ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆ ಹೆಚ್ಚಳ; ಸರಸ್ವತಿ ನಗರಕ್ಕೆ ಹೊಸ ಪೊಲೀಸ್ ಠಾಣೆ ಮಂಜೂರು
ಜಯನಗರದಲ್ಲಿ A ಪಟ್ಟಿ ರೌಡಿಶೀಟರ್ 42 ಜನ, ಬಿ ಪಟ್ಟಿ ರೌಡಿಶೀಟರ್ 51, ಒಟ್ಟು 93 ರೌಡಿಶೀಟರ್ಗಳಿದ್ದಾರೆ.
ಬೆಂಗಳೂರು: ನಗರದ ಪಶ್ಚಿಮ ವಿಭಾಗ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಕಾರಣ ಗೋವಿಂದರಾಜ ನಗರದ ಸರಸ್ವತಿ ನಗರದಲ್ಲಿ ನೂತನ ಪೊಲೀಸ್ ಠಾಣೆ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿ ಆದೇಶ ಪ್ರಕಟಿಸಿದೆ. ಅಪರಾಧ ಪ್ರಕರಣಗಳಾದ ಮೊಬೈಲ್ ಅಪಹರಣ, ಸರಗಳ್ಳತನ, ವಾಹನ ಕಳವು ಪ್ರಕರಣಗಳು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿವೆ. ವಿಜಯನಗರದಲ್ಲಿ A ಪಟ್ಟಿ ರೌಡಿಶೀಟರ್ 42 ಜನ, ಬಿ ಪಟ್ಟಿ ರೌಡಿಶೀಟರ್ 51, ಒಟ್ಟು 93 ರೌಡಿಶೀಟರ್ಗಳಿದ್ದಾರೆ. ಹಾಗಾಗಿ ವಿಜಯನಗರ ಠಾಣೆಯನ್ನ ವಿಭಜಿಸಿ ನೂತನ ಪೊಲೀಸ್ ಠಾಣೆ ತೆರೆಯಲು ಮನವಿ ಮಾಡಲಾಗಿತ್ತು. ಮನವಿಯನ್ನು ಪುರಸ್ಕರಿಸಿದ ಸರ್ಕಾರ ಅಪರಾಧ ಪ್ರಕರಣಗಳನ್ನು ತಡೆಯುವ ಕಾರಣದಿಂದ ಹೊಸ ಪೊಲೀಸ್ ಠಾಣೆ ತೆರೆಯಲು ಆದೇಶ ನೀಡಿದೆ.
ಹೆಬ್ಬಗೋಡಿ ಪೊಲೀಸ್ ಠಾಣೆಯ ಗೋಡೆಯಲ್ಲಿ ಬಿರುಕು ಮೆಟ್ರೋ ಕಾಮಗಾರಿಯ ಕಾರಣದಿಂದ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಾಮಗಾರಿ ನಡೆಸುತ್ತಿರುವ ಬಿಎಂಆರ್ಸಿಎಲ್ ಈಗಾಗಲೇ ಪೊಲೀಸ್ ಠಾಣೆಯನ್ನು ತೆರವುಗೊಳಿಸುವಂತೆ ಸೂಚಿಸಿದೆ. ಆದರೆ ಪೊಲೀಸ್ ಠಾಣೆಯ ಬಳಿಯ ಕಾಮಗಾರಿಯನ್ನು ಮುಂಚಿತವಾಗಿ ಮುಗಿಸಿಕೊಡಲು ಪೊಲೀಸ್ ಸಿಬ್ಬಂದಿ ಮನವಿ ಮಾಡಿದ್ದಾರೆ. ಮೆಟ್ರೋ ಪಿಲ್ಲರ್ ಮಧ್ಯೆಯೇ ಹೆಬ್ಬಗೋಡಿ ಉಪ ವಿಭಾಗ ಪೊಲೀಸ್ ಠಾಣೆಯಿದ್ದು, ಶಬ್ದ ಮಾಲಿನ್ಯದ ಮಧ್ಯೆ ಕೆಲಸ ಮಾಡಲು ಪೊಲೀಸರಿಗೆ ಕಿರಿಕಿರಿಯಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:
ಅಪರಾಧ ಸುದ್ದಿ: ಹುಡುಗಾಟಿಕೆಗೆ ವಿದ್ಯುತ್ ಕಂಬ ಹತ್ತಿದ ಯುವಕ ಕರೆಂಟ್ ಹೊಡೆದು ಅಲ್ಲೆ ನೇತಾಡಿದ
(Bengaluru Vijayanagar area crime rate increased Saraswathi Nagar gets new police station)