ಸೆಪ್ಟೆಂಬರ್ ತಿಂಗಳ ಹಬ್ಬದ ಕ್ಯಾಲೆಂಡರ್; ಈ ತಿಂಗಳು ಬರುವ ಹಬ್ಬದ ಪಟ್ಟಿ ಇಲ್ಲಿದೆ
September 2021 Festival Calendar: ಈ ತಿಂಗಳು ಮಾಸಿಕ ಏಕಾದಶಿ, ಪ್ರದೋಷ ವ್ರತ, ಸಂಕಷ್ಟ ಚತುರ್ಥಿಯಿಂದ ವಿನಾಯಕ ಚತುರ್ಥಿ ಸೇರಿದಂತೆ ಅನೇಕ ಹಬ್ಬಗಳು ಬಂದು ಹೋಗುತ್ತವೆ. ಸೆಪ್ಟೆಂಬರ್ 2021 ರಲ್ಲಿ ಬರುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ.
ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್ ವರ್ಷದುದ್ದಕ್ಕೂ ಅಸಂಖ್ಯಾತ ಹಬ್ಬಗಳನ್ನು ಹೊಂದಿದೆ. ನಾವು ಇಂದು ನಿಮಗೆ ಭಾದ್ರಪದ ಮಾಸ ಅಂದ್ರೆ ಸೆಪ್ಟೆಂಬರ್ನಲ್ಲಿ ಬರುವ ಹಬ್ಬದ ಪಟ್ಟಿಯನ್ನು ನೀಡುತ್ತಿದ್ದೇವೆ. ಈ ತಿಂಗಳು ಮಾಸಿಕ ಏಕಾದಶಿ, ಪ್ರದೋಷ ವ್ರತ, ಸಂಕಷ್ಟ ಚತುರ್ಥಿಯಿಂದ ವಿನಾಯಕ ಚತುರ್ಥಿ ಸೇರಿದಂತೆ ಅನೇಕ ಹಬ್ಬಗಳು ಬಂದು ಹೋಗುತ್ತವೆ. ಸೆಪ್ಟೆಂಬರ್ 2021 ರಲ್ಲಿ ಬರುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ.
ಅಜಾ ಏಕಾದಶಿ ಮತ್ತು ಪಾರ್ಶ್ವ ಏಕಾದಶಿ – ಸೆಪ್ಟೆಂಬರ್ 3 ಮತ್ತು ಸೆಪ್ಟೆಂಬರ್ 17 ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕವನ್ನು ಅಜಾ ಏಕಾದಶಿ ಎಂದು ಕರೆಯುತ್ತಾರೆ, ಈ ಬಾರಿ ಈ ದಿನ ಶುಭ ಶುಕ್ರವಾರದಂದು ಬಂದಿದೆ. ಅಂದರೆ ಸೆಪ್ಟೆಂಬರ್ 03ರಂದು ಬಿದ್ದಿದೆ. ಈ ದಿನ ಭಗವಾನ್ ವಿಷ್ಣು ಭಕ್ತರು ದಿನವಿಡೀ ಉಪವಾಸ ಆಚರಿಸುತ್ತಾರೆ, ಪೂಜೆ ಮಾಡುತ್ತಾರೆ, ಕೀರ್ತನೆಗಳನ್ನು ಹಾಡುತ್ತಾರೆ ಮತ್ತು ಸ್ತೋತ್ರಗಳನ್ನು ಪಠಿಸುತ್ತಾರೆ.
ಪ್ರದೋಷ ವ್ರತ – ಸೆಪ್ಟೆಂಬರ್ 4 ಮತ್ತು ಸೆಪ್ಟೆಂಬರ್ 18 ಪ್ರದೋಷ ವ್ರತವನ್ನು ಶಿವನಿಗೆ ಸಮರ್ಪಿಸಲಾಗಿದೆ. ಆ ದಿನದಂದು ಜನರು ಮಹಾದೇವನಿಗೆ ಪೂಜೆ ಸಲ್ಲಿಸಲು ವ್ರತವನ್ನು ಮಾಡುತ್ತಾರೆ. ಆ ದಿನ ಶಿವನ ಆರಾಧನೆ ಮಾಡುವುದರಿಂದ ಅನೇಕ ಫಲಗಳು ಸಿಗುತ್ತವೆ.
ಗೌರಿ ಹಬ್ಬ – ಸೆಪ್ಟೆಂಬರ್ 9 ಗೌರಿ ಹಬ್ಬವನ್ನು ಸೆಪ್ಟೆಂಬರ್ 9ರಂದು ಆಚರಿಸಲಾಗುತ್ತದೆ. ಮಹಿಳೆಯರು ಹೆಚ್ಚಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಅವರು ಈ ದಿನದಂದು ವ್ರತವನ್ನು ಆಚರಿಸುತ್ತಾರೆ ಮತ್ತು ತಮ್ಮ ಪತಿಯ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.
ಗಣೇಶ ಅಥವಾ ವಿನಾಯಕ ಚತುರ್ಥಿ – ಸೆಪ್ಟೆಂಬರ್ 10 ಸೆಪ್ಟೆಂಬರ್ 10ರಂದು ಗಣೇಶನ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಈ ಹಬ್ಬಗಳು ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಹತ್ತು ದಿನಗಳ ಕಾಲ ನಡೆಯುತ್ತದೆ. ಮತ್ತು ಇದು ಅನಂತ ಚತುರ್ದಶಿಯಂದು ದೇವರ ವಿಸರ್ಜನೆಯೊಂದಿಗೆ ಕೊನೆಗೊಳ್ಳುತ್ತದೆ.
ವಿಶ್ವಕರ್ಮ ಜಯಂತಿ – ಸೆಪ್ಟೆಂಬರ್ 17 ಈ ದಿನ, ಜನರು ಶಿಲ್ಪಿಗಳ ದೇವರು ವಿಶ್ವಕರ್ಮ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ವಿಶ್ವಕರ್ಮನು ಶಿಲ್ಪಕಲೆಗಳ ದೇವರು. ಇವರು ಇಡೀ ವಿಶ್ವವನ್ನು ನಿರ್ಮಿಸಿದ್ದಾರೆ ಎಂದು ನಂಬಲಾಗಿದ್ದು ಇವರನ್ನು ದೇವ ಶಿಲ್ಪಿ ಎಂದೂ ಸಹ ಕರೆಯುತ್ತಾರೆ.
ಅನಂತ ಚತುರ್ದಶಿ – ಸೆಪ್ಟೆಂಬರ್ 19 ಅನಂತ ಚತುರ್ದಶಿಯು ಭಗವಾನ್ ವಿಷ್ಣುವಿನ ಅನಂತ (ಶಾಶ್ವತ) ರೂಪಕ್ಕೆ ಮೀಸಲಾಗಿರುವ ದಿನವಾಗಿದೆ. ಈ ದಿನ, ಭಕ್ತರು ಒಂದು ದಿನದ ಉಪವಾಸವನ್ನು ಮಾಡುತ್ತಾರೆ ಮತ್ತು ಭಗವಾನ್ ವಿಷ್ಣುವನ್ನು ಪ್ರಾರ್ಥಿಸುತ್ತಾರೆ, ಈ ಆದಿ ಶೇಷ ಎಂಬ ಐದು ಹೆಡೆಗಳ ಸರ್ಪದ ಸುರುಳಿಯಾಕಾರದ ದೇಹದ ಮೇಲೆ ವಿಶ್ರಾಂತಿ ಪಡೆಯುವ ವಿಷ್ಣುವಿನ ಈ ರೂಪವನ್ನು ಅನಂತ ಪದ್ಮನಾಭಸ್ವಾಮಿ ಎಂದೂ ಕರೆಯುತ್ತಾರೆ.
ಈ ದಿನ, ಗಣೇಶ ವಿಸರ್ಜನೆಯನ್ನೂ ನಡೆಸಲಾಗುತ್ತದೆ. ಇದು ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡುವ ಮತ್ತು ಆತನಿಗೆ ಭವ್ಯವಾದ ವಿದಾಯದ ಆಚರಣೆಯಾಗಿದೆ.
ಇದನ್ನೂ ಓದಿ:ವಿನಾಯಕ ಚತುರ್ಥಿಗೆ ಈ ಬಾರಿ ಮುಹೂರ್ತ ಯಾವುದು, ಗಣೇಶನನ್ನು ಕೂಡಿಸುವುದು ಹೇಗೆ, ಪೂಜಾ ವಿಧಾನ ಹೇಗೆ?