TTD Dhana Prasadam: ತಿಮ್ಮಪ್ಪ ಭಕ್ತರಿಗಾಗಿ ಮತ್ತೊಂದು ಪ್ರಸಾದ ಬಿಡುಗಡೆ, ಏನಿದು ಧನ ಪ್ರಸಾದ ಮಹಾತ್ಮೆ?

ಬೆಟ್ಟದಂತಹ ಚಿಲ್ಲರೆ ಸಮಸ್ಯೆಯಿಂದ ಹೊರ ಬರಲು ಟಿಟಿಡಿ ಹೊಸ ಐಡಿಯಾ ಮಾಡಿದೆ. ಅದುವೇ ‘ಶ್ರೀವಾರಿ ಧನ ಪ್ರಸಾದ’ ವಿನಿಯೋಗ. ಅಂದರೆ ಭಕ್ತರು ನೋಟು ಕೊಟ್ಟು ಈ ನಾಣ್ಯದ ಪ್ಯಾಕೆಟ್​ಗಳನ್ನು (coins) ಖರೀದಿಸಬಹುದು. ಒಂದೊಂದು ಪ್ಯಾಕೆಟ್​​​ನಲ್ಲಿ 50, 100 ಮತ್ತು 500 ರೂಪಾಯಿ ಮೌಲ್ಯದ ನಾಣ್ಯಗಳು ಇರುತ್ತವೆ.

TTD Dhana Prasadam: ತಿಮ್ಮಪ್ಪ ಭಕ್ತರಿಗಾಗಿ ಮತ್ತೊಂದು ಪ್ರಸಾದ ಬಿಡುಗಡೆ, ಏನಿದು ಧನ ಪ್ರಸಾದ ಮಹಾತ್ಮೆ?
ತಿಮ್ಮಪ್ಪ ಭಕ್ತರಿಗಾಗಿ ಮತ್ತೊಂದು ಪ್ರಸಾದ ಬಿಡುಗಡೆ, ಏನಿದು ಧನ ಪ್ರಸಾದ ಮಹಾತ್ಮೆ?
Follow us
| Updated By: ಸಾಧು ಶ್ರೀನಾಥ್​

Updated on: Sep 02, 2021 | 3:09 PM

ತಿರುಪತಿ ತಿಮ್ಮಪ್ಪನ ವತಿಯಿಂದ ಆರಂಭದಿಂದಲೂ ಭಕ್ತರಿಗಾಗಿ ಭಕ್ತಿ ಪ್ರಧಾನ ಮತ್ತು ಭುಕ್ತಿ ಪ್ರಧಾನ ಲಡ್ಡು ವಿತರಣೆ ನಿರಂತರವಾಗಿ ನಡೆದಿದೆ. ಈಗ ತಿಮ್ಮಪ್ಪನ ಭಕ್ತರಿಗಾಗಿ ತಿರುಮಲ ತಿರುಪತಿ ಆಡಳಿತ ಮಂಡಳಿ (ಟಿಟಿಡಿ) ಮತ್ತೊಂದು ಪ್ರಸಾದ ಬಿಡುಗಡೆ ಮಾಡಿದೆ. ಅದುವೇ ಧನ ಪ್ರಸಾದ! ಏನಿದರ ಮಹಾತ್ಮೆ? ತಿಳಿಯೋಣ ಬನ್ನೀ.

ತಿರುಮಲ ತಿರುಪತಿ ಆಡಳಿತ ಮಂಡಳಿಯು ತಿಮ್ಮಪ್ಪನ ಭಕ್ತರಿಗಾಗಿ ಮತ್ತೊಂದು ವಿನೂತನ ಪ್ರಸಾದವನ್ನು ಬಿಡುಗಡೆ ಮಾಡಿದೆ. ಆದರೆ ಅದು ತಿನ್ನುವುದಲ್ಲ. ‘ಶ್ರೀವಾರಿ ಧನ ಪ್ರಸಾದ’ ಹೆಸರಿನಲ್ಲಿ (Dhana Prasadam) ಚಿಲ್ಲರೆ ನಾಣ್ಯಗಳ ಪ್ಯಾಕೆಟ್ ವಿತರಣೆ​ ಇದಾಗಿದ್ದು, ಅದರಲ್ಲಿ ಅರಿಶಿಣ ಮತ್ತು ಕುಂಕುಮವನ್ನಿಟ್ಟು ಭಕ್ತರಿಗೆ ಬುಧವಾರದಿಂದ ವಿತರಿಸಲು ಆರಂಭಿಸಿದೆ.

ಭಕ್ತರು ತಿಮ್ಮಪ್ಪನ ಹುಂಡಿಯಲ್ಲಿ ದೇವರಿಗೆ ಕಾಣಿಕೆಯಾಗಿ ಅರ್ಪಿಸಿರುವ ನಾಣ್ಯಗಳನ್ನು ಮತ್ತೆ ಭಕ್ತರಿಗೆ ‘ಶ್ರೀವಾರಿ ಧನ ಪ್ರಸಾದ’ ಹೆಸರಿನಲ್ಲಿ ವಿತರಿಸಲಾಗುವುದು. ತಿಮ್ಮಪ್ಪನ ಹುಂಡಿಗೆ ಭಕ್ತರು ಕಾಣಿಕೆ ರೂಪದಲ್ಲಿ ಪ್ರತಿ ದಿನ 10-20 ಲಕ್ಷ ರೂಪಾಯಿ ಮೌಲ್ಯದ ನಾಣ್ಯಗಳನ್ನು ಹಾಕುತ್ತಾರೆ. ಆದರೆ ಇಷ್ಟೊಂದು ಮೌಲ್ಯದ ನಾಣ್ಯಗಳನ್ನು ಟಿಟಿಡಿ ಖಾತೆಯಲ್ಲಿ ಬ್ಯಾಂಕ್​​ಗಳು ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿವೆ. ಹಾಗಾಗಿ ಟಿಟಿಡಿ (Tirumala Tirupati Devasthanams-TTD) ಬಳಿ ಚಿಲ್ಲರೆ ನಾಣ್ಯಗಳು ಬೆಟ್ಟದಂತೆ ಗುಡ್ಡೆಯಾಗುತ್ತಿದೆ. ಸದ್ಯಕ್ಕೆ 5 ಕೋಟಿ ರೂಪಾಯಿ ಮೌಲ್ಯದ ನಾಣ್ಯಗಳು ಟಿಟಿಡಿ ಬಳಿ ಶೇಖರಣೆಯಾಗಿದೆ.

100 ರೂ ನಾಣ್ಯಗಳ ಪ್ಯಾಕೆಟ್ ಬೆಲೆ 100 ರೂಪಾಯಿ:

ಈ ಬೆಟ್ಟದಂತಹ ಸಮಸ್ಯೆಯಿಂದ ಹೊರ ಬರಲು ಟಿಟಿಡಿ ಹೊಸ ಐಡಿಯಾ ಮಾಡಿದೆ. ಅದುವೇ ‘ಶ್ರೀವಾರಿ ಧನ ಪ್ರಸಾದ’ ವಿನಿಯೋಗ. ಅಂದರೆ ಭಕ್ತರು ನೋಟು ಕೊಟ್ಟು ಈ ನಾಣ್ಯದ ಪ್ಯಾಕೆಟ್​ಗಳನ್ನು (coins) ಖರೀದಿಸಬಹುದು. ಒಂದೊಂದು ಪ್ಯಾಕೆಟ್​​​ನಲ್ಲಿ 50, 100 ಮತ್ತು 500 ರೂಪಾಯಿ ಮೌಲ್ಯದ ನಾಣ್ಯಗಳು ಇರುತ್ತವೆ. ತಿಮ್ಮಪ್ಪನ ದೇವಸ್ಥಾನದ ಬಳಿ ಕೌಂಟರ್​​ನಲ್ಲಿ, ದೇವಸ್ಥಾನದ ಅತಿಥಿ ಗೃಹಗಳಲ್ಲಿ ಈ ಪ್ಯಾಕೆಟ್​ಗಳನ್ನು ವಿತರಿಸಲಾಗುತ್ತದೆ.​​

ಗಮನಾರ್ಹವೆಂದರೆ ಅತಿಥಿ ಗೃಹಗಳಲ್ಲಿ (accommodation) ತಂಗುವ ಭಕ್ತರು ಅಡ್ವಾನ್ಸ್​ ರೂಪದಲ್ಲಿ ಹಣ (advance paid) ಕಟ್ಟಬೇಕಾಗುತ್ತದೆ. ಆ ಅಡ್ವಾನ್ಸ್​ ಹಣವನ್ನು ವಾಪಸ್​ ಮಾಡುವಾಗ ನೋಟು ಕೊಡುವುದಿಲ್ಲ. ಬದಲಿಗೆ, ನಾಣ್ಯದ ಪ್ಯಾಕೆಟ್​ಗಳನ್ನು (refund) ನೀಡಲಾಗುತ್ತದೆ. ಸದ್ಯಕ್ಕೆ ಒಂದು ರೂಪಾಯಿ ನಾಣ್ಯದ ಪ್ಯಾಕೆಟ್​​​ಗಳನ್ನು ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ 2 ರೂ ಮತ್ತು 5 ರೂ ನಾಣ್ಯಗಳನ್ನು ಸಹ ವಿತರಿಸಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ತಿರುಪತಿ ಲಡ್ಡುಗಳಿಗೆ ಶತಮಾನಗಳ ಇತಿಹಾಸವಿದೆ, ಪ್ರಸಾದದ ರೂಪದಲ್ಲಿ ಸಿಗುವ ಲಡ್ಡು ದೇವಸ್ಥಾನದ ಅಡುಗೆ ಕೋಣೆಯಲ್ಲಿ ತಯಾರಾಗುತ್ತದೆ

(TTD introduced coins as Dhana Prasadam to lord venkateswara tirupati pilgrims)

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?