AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Goga Navami 2021; ಉತ್ತರ ಭಾರತದ ಗೋಗಾ ನವಮಿ ಆಚರಣೆ ಹೇಗೆ, ಇಲ್ಲಿದೆ ನೀವು ತಿಳಿಯಬೇಕಾದ ಸರ್ಪ ರಾಜನ ಹಬ್ಬದ ಮಹತ್ವ

ರಾಜಸ್ಥಾನದ ಹನುಮನಗರದಲ್ಲಿ ಮೂರು ದಿನಗಳ ಕಾಲ ಅದ್ದೂರಿ ಜಾತ್ರೆಗಳನ್ನು ಆಯೋಜಿಸಿ ಈ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಗವಾನ್ ಗೋಗ ಗುರು ಗೋರಕ್ಷನಾಥರ ಆರು ಶಿಷ್ಯರಲ್ಲಿ ಒಬ್ಬರಾಗಿದ್ದು ಅವರನ್ನು ಹಾವುಗಳ ಮಾಸ್ಟರ್ ಎಂದು ಪರಿಗಣಿಸಲಾಗಿದೆ.

Goga Navami 2021; ಉತ್ತರ ಭಾರತದ ಗೋಗಾ ನವಮಿ ಆಚರಣೆ ಹೇಗೆ, ಇಲ್ಲಿದೆ ನೀವು ತಿಳಿಯಬೇಕಾದ ಸರ್ಪ ರಾಜನ ಹಬ್ಬದ ಮಹತ್ವ
ಭಗವಾನ್ ಗೋಗ
TV9 Web
| Updated By: ಆಯೇಷಾ ಬಾನು|

Updated on: Aug 31, 2021 | 2:48 PM

Share

ಇಂದು (ಮಂಗಳವಾರ) ದೇಶದಾದ್ಯಂತ ಗೋಗ ನವಮಿಯನ್ನು(Goga Navami) ಆಚರಿಸಲಾಗುತ್ತಿದೆ. ಸರ್ಪಗಳು ಮತ್ತು ಹಾವುಗಳ ಮೇಲೆ ನಿಯಂತ್ರಣ ಹೊಂದಿದ್ದ ಭಗವಾನ್ ಗೋಗವನ್ನು ಪೂಜಿಸುವ ಸಲುವಾಗಿ ಈ ದಿನವನ್ನು ಗೋಗ ನವಮಿಯನ್ನಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮುಖ್ಯವಾಗಿ ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಮೂರು ದಿನಗಳವರೆಗೆ ಆಚರಿಸಲಾಗುತ್ತದೆ. ಮತ್ತು ಈ ಸಂದರ್ಭದಲ್ಲಿ ಭವ್ಯ ಮೇಳಗಳನ್ನು ಆಯೋಜಿಸಿ ಸಂಭ್ರಮಿಸಲಾಗುತ್ತದೆ.

ಭಗವಾನ್ ಗೋಗಗೆ ಸಮರ್ಪಿಸಲಾಗಿರುವ ಈ ಮಂಗಳಕರ ಹಬ್ಬವನ್ನು ಹಿಂದೂ ಪಂಚಾಂಗದ ಕೃಷ್ಣ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ. ಈ ದಿನವನ್ನು ಮುಖ್ಯವಾಗಿ ಡೋಗ್ರಾ ಸಮುದಾಯದವರು(Dogra community) ಆಚರಿಸುತ್ತಾರೆ. ಇವರು ಭಗವಾನ್ ಗೋಗದ ಆರಾಧಕರು.

ಗೋಗ ನವಮಿ 2021 ರ ದಿನಾಂಕ ಮತ್ತು ಸಮಯ ಉತ್ತರ ಭಾರತದ ರಾಜ್ಯಗಳಲ್ಲಿ ಜನಪ್ರಿಯ ಹಬ್ಬವಾದ ಗೋಗ ನವಮಿ ಆಗಸ್ಟ್ 31, 2021 ರಂದು ಆಚರಿಸಲಾಗುತ್ತದೆ. ಗೋಗ ನವಮಿಯ ಆಚರಣೆಗಳು ಇಂದು ಮುಂಜಾನೆ 2 ಗಂಟೆಗೆ ಆರಂಭವಾಗುತ್ತವೆ ಮತ್ತು ಸೆಪ್ಟೆಂಬರ್ 1 ರಂದು ಸಂಜೆ 4:23 ಕ್ಕೆ ಕೊನೆಗೊಳ್ಳುತ್ತವೆ.

ರಾಜಸ್ಥಾನದ ಹನುಮನಗರದಲ್ಲಿ ಮೂರು ದಿನಗಳ ಕಾಲ ಅದ್ದೂರಿ ಜಾತ್ರೆಗಳನ್ನು ಆಯೋಜಿಸಿ ಈ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಗವಾನ್ ಗೋಗ ಗುರು ಗೋರಕ್ಷನಾಥರ ಆರು ಶಿಷ್ಯರಲ್ಲಿ ಒಬ್ಬರಾಗಿದ್ದು ಅವರನ್ನು ಹಾವುಗಳ ಮಾಸ್ಟರ್ ಎಂದು ಪರಿಗಣಿಸಲಾಗಿದೆ.

ಗೋಗ ನವಮಿ ಮಹತ್ವ ಭಾದ್ರಪದ ತಿಂಗಳಲ್ಲಿ ನವಮಿ ತಿಥಿ, ಕೃಷ್ಣ ಪಕ್ಷ (ಚಂದ್ರನ ಚಕ್ರದ ಕರಾಳ ಹಂತ) ದಲ್ಲಿ ಜನಿಸಿದ ಗೋಗ ಮಹಾರಾಜರನ್ನು ಪೂಜಿಸಲು ಗೋಗ ನವಮಿ ಆಚರಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ, ಗೋಗ ಮಹಾರಾಜರಿಗೆ ದೈವಿಕ ಶಕ್ತಿಗಳಿವೆ ಎಂದು ನಂಬಲಾಗಿದೆ.

ಸಂತ ಗೋರಕ್ಷನಾಥನು ಮಗುವನ್ನು ಬಯಸಿದ ಬಂಚಲ್ ದೇವಿ ಎಂಬ ಮಹಿಳೆಯನ್ನು ಆಶೀರ್ವದಿಸಿದಾಗ ಭಗವಾನ್ ಗೋಗ ಜನಿಸಿದರು. ಗುರುಗಳು ದೇವಿಗೆ ‘ಗುಗ್ಗಲ್'(Guggal) ಹಣ್ಣು ನೀಡಿ ಆಶೀರ್ವದಿಸಿದರು. ಗುಗ್ಗಲ್ ಹಣ್ಣಿನಲ್ಲಿ ಹಲವಾರು ಔಷಧೀಯ ಪ್ರಯೋಜನಗಳಿವೆ ಮತ್ತು ಇದನ್ನು ಆಯುರ್ವೇದ ವೈದ್ಯರು ರೋಗಗಳ ಚಿಕಿತ್ಸೆಗಾಗಿ ಬಳಸುತ್ತಾರೆ.

ದೇವಿ ಹಣ್ಣು ಸೇವಿಸಿದಾಗ, ಗೋಗಾ ಎಂಬ ಮಗನಿಗೆ ಜನ್ಮ ನೀಡಿದಳು. ಗೋಗ ಸಂತ ಗೋರಕ್ಷನಾಥನನ್ನು ಪೂಜಿಸಲು ಪ್ರಾರಂಭಿಸಿದನು ಮತ್ತು ಅವರ ಶಿಷ್ಯನಾದನು.

ಗೋಗ ನವಮಿ ಪೂಜೆ ವಿಧಿ ನಂಬಿಕೆಗಳ ಪ್ರಕಾರ, ಭಗವಾನ್ ಗೋಗವು ಹಾವುಗಳನ್ನು ಸಲೀಸಾಗಿ ಪಳಗಿಸುತ್ತಿದ್ದರು ಹಾಗೂ ಹಾವಿ ಕಚ್ಚಿದ ಜನರನ್ನು ಸಾವಿನಿಂದ ರಕ್ಷಿಸುವಂತಹ ಶಕ್ತಿಯನ್ನು ಹೊಂದಿದ್ದರು. ಅವರ ಅನುಯಾಯಿಗಳು ಆತನ ದೈವಿಕ ಮತ್ತು ಪವಾಡದ ಶಕ್ತಿಗಳಿಗಾಗಿ ಅವರನ್ನು ಪೂಜಿಸುತ್ತಾರೆ. ಈ ಶುಭ ದಿನದಂದು, ದಂಪತಿ ಉಪವಾಸ ಮಾಡುತ್ತಾರೆ. ಮತ್ತು ಮಕ್ಕಳಿರುವವರು ಅವರ ಆಯಸ್ಸು, ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ. ಭಗವಾನ್ ಗೋಗವು ಮಕ್ಕಳನ್ನು ಅಪಾಯಗಳಿಂದ ರಕ್ಷಿಸುತ್ತಾರೆ ಎಂದು ನಂಬಲಾಗಿದೆ. ಮತ್ತು ಭಕ್ತರು ನವಮಿಯಂದು ರಾಖಿ ದಾರವನ್ನು ಕಟ್ಟುವ ಮೂಲಕ ಆತನ ಆಶೀರ್ವಾದವನ್ನು ಪಡೆಯುತ್ತಾರೆ.

ಇದನ್ನೂ ಓದಿ: ಕೊರೊನಾ ಸಂಕಷ್ಟಕ್ಕೆ ನಲುಗಿದ ಗಣಪತಿ ಮೂರ್ತಿ ತಯಾರಕರ ಬದುಕು; ಅತಂತ್ರ ಸ್ಥಿತಿಯಲ್ಲಿ ಕಲೆಗಾರರು

ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಕೆ ಶಿವಕುಮಾರ್
ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಕೆ ಶಿವಕುಮಾರ್
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?