ಸ್ವಚ್ಛ ಸರ್ವೇಕ್ಷಣ ಪುರಸ್ಕಾರ; ಮತ್ತೊಮ್ಮೆ ದೇಶದ ಟಾಪ್ 3 ಸ್ವಚ್ಛ ನಗರಗಳಲ್ಲಿ ಸ್ಥಾನ ಗಿಟ್ಟಿಸಿದ ಮೈಸೂರು
ಸ್ವಚ್ಛ ಸಿಟಿ ಆಯ್ಕೆಗೆ ಕೆಲ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ, ಎಲ್ಲಕ್ಕಿಂತ ಮುಖ್ಯವಾಗಿ ನಗರವು ಕಸಮುಕ್ತವಾಗಿರಬೇಕು, ಕಸ ಎಲ್ಲೂ ಕಾಣಿಸಬಾರದು, ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ, ಓಡಿಎಫ್ ++ ರೇಟಿಂಗ್ ಜೊತೆ ಸ್ವಚ್ಛ ಸರ್ವೇಕ್ಷಣನವರು 1,000 ಅಂಕಗಳನ್ನು ಎಲ್ಲ ಆಯಾಮಗಳನ್ನು ಪರಿಶೀಲಿಸಿ, ಸ್ವಚ್ಛತೆಗೆ ಸಂಬಂಧಿಸಿದಂತೆ ನಗರಗಳ ಕ್ಷಮತೆಗೆ ಅಂಕ ನೀಡುತ್ತಾರೆ ಎಂದು ಆಸಿಫ್ ಹೇಳಿದರು.
ಮೈಸೂರು, ಜುಲೈ 21: ದೇಶದ ಅತ್ಯಂತ ಸ್ವಚ್ಛ ನಗರಗಳ ಆಯ್ಕೆ ಪ್ರಕ್ರಿಯೆ ಕೊನೆಗೊಂಡಿದ್ದು ಮೈಸೂರು ನಗರವು ಭಾರತದಲ್ಲಿ ಮೂರನೇ ಅತ್ಯಂತ ಸ್ವಚ್ಛ ನಗರವೆಂದು ಸ್ವಚ್ಛ ಸರ್ವೇಕ್ಷಣ ಪುರಸ್ಕಾರಕ್ಕೆ ಪಾತ್ರವಾಗಿದೆ. ಮೊದಲ ಸ್ಥಾನ ಕಳೆದುಕೊಂಡು ಕಳೆದ ವರ್ಷ 21 ನೇ ಸ್ಥಾನಕ್ಕೆ ಕುಸಿದಿದ್ದ ಮೈಸೂರು ಪುನಃ ಟಾಪ್ 3 ಸ್ವಚ್ಛ ಸಿಟಿಗಳಲ್ಲಿ ಸ್ಥಾನ ಪಡೆದಿರುವುದು ಶ್ಲಾಘನೀಯ ಮತ್ತು ಯಶಸ್ಸಿನ ದೊಡ್ಡ ಪಾಲು ಮೈಸೂರು ಮಹಾನಗರ ಪಾಲಿಕೆ ಮತ್ತು ಅದರ ಕಮೀಷನರ್ಗೆ ಸಲ್ಲುತ್ತದೆ. ನಮ್ಮ ಮೈಸೂರು ಪ್ರತಿನಿಧಿಯು ಪಾಲಿಕೆ ಅಯುಕ್ತ ಶೇಖ್ ತನ್ವೀರ್ ಆಸಿಫ್ ಅವರೊಂದಿಗೆ ಮಾತಾಡಿದ್ದಾರೆ. ಸತತವಾಗಿ ಉತ್ತಮ ಸ್ಥಾನಗಳನ್ನು ಪಡೆಯುವ ನಗರಗಳನ್ನು ಬಿಟ್ಟು ಉಳಿದ ನಗರಗಳಿಗಾಗಿ ನಡೆಸಿದ ಸೂಪರ್ ಸ್ವಚ್ಛ ಲೀಗ್ ಸರ್ವೇಯಲ್ಲಿ ಮೈಸೂರು ಮೂರನೇ ಸ್ಥಾನ ಗಿಟ್ಟಿಸುವ ಮೂಲಕ ಎಲೀಟ್ ಲೀಗ್ ನಲ್ಲಿ ಸ್ಥಾನ ಪಡೆದುಕೊಂಡಿದೆ, ಹಾಗಾಗಿ ಸ್ಥಾನ ಉಳಿಸಿಕೊಳ್ಳುವ ಮತ್ತು ಉತ್ತಮಪಡಿಸಿಕೊಳ್ಳುವ ದಿಶೆಯಲ್ಲಿ ತಮ್ಮ ಜಬಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದು ತನ್ವೀರ್ ಅಸಿಫ್ ಹೇಳಿದರು.
ಇದನ್ನೂ ಓದಿ: ಹೆಚ್ಚುತ್ತಿರುವ ಹೃದಯಾಘಾತಗಳು; ಮೈಸೂರು ಜಯದೇವ ಹೃದ್ರೋಗ ಕೇಂದ್ರದಲ್ಲಿ ತಪಾಸಣೆಗೆ ನೂಕುನುಗ್ಗಲು!
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

