ಹೆಚ್ಚುತ್ತಿರುವ ಹೃದಯಾಘಾತಗಳು; ಮೈಸೂರು ಜಯದೇವ ಹೃದ್ರೋಗ ಕೇಂದ್ರದಲ್ಲಿ ತಪಾಸಣೆಗೆ ನೂಕುನುಗ್ಗಲು!
ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತಗಳು ಸಂಭವಿಸಿರುವುದಕ್ಕೆ ಕೋವಿಡ್ ಲಸಿಕೆಗಳೂ ಕಾರಣವಾಗಿರಬಹುದೆಂದು ಕೆಲ ವೈದ್ಯರು ಹೇಳುತ್ತಾರೆ, ಅದರೆ ಆ ಸಂಗತಿ ಅಧ್ಯಯನಗಳಿಂದ ದೃಢಪಟ್ಟಿಲ್ಲ. ತಜ್ಞರ ಪ್ರಕಾರ ಮಧುಮೇಹ, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ, ಖಿನ್ನತೆ ಮೊದಲಾದವು ಹೃದಯದ ಕಾಯಿಲೆಗಳನ್ನು ತಂದೊಡ್ಡುತ್ತವೆ. ಜೀವನಶೈಲಿಯಲ್ಲಿ ಭಾರೀ ಬದಲಾವಣೆಯಾಗಿರುವುದು ಕೂಡ ಹೃದ್ರೋಗ ಮತ್ತು ಹೃದಯಾಘಾತಗಳಿಗೆ ಕಾರಣವಾಗುತ್ತಿದೆ.
ಮೈಸೂರು, ಜುಲೈ 10: ಹೃದಯಾಘಾತದಿಂದ ಕೇವಲ ಹಾಸನ ಮಾತ್ರವಲ್ಲ, ಬೇರ ಜಿಲ್ಲೆಗಳಲ್ಲೂ ಜನ ಮರಣವನ್ನುಪ್ಪುತ್ತಿದ್ದಾರೆ. ಈ ವಿದ್ಯಮಾನ ಜನರ ನಿದ್ದೆಗೆಡಿಸಿದೆ ಮತ್ತು ತಪಾಸಣೆ ಮಾಡಿಸಿಕೊಳ್ಳಲು ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ನಗರದ ಜಯದೇವ ಹೃದ್ರೋಗ ಕೇಂದ್ರದಲ್ಲಿ ಇಂದು ಬೆಳಗ್ಗೆ ಕಂಡುಬಂದ ದೃಶ್ಯವಿದು. ಈ ಗುಂಪಿನಲ್ಲಿ ಎಲ್ಲ ವಯೋಮಾನಗಳ ಜನರಿದ್ದಾರೆ. ಎಲ್ಲರಿಗೂ ತಪಾಸಣೆ ಮಾಡಿಸಿಕೊಳ್ಳುವ ಆತುರ. 40 ವರ್ಷದೊಳಗಿನ ಜನರಲ್ಲಿ ಹೃದಯಾಘಾತಗಳ ಪ್ರಮಾಣ ಶೇಕಡ 50ರಷ್ಟು ಹೆಚ್ಚಿರುವುದು ಜನರಲ್ಲಿ ಆತಂಕಕ್ಕೆ ಕಾಣವಾಗಿದೆ. ಹೃದ್ರೋಗಗಳ ಪರೀಕ್ಷಣೆಗೆ ಅವಶ್ಯವಾಗಿರುವ ಈಸಿಜಿ, ಆ್ಯಂಜಿಯೋಗ್ರಾಮ್, ಡಾಪ್ಲರ್ ಟೆಸ್ಟ್, ಈಟಿಟಿ, ಎಂಆರ್ಐ, ಸಿಟಿ ಸ್ಕ್ಯಾನ್ ಗಳ ರಿಪೋರ್ಟ್ ಗಳೊಂದಿಗೆ ಜನ ಹೃದಯ ತಜ್ಞರ ಬಳಿ ಹೋಗುತ್ತಿರುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ: ಹಾಸನ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಲಸಿಕೆ ಕಾರಣವಾ? ಐಸಿಎಂಆರ್ ಅಧ್ಯಯನ ಏನು ಹೇಳುತ್ತೆ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ