ವರ್ಷಪೂರ್ತಿ ಆಗುವ ಮಾಲಿನ್ಯ ಗಣೇಶ ಹಬ್ಬದಂದೇ ನೆನಪಾಗುವುದೇಕೆ? ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಶ್ನೆ

ವರ್ಷಪೂರ್ತಿ ಆಗುವ ಮಾಲಿನ್ಯ ಗಣೇಶ ಹಬ್ಬದಂದೇ ನೆನಪಾಗುವುದೇಕೆ? ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಶ್ನೆ
ಗಣೇಶ

ಗಣೇಶ ಆಚರಣೆಗೆ ನಿರ್ಬಂಧ ಹೇರಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ಅವರು, ಗಣಪತಿ ಹಬ್ಬದ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಆಚರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

TV9kannada Web Team

| Edited By: Praveen Sahu

Sep 07, 2021 | 8:57 PM

ಬೆಂಗಳೂರು: ಅರಿಶಿನ ಗಣಪತಿ ಮಾತ್ರ ಪ್ರತಿಷ್ಠಾಪಿಸಿ ಎಂಬ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮನವಿಯನ್ನು ತಿರಸ್ಕರಿಸಿದ್ದಾಗಿ ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ತಿಳಿಸಿದೆ. ಈಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು, ವರ್ಷಪೂರ್ತಿ ವಿವಿಧ ಕಾರಣಗಳಿಂದಾಗಿ ಪರಿಸರ ಮಾಲಿನ್ಯವಾಗುತ್ತದೆ. ಆದರೆ ಗಣಪತಿ ಹಬ್ಬ ಬಂದಾಗ ಮಾತ್ರ ಮಾಲಿನ್ಯದ ಎಂದು ನೆನಪಿಗೆ ಬರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ? ಅಲ್ಲದೇ, ಈ ರೀತಿ ಬುದ್ದಿವಾದ ಹೇಳುವುದನ್ನೂ ಬಿಡುವಂತೆ ಅವರು ಮನವಿ ಮಾಡಿದ್ದಾರೆ. ಎನ್.ಡಿ.ಎ. ಆಕ್ಟ್ ಉಲ್ಲಂಘಿಸಿ ನಾವು ಗಣಪತಿಯನ್ನ ಕೂರಿಸುತ್ತೇವೆ. ಸರ್ಕಾರ ಪ್ರಕರಣ ದಾಖಲಿಸಿದರೂ ನಾವು ಹೆದರುವುದಿಲ್ಲ ಎಂದು ಅವರು ತಮ್ಮ ನಿಲುವನ್ನು ತಿಳಿಸಿದ್ದಾರೆ.

ಒಂದಾನುವೇಳೆ ಸರ್ಕಾರ ಕೊವಿಡ್ ಲಸಿಕಾ ಅಭಿಯಾನಕ್ಕೆ ಅವಕಾಶ ಮಾಡಿಕೊಟ್ಟರೆ ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಅಭಿಯಾನ ನಡೆಸಲಿದೆ. ಈಗಾಗಲೇ ಶಾಲೆಗಳು ಆರಂಭವಾಗಿವೆ. ಉದ್ಯಮಗಳು ಸಹಜ ಸ್ಥಿತಿಗೆ ಜನಜೀವನ ಹಿಂತಿರುಗುತ್ತಿದೆ. ಕೊವಿಡ್ ನಿಯಮ ಪಾಲನೆ ಮಾಡುವ ಕುರಿತು ಜನರಲ್ಲಿ ಜಾಗೃತಿ ಬಂದಿದೆ. ಈಗಾಗಲೇ ಸಾರ್ವಜನಿಕರು ಸರ್ಕಾರದ ನಿಯಮ ಪಾಲನೆ ಮಾಡುತ್ತಿದ್ದಾರೆ. ಹೀಗಿದ್ದರೂ ಗಣೇಶ ಆಚರಣೆಗೆ ನಿರ್ಬಂಧ ಹೇರಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ಅವರು, ಗಣಪತಿ ಹಬ್ಬದ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಆಚರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: 

ಗಣೇಶೋತ್ಸವ ಆಚರಣೆಗೆ ಕಳೆದ ಬಾರಿಗಿಂತ ಹೆಚ್ಚು ಅವಕಾಶ; ಸೆಪ್ಟೆಂಬರ್ 5ಕ್ಕೆ ಅಂತಿಮ ತೀರ್ಮಾನ: ಆರ್ ಅಶೋಕ್

ವಿನಾಯಕ ಚತುರ್ಥಿಗೆ ಈ ಬಾರಿ ಮುಹೂರ್ತ ಯಾವುದು, ಗಣೇಶನನ್ನು ಕೂಡಿಸುವುದು ಹೇಗೆ, ಪೂಜಾ ವಿಧಾನ ಹೇಗೆ?

Follow us on

Related Stories

Most Read Stories

Click on your DTH Provider to Add TV9 Kannada