ಬೆಂಗಳೂರು: ಬೆಂಗಳೂರಿನ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಕ್ಯಾಸಿನೋ ಅಡ್ಡ ತಲೆಯೆತ್ತಿದೆ. ಕೊವಿಡ್ ಆರ್ಥಿಕ ದುಸ್ಥಿತಿಯಲ್ಲಿ ಬಡವರು ಜೂಜು ಆಟವಾಡಿ ಮತ್ತಷ್ಟು ವಿಷಮಯ ಸನ್ನಿವೇಶ ಸೃಷ್ಟಿಯಾಗುತ್ತಿದೆ ಎಂದು ಖುದ್ದು ಶಾಸಕ ಕೆ ಜೆ ಜಾರ್ಜ್ ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಮತ್ತು ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಡ್ರಗ್ ಕೇಸ್ ನಲ್ಲಿ ಗೋವಾ ಕ್ಯಾಸಿನೊ ಜೂಜು ಅಡ್ಡೆ ಬಿಸಿನೆಸ್ ಪಾಯಿಂಟ್ ಆಗಿ ಸ್ಯಾಂಡಲ್ ವುಡ್ ವಿವಾದಕ್ಕೆ ಗ್ರಾಸವಾಗಲು ಕಾರಣವಾಗಿತು. ಈಗ ಬೆಂಗಳೂರಿನ ಅಕ್ರಮ ಕ್ಯಾಸಿನೋ ಅಡ್ಡೆ ಬಾರಿ ಕೋಲಾಹಾಲ ಸೃಷ್ಟಿಸುವ ಸಂಕೇತಗಳು ಕಾಣುತ್ತಿದೆ ಎಂದು ಶಾಸಕ ಕೆ ಜೆ ಜಾರ್ಜ್ ಪತ್ರದಲ್ಲಿ ತಿಳಿಸಿದ್ದಾರೆ.
ಸರ್ವಜ್ಞ ನಗರ ಶಾಸಕ ಕೆ ಜೆ ಜಾರ್ಜ್ ಪೊಲೀಸ್ ಮಹಾ ನಿರ್ದೇಶಕರು ,ಕಮೀನಷರ್ ಎಲ್ಲರಿಗೂ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಅಕ್ರಮ ಕ್ಯಾಸಿನೋ ನಿಲ್ಲಿಸಲು ಪತ್ರ ಮೂಲಕ ಮಾಹಿತಿ ಕೊಡಲಾಗಿದೆ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ವೀಸ್ ರಸ್ತೆ ಹೆಚ್ ಆರ್ ಬಿ ಆರ್ ಬಡಾವಣೆ ಹಾಗೂ ಕಮ್ಮನಹಳ್ಳಿ ಮುಖ್ಯ ರಸ್ತೆಗಳಲ್ಲಿ ಕ್ಯಾಸಿನೋ ಜೂಜು ಅಡ್ಡೆ ತಲೆಯೆತ್ತಿದೆ. ಜೂಜು ಅಡ್ಡೆಗಳಿಂದ ಕಾನೂನು ಅಪರಾಧಗಳು ಹೆಚ್ಚಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:
(MLA KJ George writes a letter Illegal casino raid in Sarvajna Nagar to home minister and DGP IGP and police commissioner)