Numerology and Marriage: ಈ ಸಂಖ್ಯೆಗಳು ನಿಮ್ಮ ಮದುವೆ, ವೈವಾಹಿಕ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ, ತಿಳಿದುಕೊಳ್ಳಿ
ಸಂಖ್ಯಾ ಶಾಸ್ತ್ರವೂ ಜ್ಯೋತಿಷ್ಯದ ಒಂದು ಮಹತ್ವಪೂರ್ಣ ಭಾಗವಾಗಿದೆ. ಸಂಖ್ಯಾ ಶಾಸ್ತ್ರದಲ್ಲಿ ಒಟ್ಟಾರೆಯಾಗಿ 9 ಸಂಖ್ಯೆಗಳ ಆಟ ನಡೆಯುತ್ತದೆ. ಅಂದ್ರೆ ನವ ಗ್ರಹಗಳ ಜೊತೆ ಇದನ್ನು ಸಮೀಕರಿಸಲಾಗುತ್ತದೆ. ಜಾತಕದಲ್ಲಿನ ಗ್ರಹ- ನಕ್ಷತ್ರ ನಮ್ಮ ಜೀವನದಲ್ಲಿ ಹೇಗೆ ಪ್ರಭಾವ ಬೀರುತ್ತದೋ ಹಾಗೆಯೇ ಸಂಖ್ಯಾ ಶಾಸ್ತ್ರದಲ್ಲಿ ಮೂಲಾಂಕ ಮತ್ತು ಭಾಗ್ಯಾಂಕ ನಮ್ಮ ಜೀವನ ಪಥದಲ್ಲಿ ದಿಕ್ಕು ದೆಸೆಗಳನ್ನು ನಿರ್ದೇಶಿಸುತ್ತದೆ/ನಿರ್ಧರಿಸುತ್ತದೆ. ಪ್ರೇಮ ವಿವಾಹ, ವಿವಾಹ ಜೀವನದ ಮೇಲೆ ಮೂಲಾಂಕ ಮತ್ತು ಭಾಗ್ಯಾಂಕಗಳ ಲೆಕ್ಕಾಚಾರ ಇರುತ್ತದೆ.
ಸಂಖ್ಯಾ ಶಾಸ್ತ್ರ ಮತ್ತು ಮದುವೆ ಶಾಸ್ತ್ರದಲ್ಲಿ ಈ ಸಂಖ್ಯೆಗಳು ಹೇಗೆ ಪ್ರಭಾವ ಬೀರುತ್ತವೆ, ತಿಳಿದುಕೊಳ್ಳೋಣ ಬನ್ನಿ. ಗ್ರಹ, ನಕ್ಷತ್ರ ಆಧರಿತ ಕುಂಡಲಿ ಅಥವಾ ಜಾತಕ ಎಂಬುದು ಮನುಷ್ಯನ ಜೀವನದಲ್ಲಿ ತುಂಬಾ ಪ್ರಭಾವ ಬೀರುತ್ತದೆ. ಅದೇ ಮಾದರಿಯಲ್ಲಿ ಅಂಕಿ-ಸಂಖ್ಯೆಯೂ ಅಷ್ಟೇ. ನಮ್ಮ ಜೀವನದಲ್ಲಿ ಬಹು ಪ್ರಭಾವ ಬೀರುತ್ತದೆ. ಬನ್ನೀ ಹಾಗಾದರೆ ಸಂಖ್ಯಾ ಶಾಸ್ತ್ರದ (Numerology) ಅಂಕಿ-ಸಂಖ್ಯೆಗಳು ಜೀವನದ ಕೂಡಿ-ಕಳೆಯುವ ಆಟದಲ್ಲಿ ಹೇಗೆಲ್ಲ ಪರಿಣಾಮ ಬೀರುತ್ತದೆ ತಿಳಿಯೋಣ.
ವೈವಾಹಿಕ ಜೀವನದಲ್ಲಿ ಅಂಕಿ-ಸಂಖ್ಯೆಗಳ ಕೂಡಿ-ಕಳೆಯುವ ಆಟ ಹೀಗಿರುತ್ತದೆ:
ಸಂಖ್ಯಾ ಶಾಸ್ತ್ರವೂ ಜ್ಯೋತಿಷ್ಯದ (Astrology) ಒಂದು ಮಹತ್ವಪೂರ್ಣ ಭಾಗವಾಗಿದೆ. ಸಂಖ್ಯಾ ಶಾಸ್ತ್ರದಲ್ಲಿ ಒಟ್ಟಾರೆಯಾಗಿ 9 ಸಂಖ್ಯೆಗಳ ಆಟ ನಡೆಯುತ್ತದೆ. ಅಂದ್ರೆ ನವ ಗ್ರಹಗಳ ಜೊತೆ ಇದನ್ನು ಸಮೀಕರಿಸಲಾಗುತ್ತದೆ. ಜಾತಕದಲ್ಲಿನ ಗ್ರಹ- ನಕ್ಷತ್ರ ನಮ್ಮ ಜೀವನದಲ್ಲಿ ಹೇಗೆ ಪ್ರಭಾವ ಬೀರುತ್ತದೋ ಹಾಗೆಯೇ ಸಂಖ್ಯಾ ಶಾಸ್ತ್ರದಲ್ಲಿ ಮೂಲಾಂಕ (Mulanak) ಮತ್ತು ಭಾಗ್ಯಾಂಕ (Bhagyank) ನಮ್ಮ ಜೀವನ ಪಥದಲ್ಲಿ ದಿಕ್ಕು ದೆಸೆಗಳನ್ನು ನಿರ್ದೇಶಿಸುತ್ತದೆ/ನಿರ್ಧರಿಸುತ್ತದೆ. ಪ್ರೇಮ ವಿವಾಹ, ವಿವಾಹ ಜೀವನದ ಮೇಲೆ ಮೂಲಾಂಕ ಮತ್ತು ಭಾಗ್ಯಾಂಕಗಳ ಲೆಕ್ಕಾಚಾರ ಹೇಗಿರುತ್ತದೆ, ನೋಡೋಣ.
ಮೂಲಾಂಕವೆಂದರೆ ನಮ್ಮ ಜನ್ಮ ದಿನದ ತಾರೀಖಿನಲ್ಲಿ ಬರುವ ಸಂಖ್ಯೆಗಳನ್ನು ಕೂಡಿಸಿದಾಗ ಬರುವ ಸಂಖ್ಯೆ. ಹುಟ್ಟುಹಬ್ಬದ ದಿನಕ್ಕೆ ಅನುಸಾರವಾಗಿ ಸಿಗುವ ಒಂದು ಸಂಖ್ಯೆಯೇ (Single Number) ಮೂಲಾಂಕ. ಹೇಗೆಂದ್ರೆ ನಿಮ್ಮ ಜನ್ಮ ದಿನಾಂಕ 12 ಅಂತಿದ್ದರೆ 1+2 = 3. ಹಾಗಾಗಿ 12ನೇ ತಾರೀಕು ಹುಟ್ಟಿದವರ ಮೂಲಾಂಕ 3 ಆಗಿರುತ್ತದೆ. ಇನ್ನು ಭಾಗ್ಯಾಂಕ ಹೇಗೆ ಲೆಕ್ಕ ಹಾಕುವುದು? ಇಡೀ ಜನ್ಮ ದಿನಾಂಕವನ್ನು ಕೂಡಬೇಕಾಗುತ್ತದೆ. ಅಂದರೆ ನಿಮ್ಮ ಜನ್ಮ ದಿನಾಂಕ 12-07-1968 ಎಂದಾದರೆ 1+2+0+7+1+9+6+8 = 34, ಈ 34ರಲ್ಲಿ 3 ಮತ್ರು 4 ಅನ್ನು ಕೂಡಿದಾಗ 7 ಬರುತ್ತದೆ. ಅದೇ ನಿಮ್ಮ ಭಾಗ್ಯಾಂಕ 7. ಮೂಲಾಂಕ ಮತ್ತು ಭಾಗ್ಯಾಂಕಗಳು ಒಟ್ಟು 1 ರಿಂದ 9 ರವರೆಗೆ ದೊರೆಯುತ್ತದೆ. ಬನ್ನೀ ಹಾಗಾದರೆ ಆ ಒಂಭತ್ತೂ ಅಂಕಗಳ ಲೆಕ್ಕಾಚಾರ ಹಾಕೋಣ. ಮೌಲ್ಯಾಂಕ ನೋಡೋಣ.
ಮೂಲಾಂಕ 1: ಮೂಲಾಂಕ ಒಂದು ಹೊಂದಿರುವ ಜನ ತುಂಬಾ ಶಕ್ತಿಯುತವಾಗಿರುತ್ತಾರೆ. ಉತ್ಸಾಹದಿಂದ ಪುಟಿಯುತ್ತಿರುತ್ತಾರೆ. ಇವರನ್ನು ಸುಲಭವಾಗಿ ಪ್ರಭಾವಗೊಳಿಸಲಾಗದು. ತುಂಬಾ ಖಡಕ್ಕಾಗಿರುತ್ತಾರೆ. ತುಂಬಾ ಪ್ರಾಕ್ಟಿಕಲ್ ಆಗಿರುತ್ತಾರೆ. ಯಾವುದೇ ವ್ಯಕ್ತಿಯ ಬಗ್ಗೆ ಆಮೂಲಾಗ್ರವಾಗಿ ತಿಳಿದುಕೊಂಡ ಮೇಲಷ್ಟೇ ಸ್ಪಷ್ಟ ನಿರ್ಧಾರಕ್ಕೆ ಬರುತ್ತಾರೆ. ಹೆಚ್ಚಾಗಿ ಹೇಳಬೇಕು ಅಂದರೆ ಮೂಲಾಂಕ 1 ಹೊಂದಿರುವ ವ್ಯಕ್ತಿ ತಮ್ಮ ಬಾಲ್ಯದ ವ್ಯಕ್ತಿಯ ಜೊತೆ ವಿವಾಹವಾಗುತ್ತಾರೆ. ಇವರಿಗೆ ಜಬರದಸ್ತಿಯಿಂದ ಪ್ರೀತಿ-ಪ್ರೇಮ ಮಾಡುವುದು ಇಷ್ಟವಾಗದು. ಈ ವಿಷಯದಲ್ಲಿ ಅವರು ಯಾವುದೇ ಅಡ್ಜಸ್ಟ್ಮೆಂಟ್ ಮಾಡಿಕೊಳ್ಳುವುದಿಲ್ಲ. 2, 4 ಮತ್ತು 6 ಮೂಲಾಂಕ ಸಂಖ್ಯೆಯ ಜನ ಮೂಲಾಂಕ ಒಂದರ ವ್ಯಕ್ತಿಗಳಿಗೆ ಒಳ್ಳೆಯ ಗೆಳೆಯರಾಗಿರುತ್ತಾರೆ. 7, 8 ಮತ್ತು 9 ಮೂಲಾಂಕ ಸಂಖ್ಯೆಯ ಜನ ಮೂಲಾಂಕ ಒಂದರ ವ್ಯಕ್ತಿಗಳಿಗೆ ಆಗಿಬರುವುದಿಲ್ಲ; ಅವರಿಂದ ದೂರವೇ ಉಳಿಯುತ್ತಾರೆ.
ಮೂಲಾಂಕ 2: ಇವರ ಬಗ್ಗೆ ತುಂಬಾ ನಕಾರಾತ್ಮಕ ವಿಚಾರ ಏನೆಂದರೆ ಇವರು ತುಂಬಾ ಮೂಡಿ ಸ್ವಭಾವದವರು. ಇವರ ಜೊತೆ ಉತ್ತಮ ಬಾಮಧವ್ಯ ಹೊಂದಬೇಕು ಅಂದರೆ ಅವರ ಜೊತೆ ಸತತವಾಗಿ ಮಾತುಕತೆ ನಡೆಸುತ್ತಿರಬೇಕು. ಅವರ ಮನದಲ್ಲಿ ಮೂಡುವ ಸಂಶಯವನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕು. ವಾಸ್ತವದಲ್ಲಿ ಇವರು ತಮ್ಮ ಲವ್ ಲೈಫ್ ವಿಷಯವನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ಇಚ್ಛಿಸುವುದಿಲ್ಲ. ಇವರ ಜೊತೆ ಸಲಲಿತವಾಗಿಬೆರೆಯುವ ಮೂಲಾಂಕದವರು ಅಂದರೆ 1, 3 ಮತ್ತು 6. ಹಾಗೆಯೇ 5 ಮತ್ತು 8 ಮೂಲಾಂಕದವರು ಇವರಿಗೆ ಬಿಲ್ಕುಲ್ ಇಷ್ಟವಾಗುವುದಿಲ್ಲ.
ಮೂಲಾಂಕ 3: ಮೂಲಾಂಕ 3 ಜನ ತುಂಬಾ ಪ್ರಾಕ್ಟಿಕಲ್ ಮತ್ತು ಸ್ವಯಂ ಕೇಂದ್ರಿತರಾಗಿರುತ್ತಾರೆ. ಬಹುತೇಕವಾಗಿ 3ನೇ ಮೂಲಾಂಕದವರು ತಮ್ಮ ಸಂಗಾತಿಯ ಮೇಲೆ ಹಿಡಿತ ಸಾಧಿಸಿರುತ್ತಾರೆ. ಇವರು ಹೆಚ್ಚು ರಸಿಕರಲ್ಲ. ತಮ್ಮ ಹೃದಜನರಿಂದ ಇವರು ವಿಮುಖರಾಘುತ್ಥಾರೆ. ಯದ ಮಾತನ್ನು ಕೇಳಿ ಪ್ರೀತಿ-ಪ್ರೇಮದಲ್ಲಿ ತೊಡಗುವುದಿಲ್ಲ. ಮನಸ್ಸಿನ ಲೆಕ್ಕಾಚಾರದೊಂದಿಗೆ ವೈವಾಹಿಕ ಜೀವನ ನಡೆಸುತ್ತಾರೆ. ಇವರು ತುಂಬಾ ಮಹತ್ವಾಕಾಂಕ್ಷಿಯಾಗಿರುತ್ತಾರೆ. ವೃತ್ತಿ ಜೀವನದಲ್ಲಿ ಶಿಖರಾಗ್ರೇಸರಾಗಲು ತಹತಹಿಸುತ್ತಾರೆ. ಮೂಲಾಂಕ 2, 6, 9 ಇವರ ನೆಚ್ಚಿನ ಜನ. 1 ಅಥವಾ 4 ಮೂಲಾಂಕದಿಂದ ವಿಮುಖರಾಗುತ್ತಾರೆ.
ಮೂಲಾಂಕ 4: ಮೂಲಾಂಕ 4 ಜನರಿಗೆ ಮದುವೆಯಾದ ಮೇಲೂ ಒಂದಕ್ಕಿಂತ ಹೆಚ್ಚು ಸಂಬಂಧಗಳನ್ನು ಹೊಂದಲು ಹಾತೊರೆಯುತ್ತಾರೆ. ಆದರೆ ಮೂಲಾಂಕ ನಾಲ್ಕರ ಎಲ್ಲರಿಗೂ ಇದು ಅನ್ವಯವಾಗದು. 22 ನೇ ತಾರೀಖು ಜನಿಸಿದವರು ತಮ್ಮ ಸಂಗಾತಿಗೆ ಹೆಚ್ಚಾಗಿ ನಿಷ್ಠರಾಗಿರುತ್ತಾರೆ. ಇಬವರು ಸ್ವಭಾವತಹ ಡಾಮಿನೇಟಿಂಗ್ ಜನ. ಇವರು ಬೇರೊಬ್ಬರ ಜೊತೆ ಸಂಬಂಧ ಹೊಂದಿದ್ದರೂ ಅದರ ಬಗ್ಗೆ ಯಾರಿಗೂ ಹೇಳದೆ ಗುಟ್ಟು ಪಾಲಿಸುತ್ತಾರೆ. ಮೂಲಾಂಕ ನಾಲ್ಕಿನವರು ತುಂಬಾ ಮುಂಗೋಪಿಗಳು. ಇವರ ವೈವಾಹಿಕ ಜೀವನದ ಮೇಲೆ ಇದರ ಪ್ರಭಾವ ಬೀರುತ್ತದೆ. ಇದು ಕೊನೆಗೆ ವಿಚ್ಛೇದನವರಗೂ ಸಾಗುತ್ತದೆ. 1,2,7,8 ಮೂಲಾಂಕದ ಜನ ಇವರಿಗೆ ಪ್ರೀತಿಪಾತ್ರರು. ಇವರಲ್ಲೊಬ್ಬರು ಜೀವನಸಾಥಿಯೂ ಆಗುತ್ತಾರೆ. ಆದರೆ ಇವರಿಗೆ ಇವರದೇ ಮೂಲಾಂಕ 4 ಜನರೊಂದಿಗೆ ಬೆರೆಯುವುದಿಲ್ಲ.
ಮೂಲಾಂಕ 5: ಮೂಲಾಂಕ 5 ಜನರಿಗೆ ದೈಹಿಕ ಸಂಬಂಧ ತುಂಬಾ ಅರ್ಥವತ್ತಾಗಿರುತ್ತದೆ. ಈ ವಿಷಯದಲ್ಲಿ ಅವರು ತುಂಬಾ ಪ್ರಯೋಗಕಾರಿಯಾಗುತ್ತಾರೆ. ಇವರಿಗೆ ಯಾವುದೇ ವಿಷಯದ ಬಗ್ಗೆಯಾಗಲಿ ಶೀಘ್ರವೇ ಬೋರ್ ಹೊಡೆಯುತ್ತದೆ. ಹಾಗಾಗಿಯೇ ಮದುವೆಗೆ ಮುನ್ನ ಅನೇಕ ಸಂಬಂಧಗಳಲ್ಲಿ ಜೀವನ ಸಾಗಿಸುತ್ತಾರೆ. ಇವರು ಯಾವುದೇ ವಿಷಯದ ಬಗ್ಗೆ ಸರಳವಾಗಿ ಒಂದು ನಿರ್ಣಯಕ್ಕೆ ಬರಲಾರರು. 1,2,7,8 ಮೂಲಾಂಕದ ಜನ ಇವರಿಗೆ ಅಚ್ಚುಮೆಚ್ಚು. ಅದೇ ಮೂಲಾಂಕ 2 ಹೊಂದಿರುವವರು ಇವರಿಗೆ ಇಷ್ಟವೇ ಆಗುವುದಿಲ್ಲ.
ಮೂಲಾಂಕ 6: ಮೂಲಾಂಕ 6 ಜನರಿಗೆ ತುಂಬಾ ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ. ಯಾರನ್ನು ಬೇಕಾದರೂ ಸುಲಭವಾಗಿ ಪ್ರಭಾವಿತರಾಗಿಸುತ್ತಾರೆ. ಇವರು ತಮ್ಮ ಜೀವನ ಸಂಗಾತಿ ಜೊತೆ ಸದಾ ಅಂಟಿಕೊಂಡಿರುವುದಿಲ್ಲ. ಹಾಗಾಗಿ ಇವರ ವೈವಾಹಿಕ ಜೀವನ ವಿಮುಖಗೊಳ್ಳುತ್ತದೆ. ಕ್ಲೇಷದಿಂದ ಕೂಡಿರುತ್ತದೆ. ಜೀವನದಲ್ಲಿ ಬೇಗನೇ ಬೇರೆ ಬೇರೆಯಾಗಿಬಿಡುತ್ತಾರೆ. ಹಾಗಾಗಿ ಇವರೊಂದಿಗೆ ಸದಾ ಅನ್ಯೋನ್ಯವಾಗಿರಬೇಕು, ಭಾವನಾತ್ಮಕವಾಗಿ ತೊಡಗಿಸಿಕೊಳ್ಳಬೇಕು. ಹೊಂದಿಕೊಂಡು ಹೋಗಬೇಕು. ಯಾವುದೇ ಮೂಲಾಂಕದವರ ಜೊತೆ ಇವರಿಗೆ ಹೊಂದಾಣಿಕೆಯಾಗದು.
ಮೂಲಾಂಕ 7: ಮೂಲಾಂಕ 7 ಜನರಿಗೆ ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಇವರು ತಮ್ಮ ಪ್ರೀತಿಪಾತ್ರರನ್ನು ದೀರ್ಘಕಾಲ ಪ್ರೀತಿ ಪ್ರೇಮದಲ್ಲಿ ಬಂಧಿಸಿಡಬಲ್ಲರು. ಸರ್ಪ್ರೈಸ್ ಆಗಿ ಪ್ರೀತಿಯ ಕಾಣಿಕೆಗಳನ್ನು ನೀಡಿ ಆಶ್ಚರ್ಯದ ಮಡುವಿಗೆ ಬೀಳಿಸುತ್ತಾರೆ. ವ್ಯಕ್ತಿಗತ ಜೀವನದಲ್ಲಿ ತುಂಬಾ ಖುಷಿ ಖುಷಿಯಾಗಿರಲು ಬಯಸುತ್ತಾರೆ. ಇವರು ಶಾಂತಿ ಪ್ರಿಯರು. ಇವರಿಗೆ ಒತ್ತಡದ ಜೀವನ ಅಂದರೆ ಇಷ್ಟವಿರುವುದಿಲ್ಲ. ತಮ್ಮ ವಿವಾಹ ಜೀವನವನ್ನು ಚೆನ್ನಾಗಿ ಮತ್ತು ಯಾವುದೇ ತಲೆಬಿಸಿಯಿಲ್ಲದೆ ಕಳೆಯಲು ಇಚ್ಛಿಸುತ್ತಾರೆ. ಸಂಗಾತಿಯ ಜೊತೆ ಮನ ಬಿಚ್ಚಿ ಮಾತನಾಡುತ್ತಾರೆ. ತನ್ಮೂಲಕ ತಮ್ಮ ಸಂಬಂಧವನ್ನು ತಿಳಿಯಾಗಿಟ್ಟುಕೊಳ್ಳಲು ತಹತಹಿಸುತ್ತಾರೆ. ಮೂಲಾಂಕ 2 ಜನರು ಇವರಿಗೆ ಪ್ರೀತಿಪಾತ್ರರು; ಅದೇ ಮೂಲಾಂಕ 9 ಜನರು ಇವರಿಗೆ ಬಿಲ್ಕುಲ್ ಇಷ್ಟವಾಗುವುದಿಲ್ಲ.
ಮೂಲಾಂಕ 8: ಮೂಲಾಂಕ 8 ಜನ ತುಂಬಾ ಮಜಭೂತಾದ, ಬಲಿಷ್ಟರು. ವೂವಾಹಿಕ ಜೀವನದಲ್ಲಿ ಇವರೂ ತುಂಬಾ ಎಮೋಷನಲ್ ಆಗಿರುತ್ತಾರೆ. ಎಲ್ಲಾ ಮೂಲಾಂಕದವರೊಂದಿಗೆ ನಿಷ್ಠರಾಗಿರುತ್ತಾರೆ. ಅನೇಕ ಬಾರಿ ತಪ್ಪು ತಿಳಿವಳಿಕೆಯಿಂದಾಗಿ ತಮ್ಮ ವೈವಾಹಿಕ ಜೀವನದಲ್ಲಿ ತಾಪತ್ರಯ ತಂದಿಟ್ಟುಕೊಳ್ಳುತ್ತಾರೆ. ಮೂಲಾಂಕ 8 ಹೊಂದಿರುವ ಮಹಿಳೆಯರು ಹೆಚ್ಚಾಗಿ ಈ ತಾಪತ್ರಯಕ್ಕೆ ಸಿಲುಕುತ್ತಾರೆ. ಇವರಿಗೆ ಮೂಲಾಂಕ 8 ವ್ಯಕ್ತಿಗಳ ಜೊತೆ ಸಂಬಂಧ ಚೆನ್ನಾಗಿರುತ್ತದೆ. ಇವರು ಮೂಲಾಂಕ 2 ಹೊಂದಿರುವ ಜನರ ಜೊತೆ ವಿವಾಹವಾಗಬಾರದು.
ಮೂಲಾಂಕ 9: ಮೂಲಾಂಕ 9 ಜನ ತುಂಬಾ ಡಾಮಿನೇಟಿಂಗ್ ಆಗಿರುತ್ತಾರೆ. ಇವರು ಎಲ್ಲವನ್ನೂ ತಾವು ಹೇಳಿದಂತೆ ನಡೆಯಬೇಕು ಎಂದು ಬಯಸುತ್ತಾರೆ. ತುಂಬಾ ಎಮೋಷನಲ್ ಆಗಿರುತ್ತಾರೆ. ಆದರೆ ಬಹಳಷ್ಟು ಜನ ಇವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಈ ಮೂಲಾಂಕದವರಿಗೆ ದೈಹಿಕ ಸಂಬಂಧಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ. ವಿವಾಹೇತರ ಸಂಬಂಧದಲ್ಲೂ ಸಿಲುಕಿಕೊಳ್ಳುತ್ತಾರೆ. ತಮ್ಮ ಪರಿವಾರದವರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. 2 ಮತ್ತು 6 ಮೂಲಾಂಕದವರ ಜೊತೆ ಇವರ ಸಂಬಂಧ ಪರ್ಫೆಕ್ಟಾಗಿರುತ್ತದೆ. 1 ಮತ್ತು 9 ಮೂಲಾಂಕದವರು ಇವರಿಗೆ ಇಷ್ಟವೇ ಆಗುವುದಿಲ್ಲ.
(numerology and marriage how the numbers Bhagyank and moolank affect your married life and destiny)
Published On - 8:17 am, Fri, 3 September 21