ವಿನಾಯಕ ಚತುರ್ಥಿಗೆ ಈ ಬಾರಿ ಮುಹೂರ್ತ ಯಾವುದು, ಗಣೇಶನನ್ನು ಕೂಡಿಸುವುದು ಹೇಗೆ, ಪೂಜಾ ವಿಧಾನ ಹೇಗೆ?

ವಿನಾಯಕ ಚತುರ್ಥಿಗೆ ಈ ಬಾರಿ ಮುಹೂರ್ತ ಯಾವುದು, ಗಣೇಶನನ್ನು ಕೂಡಿಸುವುದು ಹೇಗೆ, ಪೂಜಾ ವಿಧಾನ ಹೇಗೆ?
ವಿನಾಯಕ ಚತುರ್ಥಿಗೆ ಈ ಬಾರಿ ಮುಹೂರ್ತ ಯಾವುದು, ಗಣೇಶನನ್ನು ಕೂಡಿಸುವುದು ಹೇಗೆ, ಪೂಜಾ ವಿಧಾನ ಏನು?

Ganesh Chaturthi 2021 Date : ಪ್ರತಿ ತಿಂಗಳೂ ಚತುರ್ಥಿಯ ದಿನ ಗಣಪ್ಪನನ್ನು ಭಾವ ಭಕ್ತಿಯಿಂದ ಜಪಿಸಿ, ನಮಿಸುತ್ತಾರೆ. ಆದರೆ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಅತ್ಯಂತ ದೊಡ್ಡ ಮಟ್ಟದಲ್ಲಿ ಗಣೇಶನ ಹಬ್ಬ ಆಚರಿಸುತ್ತಾರೆ. ಏಕೆಂದರೆ ಗಣೇಶನ ಜನ್ಮ ದಿನ ಇದಾಗಿದೆ. ಈ ದಿನ ಗಣಪ್ಪನನ್ನು ಮನೆಗೆ ತಂದು ಶಕ್ತ್ಯಾನುಸಾರ ಬೆಸ ದಿನಗಳ ಕಾಲ ಪೂಜಿಸುತ್ತಾರೆ.

TV9kannada Web Team

| Edited By: sadhu srinath

Sep 07, 2021 | 4:57 PM

ವಿನಾಯಕ ಚತುರ್ಥಿಗೆ ಈ ಬಾರಿ ಮುಹೂರ್ತ ಯಾವುದು, ಗಣೇಶನನ್ನು ಕೂಡಿಸುವುದು ಹೇಗೆ, ಪೂಜಾ ವಿಧಾನ ಏನು? ಎಂಬುದನ್ನು ತಿಳಿದುಕೊಳ್ಳೋಣ. ಈ ಬಾರಿ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನದಿಂದ ಗಣೇಶೋತ್ಸವ ಪ್ರಾರಂಭವಾಗುತ್ತದೆ. ಚತುರ್ಥಿ ದಿನ ವಿನಾಯಕನನ್ನು ಮನೆಗೆ ತಂದು ಪ್ರತಿಷ್ಠಾಪಿಸಿ 5, 7 ಅಥವಾ 20 ದಿನಗಳ ಕಾಲ ಭಕ್ತಿಯಿಂದ ಪೂಜೆ ಪುನಸ್ಕಾರ ಮಾಡುತ್ತಾರೆ. ಕೊನೆಯಲ್ಲಿ ಅಂತಿಮ ದಿನ ವಿಸರ್ಜನೆಯನ್ನು ಅತ್ಯಂತ ವಿಜೃಂಭಣೆಯಿಂದ ಮಾಡುತ್ತಾರೆ.

ಹಾಗೆ ನೋಡಿದರೆ ಪ್ರತಿ ತಿಂಗಳೂ ಚತುರ್ಥಿಯ ದಿನ ಗಣಪ್ಪನನ್ನು ಭಾವ ಭಕ್ತಿಯಿಂದ ಜಪಿಸಿ, ನಮಿಸುತ್ತಾರೆ. ಆದರೆ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಅತ್ಯಂತ ದೊಡ್ಡ ಮಟ್ಟದಲ್ಲಿ ಗಣೇಶನ ಹಬ್ಬ ಆಚರಿಸುತ್ತಾರೆ. ಏಕೆಂದರೆ ಗಣೇಶನ ಜನ್ಮ ದಿನ ಇದಾಗಿದೆ. ಈ ದಿನ ಗಣಪ್ಪನನ್ನು ಮನೆಗೆ ತಂದು ಶಕ್ತ್ಯಾನುಸಾರ ಬೆಸ ದಿನಗಳ ಕಾಲ ಪೂಜಿಸುತ್ತಾರೆ. ಕೆಲವರು ಅಂದೇ ಗಣೇಶನನ್ನು ವಿಸರ್ಜಿಸುತ್ತಾರೆ. ಈ ಬಾರಿ ಗಣೇಶನ ಹಬ್ಬ ಸೆಪ್ಟೆಂಬರ್ 19 ಶುಕ್ರವಾರದಂದು ಬಂದಿದೆ. ಬನ್ನೀ ಹಾಗಾದರೆ ವಿನಾಯಕ ಚತುರ್ಥಿಗೆ ಈ ಬಾರಿ ಮುಹೂರ್ತ ಯಾವುದು, ಗಣೇಶನನ್ನು ಕೂಡಿಸುವುದು ಹೇಗೆ, ಪೂಜಾ ನಿಯಮ ಏನು? ತಿಳಿದುಕೊಳ್ಳೋಣ.

ಗಣಪತಿ ಪ್ರತಿಷ್ಠಾಪನೆಗೆ ಪಾಲಿಸಬೇಕಾದ ನಿಯಮಗಳು ಏನು?:

ಗಣೇಶನ ಹಬ್ಬಕ್ಕಾಗಿ ಹಿಂದಿನ ದಿನ ಅಥವಾ ಚತುರ್ಥಿಯ ದಿನವೇ ಬೆಳಗ್ಗೆಯೇ ಎದ್ದು ಸ್ನಾನ ಮಾಡಿ, ಶುಭ್ರ ಬಟ್ಟೆ ತೊಟ್ಟು ಪರಿವಾರದೊಟ್ಟಿಗೆ ಮಾರುಕಟ್ಟೆಗೆ ಹೋಗಿ ಗಣೇಶನ ವಿಗ್ರಹವನ್ನು ಖರೀದಿಸಿ ತರಬೇಕು. ಜೊತೆಗೆ ಬರುವಾಗ ಗಣೇಶನ ತಾಯಿ ಗೌರಿಯ ಪುಟ್ಟ ವಿಗ್ರಹವನ್ನೂ ತರ ಬೇಕು. ಮಣ್ಣಿನ ವಿಗ್ರಹ ಶ್ರೇಷ್ಠ ಮತ್ತು ಪ್ರಕೃತಿದತ್ತವಾಗಿಯೂ ಇರುತ್ತದೆ. ಹಾಗಾಗಿ ಪ್ಲಾಸ್ಟರ್​ ಆಫ್​ ಪ್ಯಾರಿಸ್​ ಅಥವಾ ಮತ್ಯಾವುದೇ ರಾಸಾಯನಿಕಗಳನ್ನು ಬಳಸಿ, ತಯಾರಿಸಿದ ವಿಗ್ರಹಗಳನ್ನು ತರಬಾರದು. ಜೊತೆಗೆ ಸಂಪ್ರೀತನಾಗಿ ಕುಳಿತಿರುವ ಗಣಪ್ಪನನ್ನೇ ಮನೆಗೆ ತರಬೇಕು, ನಿಂತಿರುವ ಅಥವಾ ನಾಟ್ಯ ಮಾಡುತ್ತಿರುವ ಗಣಪ್ಪನನ್ನು ತರಬಾರದು. ಗಣಪನ ಸೊಂಡಿಲು ಬಲಗಡೆಗೆ ಇರುವ ಬಲಮುರಿ ಗಣಪನನ್ನು ತರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗಣಪನ ಬಳಿ ಮೂಷಕ ಇರಬೇಕು.

ಮನೆಗೆ ತರುವಾಗ ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಅರ ಮೇಲೆ ಗಣಪ್ಪನನ್ನು ಕೂಡಿಸಿಕೊಂಡು ಬರಬೇಕು. ಮನೆಗೆ ಬರಲು ಸಿದ್ಧವಿರುವ ಗಣಪನಿಗೆ ಮನೆಯ ಮಹಿಳೆಯರು ಆರತಿ ಎತ್ತಿ ಒಳ ಬರಮಾಡಿಕೊಳ್ಳಬೇಕು. ಗಣಪನನ್ನು ಮನೆಗೆ ತಂದವರ ಹಣೆಗೆ ತಿಲಕವಿಡಬೇಕು. ಚೌಕ ಎಳೆದು, ಸ್ವಸ್ತಿಕ್​ ಚಿಹ್ನೆ ಬಿಡಿಸಿ, ಮಾವಿನ ಎಲೆ ಮೇಲೆ ಪೂರ್ವ ಅಥವಾ ಈಶಾನ್ಯ ದಿಕ್ಕಿನ ಕಡೆಗೆ ಮುಖ ಮಾಡಿ, ಕೂಡಿಸಬೇಕು. ಅಲ್ಲಿಂದ ಮುಂದಕ್ಕೆ ಗಣೇಶನ ಹಬ್ಬದ ವಿಧಿ ವಿಧಾನಗಳು, ನಿಯಮಗಳು ಆರಂಭವಾಗುತ್ತವೆ.

ಗಣಪ್ಪನ ಪೂಜಾ ನಿಯಮ ಹೀಗಿರುತ್ತದೆ:

ಶುಭ್ರ ಪೀಠದ ಮೇಲೆ ಗಣೇಶನನ್ನು ಪ್ರತಿಷ್ಠಾಪಿಸಬೇಕು. ಗಣಪತಿಗೆ ಪಂಚಾಮೃತದಿಂದ ಸ್ನಾನ ಮಾಡಿಸಬೇಕು. ಅದಾದ ಮೇಲೆ ಕೇಸರಿ, ಚಂದನ, ಅಕ್ಷತೆ, ಗರಿಕೆ, ಹೂವು ಇತ್ಯಾದಿಯಿಂದ ಆತನಿಗೆ ಇಷ್ಟವಾಗುವ ವಸ್ತುಗಳಿಂದ ಪೂಜಿಸಿಬೇಕು. ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿರುವವರಗೂ ಗಣೇಶ ಚತುರ್ಥಿಯ ಕತೆ, ಗಣೇಶ ಪುರಾಣ, ಗಣೇಶ ಚಾಲೀಸ್, ಗಣೇಶ ಸ್ತುತಿ, ಶ್ರೀ ಗಣೇಶ ಸಹಸ್ರನಾಮಾವಳಿ ಮಾಡುತ್ತಾ, ಗಣೇಶನಿಗೆ ಆರತಿ ಎತ್ತಬೇಕು. ಸಂಕಟನಿವಾರಕ ಗಣೇಶ ಸ್ರೋತ್ರ ಪಠಿಸಬೇಕು. ಗಣೇಶನನ್ನು ವಿಸರ್ಜಿಸುವವರೆಗೂ ಶ್ರದ್ಧಾ ಭಕ್ತಿಯಿಂದ ನಿಯಮಗಳನ್ನು ಪಾಲಿಸಬೇಕು. ಇದರಿಂದ ಗಣಪ್ಪನಿಗೆ ಖುಷಿಯಾಗಿ ಬೇಡಿದ ವರವನ್ನು ಈಡೇರಿಸುತ್ತಾನೆ.

ಇದನ್ನೂ ಓದಿ: 

ಕೋರಮಂಗಲದಲ್ಲಿ ಐಷಾರಾಮಿ ಕಾರು ಅಪಘಾತ; ಮೃತ ಯುವಕನೊಬ್ಬ ಪಕ್ಕದ ಹೊಸೂರು ಕ್ಷೇತ್ರದ ಶಾಸಕನ ಪುತ್ರ

ಕೋರಮಂಗಲದಲ್ಲಿ ಐಷಾರಾಮಿ ಕಾರು ಅಪಘಾತ; ಬೇರೆ ಬೇರೆ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಸ್ನೇಹಿತರು

(Ganesh Chaturthi 2021 Date muhurth Celebration puja method)

Follow us on

Most Read Stories

Click on your DTH Provider to Add TV9 Kannada