Aja Ekadashi 2021: ಸತ್ಯ ಹರಿಶ್ಚಂದ್ರ ತನ್ನ ಪಾಪಗಳನ್ನು ಕಳೆದುಕೊಂಡಿದ್ದು ಇದೇ ಅಜ ಏಕಾದಶಿಯಂದು

TV9 Digital Desk

| Edited By: Ayesha Banu

Updated on:Sep 02, 2021 | 9:33 AM

ಅಜ ಏಕಾದಶಿ ದಿನದಂದೆ ವಿಷ್ಣು ಹರಿಶ್ಚದ್ರನ ಪುತ್ರನಿಗೆ ಪುನರ್ಜನ್ಮ ನೀಡಿ ತನ್ನ ಇಡೀ ರಾಜಮನೆತನವನ್ನು ಸಂಪತ್ತು ಹಿಂದಿರುಗಿಸಿದ ಎಂದು ನಂಬಲಾಗಿದೆ. ಹೀಗಾಗಿ ಅಜ ಏಕಾದಶಿ ವ್ರತವನ್ನು ಮಾಡುವುದರಿಂದ ಹಿಂದಿನ ಪಾಪಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

Aja Ekadashi 2021: ಸತ್ಯ ಹರಿಶ್ಚಂದ್ರ ತನ್ನ ಪಾಪಗಳನ್ನು ಕಳೆದುಕೊಂಡಿದ್ದು ಇದೇ ಅಜ ಏಕಾದಶಿಯಂದು
ವಿಷ್ಣು

ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವನ್ನು ಅಜಾ ಏಕಾದಶಿ ಅಥವಾ ಕಾಮಿಕಾ ಏಕಾದಶಿ ಎಂದು ಕರೆಯುತ್ತಾರೆ. ಈ ದಿನ ಉಪವಾಸವನ್ನು ಮಾಡಿ ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಪೂಜೆ ಮಾಡಿದ್ರೆ ಎಲ್ಲಾ ಸಂಕಷ್ಟಗಳು ದೂರವಾಗಿ, ಪಾಪಗಳಿಂದ ಮುಕ್ತಿ ದೊರೆತು ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗೂ ವಿಶೇಷವೆಂದರೆ ಧಾರ್ಮಿಕ ಗ್ರಂಥಗಳ ಪ್ರಕಾರ ಉಳಿದೆಲ್ಲಾ ಏಕಾದಶಿ ಉಪವಾಸವನ್ನು ಆಚರಿಸುವುದಕ್ಕಿಂತ ಹೆಚ್ಚಿನ ಫಲವನ್ನು ಅಜ ಏಕಾದಶಿ ಆಚರಿಸುವುದರಿಂದ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಅಜ ಏಕಾದಶಿ ಶುಭ ಮುಹೂರ್ತ ಈ ವರ್ಷ, ಅಜ ಅಥವಾ ಜಯ ಏಕಾದಶಿ ವ್ರತವನ್ನು ಪಂಚಾಂಗ ವ್ಯತ್ಯಾಸದಿಂದ ಎರಡು ದಿನಗಳ ಕಾಲ ಆಚರಿಸಲಾಗುತ್ತದೆ.

ಅಜ ಏಕಾದಶಿ ವ್ರತ 2021 ತಿಥಿ ಏಕಾದಶಿ ತಿಥಿ ಸೆಪ್ಟೆಂಬರ್ 2 ರಂದು ಬೆಳಿಗ್ಗೆ 6:21 ಕ್ಕೆ ಆರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 3 ರಂದು ಬೆಳಿಗ್ಗೆ 7:44 ಕ್ಕೆ ಕೊನೆಗೊಳ್ಳುತ್ತದೆ.

ಅಜ ಏಕಾದಶಿ ವ್ರತ ಮಹತ್ವ ಅಜ ಏಕಾದಶಿಯು ರಾಜ ಸತ್ಯ ಹರಿಶ್ಚಂದ್ರನ ಕಥೆಗೆ ಸಂಬಂಧ ಪಟ್ಟಿದೆ. ರಾಜ ಹರಿಶ್ಚಂದ್ರನು ಅತ್ಯಂತ ಸತ್ಯವಂತ ಮತ್ತು ವಿನಮ್ರನಾಗಿದ್ದನು. ಈತನ ಸತ್ಯತೆಯನ್ನು ಪರೀಕ್ಷಿಸಲು ದೇವತೆಗಳು ಮುಂದಾಗುತ್ತಾರೆ. ರಾಜ ಹರಿಶ್ಚಂದ್ರನ ಕನಸಿನಲ್ಲಿ ದೇವತೆಗಳು ಕಾಣಿಸಿಕೊಂಡು ಸಾಮ್ರಾಜ್ಯವನ್ನು ವಿಶ್ವಾಮಿತ್ರ ಋಷಿಗೆ ನೀಡುವಂತೆ ಹೇಳುತ್ತಾರೆ. ಅದರಂತೆಗೆ ಮರುದಿನ ಹರಿಶ್ಚಂದ್ರ ತನ್ನೆಲ್ಲ ಸಾಮ್ರಾಜ್ಯವನ್ನು ಋಷಿ ವಿಶ್ವಾಮಿತ್ರನಿಗೆ ನೀಡಿ ಹೊರ ನಡೆಯುತ್ತಾನೆ. ಹರಿಶ್ಚಂದ್ರನು ಹೊರಗೆ ಹೋಗುತ್ತಿದ್ದಂತೆ ವಿಶ್ವಾಮಿತ್ರನು ಆತನನ್ನು ತಡೆದು ನಿಲ್ಲಿಸಿ, 500 ಮುದ್ರಾಗಳನ್ನು ದೇಣಿಗೆಯಾಗಿ ನೀಡುವಂತೆ ಹೇಳುತ್ತಾನೆ. ಆಗ ವಿನಯದಿಂದ ಮಾತನಾಡಿದ ಹರಿಶ್ಚಂದ್ರ ನಿನಗೆ ಕೊಡಲು ನನ್ನ ಬಳಿ ಏನು ಇಲ್ಲ. ನನ್ನ ಮಗ, ನನ್ನ ಹೆಂಡತಿ ಬಿಟ್ಟು ಏನು ಉಳಿದಿಲ್ಲ ಎಂದು ಹೇಳುತ್ತಾನೆ. ಆದ್ರೆ ಮುದ್ರಾಗಳನ್ನು ನೀಡಲೇ ಬೇಕು ಎಂದು ಹೇಳಿದಾಗ ರಾಜ ತನ್ನ ಸಂಸ್ಕಾರವನ್ನು ಮಾರುತ್ತಾನೆ. ಬಳಿಕ ಸಂಸಾರದಿಂದ ದೂರವಾಗಿ ಸ್ಮಶಾನ ಕಾಯುವ ಕಾಯಕವನ್ನು ಮಾಡುತ್ತಾನೆ.

ಈ ರೀತಿ ಒಮ್ಮೆ ಸ್ಮಶಾನ ಕಾಯುವಾಗ ಒಂದು ದಿನ, ಗೌತಮ ಋಷಿ ಕರುಣಾಜನಕ ಸ್ಥಿತಿಯಲ್ಲಿ ನೋಡಿದಾಗ, ಹರಿಶ್ಚಂದ್ರನು ತನ್ನ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಂದ ಮುಕ್ತಿ ಹೊಂದಲು ಏಕಾದಶಿಯಂದು ಒಂದು ವ್ರತವನ್ನು ಆಚರಿಸಬೇಕೆಂದು ಸೂಚಿಸುತ್ತಾರೆ. ಆದ್ದರಿಂದ, ಹರಿಶ್ಚಂದ್ರನು ಏಕಾದಶಿ ತಿಥಿಯಂದು ವ್ರತವನ್ನು ಆಚರಿಸಿದನು. ಆತನ ಭಕ್ತಿ ಮತ್ತು ಸಮರ್ಪಣೆಯಿಂದ ಸಂತಸಗೊಂಡ ಭಗವಾನ್ ವಿಷ್ಣುವು ಅವನಿಗೆ ಸೇರಿದ ಎಲ್ಲವನ್ನೂ ಅನುಗ್ರಹಿಸಿದನು. ತನ್ನ ಪ್ರೀತಿಪಾತ್ರರನ್ನು ಮರಳಿ ಪಡೆದನು ಎಂದು ಹೇಳಲಾಗುತ್ತದೆ. ಹಾಗೂ ಮತ್ತೊಂದು ಕಡೆ ಅಜ ಏಕಾದಶಿ ದಿನದಂದೆ ವಿಷ್ಣು ಹರಿಶ್ಚದ್ರನ ಪುತ್ರನಿಗೆ ಪುನರ್ಜನ್ಮ ನೀಡಿ ತನ್ನ ಇಡೀ ರಾಜಮನೆತನವನ್ನು ಸಂಪತ್ತು ಹಿಂದಿರುಗಿಸಿದ ಎಂದು ನಂಬಲಾಗಿದೆ. ಹೀಗಾಗಿ ಅಜ ಏಕಾದಶಿ ವ್ರತವನ್ನು ಮಾಡುವುದರಿಂದ ಹಿಂದಿನ ಪಾಪಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: Lord Ganesha: ಪ್ರಥಮ ಪೂಜಿತ ಗಣೇಶನ ದೇಹದ ಅಂಗಾಂಗಗಳ ಮಹತ್ವ ನಿಮಗೆ ಗೊತ್ತೇ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada