ಈ 4 ರಾಶಿಯ ಜನರಿಗೆ ಮದುವೆ ಅಂದರೆ ಇಷ್ಟವೇ ಇರುವುದಿಲ್ಲ! ಹಾಗಾದರೆ, ನಿಮ್ಮ ರಾಶಿ ಯಾವುದು?

ಕೆಲವರು ಮದುವೆ ಅಂದರೆ ಅದರ ಬಗ್ಗೆಯೇ ಕನಸು ಕಾಣುತ್ತಿರುತ್ತಾರೆ. ಆ ಆಪ್ತ ದಿನದ ಬಗ್ಗೆ ಅವರಲ್ಲಿ ಅನೇಕ ಯೋಜನೆಗಳು, ಆಲೋಚನೆಗಳು ಮನೆ ಮಾಡಿರುತ್ತವೆ. ಕೆಲವರು ಮದುವೆ ಅಂದರೆ ಜೀವನೋತ್ಸಾಹದಿಂದ ಪುಟಿಯುತ್ತಿರುತ್ತಾರೆ.

ಈ 4 ರಾಶಿಯ ಜನರಿಗೆ ಮದುವೆ ಅಂದರೆ ಇಷ್ಟವೇ ಇರುವುದಿಲ್ಲ! ಹಾಗಾದರೆ, ನಿಮ್ಮ ರಾಶಿ ಯಾವುದು?
ಈ 3 ರಾಶಿಯ ಜನರು ಪ್ರೇಮ-ಪ್ರಣಯದ ಉತ್ಕರ್ಷದಲ್ಲಿ ಇರುತ್ತಾರೆ! ಯಾವುವು ಆ ರೋಮ್ಯಾಂಟಿಕ್ ರಾಶಿಗಳು ತಿಳಿಯೋಣ ಬನ್ನೀ
Follow us
TV9 Web
| Updated By: ಆಯೇಷಾ ಬಾನು

Updated on: Sep 02, 2021 | 7:30 AM

ಕೆಲವರಿಗೆ ಮದುವೆ ಆಗುವುದು ತುಂಬಾ ತುಂಬಾ ವಿಳಂಬವಾಗುತ್ತದೆ. ಈ ಆಪ್ತ ದಿನಕ್ಕೆ ತಹತಹಿಸುತ್ತಾರೆ. ಮದುವೆಗಾಗಿ ಅವರಲ್ಲಿ ತಪನ ಶುರುವಾಗಿಬಿಟ್ಟಿರುತ್ತದೆ. ಆದರೆ ಕೆಲವರು ಇರುತ್ತಾರೆ.ಮದುವೆ ಅಂದುಬಿಟ್ಟರೆ ಬಿಲ್ಕುಲ್​ ಬೇಡವೇ ಬೇಡ ಅಂದುಬಿಡುತ್ತಾರೆ. ಅವರು ವಿವಾಹ ಅಂದರೆ ಭಯಪಡುತ್ತಾರೆ. ಜ್ಯೋತಿಷ್ಯದ ರಾಶಿ ಚಕ್ರಗಳ ಪ್ರಕಾರ ಈ ನಾಲ್ಕು ರಾಶಿಯ ಜನರಿಗೆ ಮದುವೆ ಅಂದರೆ ಅದ್ಯಾಕೋ ಇಷ್ಟವೇ ಇರುವುದಿಲ್ಲವಂತೆ! ಅದರಲ್ಲಿ ನಿಮ್ಮ ರಾಶಿ ಇದೆಯಾ, ತಿಳಿದುಕೊಳ್ಳೀ.

ಕೆಲವರು ಮದುವೆ ಅಂದರೆ ಅದರ ಬಗ್ಗೆಯೇ ಕನಸು ಕಾಣುತ್ತಿರುತ್ತಾರೆ. ಆ ಆಪ್ತ ದಿನದ ಬಗ್ಗೆ ಅವರಲ್ಲಿ ಅನೇಕ ಯೋಜನೆಗಳು, ಆಲೋಚನೆಗಳು ಮನೆ ಮಾಡಿರುತ್ತವೆ. ಕೆಲವರು ಮದುವೆ ಅಂದರೆ ಜೀವನೋತ್ಸಾಹದಿಂದ ಪುಟಿಯುತ್ತಿರುತ್ತಾರೆ. ಜೀವನದಲ್ಲಿ ಒಂದು ಘಟ್ಟ ದಾಟಿದ ಮೇಲೆ ವಿವಾಹದ ಬಗ್ಗೆ ನಿಖರ ಆಲೋಚನೆಗಳನ್ನು ಮೈಗೂಡಿಸಿಕೊಂಡು ಜೀವನಸಾಥಿಯ ಬಗ್ಗೆ ಕಲ್ಪನಾ ಲೋಕದಲ್ಲಿ ವಿಹಾರಿಸುತ್ತಾರೆ. ಆದರೆ ಕೆಲವರು ವಾಸ್ತವದಲ್ಲಿ ಮದುವೆ ಅಂದರೆ ಕಂಬಳಿ ಹುಳ ಮೈ ಮೇಲೆ ಬಿದ್ದವರಂತೆ ಆಡುತ್ತಾರೆ.

ಅಸಲಿಗೆ ಅಂತಹವರಿಗೆ ಮದುವೆ ಅಂದರೆ ಅನೇಕ ಸಂಶಯಗಳು ಅವರ ಮನದಲ್ಲಿ ಗೂಡುಕಟ್ಟಿರುತ್ತದೆ. ಆದ್ದರಿಂದ ಓರ್ವ ಜೀವನಸಾಥಿಯ ಜೊತೆ ಜೀವನಪೂರ್ತಿ ಕಳೆಯಲು ಸಿದ್ಧವಾಗಿರುವುದಿಲ್ಲ. ಈ ನಾಲ್ಕು ರಾಶಿಯ ಜನರಿಗೆ ಮದುವೆ ಅಂದರೆ ಸಂಭ್ರಮ ಮನೆ ಮಾಡುವುದರ ಬದಲು ಅವರ ಕಾಲುಗಳು ತಣ್ಣಗಾಗುತ್ತದೆ. ಈ ನಾಲ್ಕು ರಾಶಿಗಳು ಯಾವುವೆಂದರೆ

1. ಕನ್ಯಾ ರಾಶಿ Virgo:

ಕನ್ಯಾ ರಾಶಿಯ ಜನ ತುಂಬಾ ಉನ್ನತ ವ್ಯಕ್ತಿಗಳಾಗಿರುತ್ತಾರೆ. ಕಡಿಮೆ, ಅಲ್ಪ, ಸಣ್ಣದು, ಚಿಕ್ಕದು ಅಂದರೆ ಅವರಿಗೆ ಅಸಲಿಗೆ ಹಿಡಿಸುವುದಿಲ್ಲ. ಅವರದು ಅನಂತದೆಡೆ ಗುರಿ. ಅವರು ಅಗಾಧವಾದುದನ್ನು ಸಾಧಿಸುವುದೇ ಅವರ ಗುರಿ, ತಪನೆ. ಹಾಗಾಗಿಯೇ ಪರ್ಫೆಕ್ಷನಿಸ್ಟ್​ ಅನ್ನಿಸಿಕೊಳ್ಳವ ಹಪಾಹಪಿ ಅವರದ್ದಾಗಿರುತ್ತದೆ. ಅವರಿಗೆ ವಿವಾಹ ಅನ್ನುವುದು ಅಡ್ಡ ವಿಚಾರ. ಅಂದರೆ ಅವರಿಗೆ ಮದುವೆ ಎಂಬುದು ಅವರ ಜೀವನದ ಕನಸುಗಳನ್ನು ಪೂರೈಸಿಕೊಳ್ಳುವಲ್ಲಿ ಅಡ್ಡ ಬರುವ ವಿಚಾರವಾಗಿರುತ್ತದೆ. ಅಂತಹವರಿಗೆ ವಿವಾಹ ಮಾಡಿಕೊಂಡುಬಿಟ್ಟರೆ ತನ್ನ ಜೀವನದ ಆಪೇಕ್ಷೆಗಳು, ಜೀವನಮಟ್ಟ ಕುಗ್ಗಿಬಿಡುತ್ತದೆ ಎಂಬ ಗುಮಾನಿ ಕಾಡತೊಡಗುತ್ತದೆ.

2. ವೃಶ್ಚಿಕ ರಾಶಿ Scorpio: ವೃಶ್ಚಿಕ ರಾಶಿ ಜಾತಕದವರಿಗೆ ಯಾರೊಂದಿಗೇ ಆಗಲಿ ತಮ್ಮ ಮನದ ಮಾತು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾರೊಂದಿಗೂ ಮದುವೆ ಆಗುವುದಕ್ಕೆ ಅವರಿಗೆ ಇಷ್ಟವೇ ಇರುವುದಿಲ್ಲ. ಅದರ ಬಗ್ಗೆ ಅವರಲ್ಲಿ ಅವ್ಯಕ್ತ ಭಯ ತುಳುಕುತ್ತಿರುತ್ತದೆ. ಜೀವನ ಸಂಗಾತಿಯೊಂದಿಗೆ ತಮ್ಮ ಭಾವನೆಗಳನ್ನು ಅವರು ಅಂದುಕೊಳ್ಳುವಷ್ಟು ಮುಕ್ತವಾಗಿ ಹಂಚಿಕೊಳ್ಳುವುದಕ್ಕೆ ಅವರಿಗೆ ಆಗಿಬರುವುದಿಲ್ಲ. ಹಾಗಾಗಿಯೇ ಮದುವೆ ಅಂದರೆ ಮೈಲು ದೂರ ಓಡುತ್ತಾರೆ.

3. ಧನಸ್ಸು ರಾಶಿ Sagittarius:

ಧನು ರಾಶಿಯವರಿಗೆ ಸ್ವಾತಂತ್ರ್ಯ ಅಂದರೆ ಇಷ್ಟವಾಗುತ್ತದೆ; ಮದುವೆ ಅಂದರೆ ಕಷ್ಟವಾಗುತ್ತದೆ. ಅಂದರೆ ಮದುವೆಯಿಂದತಮ್ಮ ಸ್ವಾತಂತ್ರ್ಯ ಎಲ್ಲಿ ಹರಣವಾಗುತ್ತದೋ ಎಂದು ಭೀತಿಗೀಡಾಗುತ್ತಾರೆ. ಅವರಲ್ಲಿ ನಾಟಕೀಯತೆಗೆ ಜಾಗ ಇರುವುದಿಲ್ಲ. ಮದುವೆ ಅಂದುಬಿಟ್ಟರೆ ಜವಾಬ್ದಾರಿಗಳು, ಸಂಕಷ್ಟಗಳು ಎದುರಾಗಿ ಜವನ ಹೈರಾಣಗೊಳ್ಳುತ್ತದೆ ಎಂಬುದು ಅವರ ಸ್ಪಷ್ಟ ಅನಿಸಿಕೆಯಾಗಿರುತ್ತದೆ. ಅದಕ್ಕೇ ಅಂತಹವರು ಮದುವೆ ಬಿಲ್ಕುಲ್​ ಬೇಡ ಅಂದುಬಿಡುತ್ತಾರೆ.

4. ಮೀನ ರಾಶಿ Pisces: ಮೀನ ರಾಶಿಯ ಜನ ವಿಶಿಷ್ಟವಾಗಿರುತ್ತಾರೆ, ಅಸಹಜವಾಗಿರುತ್ತಾರೆ. ಹಾಗಾಗಿ ಯಾರೊಂದಿಗೂ ಅವರು ಸಹಜವಾಗಿ, ಸುಲಲಿತವಾಗಿ, ಸರಳವಾಗಿ ಬೆರೆಯುವುದಿಲ್ಲ. ಹಾಗಾಗಿ ಮದುವೆ ಬಗ್ಗೆ ಅವರಿಗೆ ಉತ್ಸಾಹವೇ ಇರುವುದಿಲ್ಲ. ತನ್ನನ್ನು ವಿವಾಹವಾಗುವ ವ್ಯಕ್ತಿ ತನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದಿಲ್ಲ, ತನ್ನ ಮಾತು- ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂಬ ಚಿಂತೆಯಲ್ಲೇ ಜೀವನ ಕಳೆದುಬಿಡುತ್ತಾರೆ, ಆದರೆ ಮದುವೆ ಮಾತ್ರ ಬೇಡ ಅಂದುಬಿಡುತ್ತಾರೆ.

Also read: ಬೆಂಗಳೂರಿನಲ್ಲಿ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳು ಶೀಘ್ರದಲ್ಲೇ ತೆರವು

(4 zodiac signs that are not keen to get married)

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ