ ಗೆ ಇ ಮೇಲ್ ಮೂಲಕ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿದ್ದರು. ಇದು ನಗರದ ಲಕ್ಷುರಿ ಹೊಟೇಲ್‌ ಗಳಲ್ಲಿ ಒಂದಾಗಿದ್ದು, ರಾಜಕಾರಣಿಗಳು, ಕ್ರಿಕೆಟರ್ ಗಳು, ಸಿನೆಮಾ ತಾರೆಯರು ಆಗಾಗ ವಾಸ್ತವ್ಯ ಹೂಡುವ ಪ್ರತಿಷ್ಠಿತ ಹೋಟೆಲ್ ಆಗಿದೆ. ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು, ಬಾಂಬ್ ಸ್ಕ್ವಾಡ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಗೊತ್ತಾಯಿತು.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಸಂಸ್ಥೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಮೇಲ್‌ಗಳನ್ನು ಕಳುಹಿಸುವ ಬೆದರಿಕೆ ಹೆಚ್ಚುತ್ತಿದೆ. ಈವರೆಗೆ ಬಂದಿರುವುದೆಲ್ಲ ನಕಲಿ ಎಂದು ಬಳಿಕ ತನಿಖೆಯಿಂದ ತಿಳಿದಿದೆ. ಆದರೂ ಕಳೆದ ಮಾರ್ಚ್ 1 ರಂದು ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದ ಬಳಿಕ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಕೂಡ ನಗರದ ಕೆಲವು ಫೈವ್‌ ಸ್ಟಾರ್ ಹೊಟೇಲ್‌ ಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.