ಮ್ಯಾಟ್ರಿಮೋನಿಯಲ್ಲಿ ಮದುವೆಯಾಗುವುದಾಗಿ ನಂಬಿಸಿ ವಂಚನೆ; ಬೆಂಗಳೂರಿನಲ್ಲಿ ಆರೋಪಿ ಸೆರೆ
ಆರೋಪಿ ಜಗನ್ನಾಥ್ ಮೂಲತಃ ವಿಜಯಪುರದವನು. ಸಿವಿಲ್ ಇಂಜಿನಿಯರ್ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ. ಆಕ್ಸಿಡೆಂಟ್ ಆಗಿದೆ. ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದೆ. ಸೈಟ್ ಖರೀದಿ ಮಾಡಲಿಕ್ಕೆ ಹಣ ಬೇಕು ಅಂತ ವಸೂಲಿ ಮಾಡುತ್ತಿದ್ದ.
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಹೆಣ್ಣೂರು ಪೊಲೀಸರು 34 ವರ್ಷದ ಜಗನ್ನಾಥ್ ಎಂಬುವವನ್ನು ಬಂಧಿಸಿದ್ದಾರೆ. ಮ್ಯಾಟ್ರಿಮೋನಿಯಲ್ಲಿ (Matrimony) ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿ ಜಗನ್ನಾಥ್, ಹಣ, ಒಡವೆ ಪಡೆಯುತ್ತಿದ್ದ. ಈತ 30 ವರ್ಷ ಮೇಲ್ಪಟ್ಟ ವಿಚ್ಛೇದಿತ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಅಪಘಾತವಾಗಿದೆ ಹಣ ಬೇಕೆಂದು ಪಡೆದು ವಂಚನೆ ಮಾಡುತ್ತಿದ್ದ. ಈವರೆಗೆ 10 ಮಹಿಳೆಯರಿಗೆ ಆರೋಪಿ ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಆರೋಪಿ ಜಗನ್ನಾಥ್ ಮೂಲತಃ ವಿಜಯಪುರದವನು. ಸಿವಿಲ್ ಇಂಜಿನಿಯರ್ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ. ಆಕ್ಸಿಡೆಂಟ್ ಆಗಿದೆ. ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದೆ. ಸೈಟ್ ಖರೀದಿ ಮಾಡಲಿಕ್ಕೆ ಹಣ ಬೇಕು ಅಂತ ವಸೂಲಿ ಮಾಡುತ್ತಿದ್ದ. ಆರೋಪಿ ವಿರುದ್ಧ ಇದುವರೆಗೆ ಮೂರು ಯುವತಿಯರು ದೂರು ನೀಡಿದ್ದಾರೆ. ಬನಶಂಕರಿ ಹೆಣ್ಣೂರು ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಜಗನ್ನಾಥ್ ಈ ಹಿಂದೆ ಕಾರಿನಲ್ಲಿ ಆಕ್ಸಿಡೆಂಟ್ ಆಗಿದ್ದ ಫೋಟೋ ಬಳಸಿ ಹಣ ವಸೂಲಿ ಮಾಡುತ್ತಿದ್ದ. ಮೊದಲೆರಡು ಬಾರಿ ಯುವತಿಯರನ್ನ ಭೇಟಿ ಆಗಿ ಮದುವೆಯಾಗುವುದಾಗಿ ನಂಬಿಸುತ್ತಿದ್ದ. ನಂತರ ಬೇರೆ ಬೇರೆ ಕಾರಣ ಹೇಳಿ ಹಣ ವಸೂಲಿ ಮಾಡುತ್ತಿದ್ದ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಮ್ಯಾಟ್ರಿಮೋನಿಯಲ್ಲಿ ಟಾರ್ಗೆಟ್ ಮಾಡುತ್ತಿದ್ದ ಆರೋಪಿ ಬಂಧನ ಇದೇ ರೀತಿ ಸುಮಾರು 12 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಸುಮಾರು 12 ಮಹಿಳೆಯರನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ 37 ವರ್ಷದ ವ್ಯಕ್ತಿಯನ್ನು ನವೀ ಮುಂಬೈ ಪೊಲೀಸರು ಮಲಾಡ್ ಎಂಬಲ್ಲಿ ಬಂಧಿಸಿದ್ದರು. ಈತನ ಹೆಸರು ಮಹೇಶ್ ಅಲಿಯಾಸ್ ಕರಣ್ ಗುಪ್ತಾ. ಇವನು ಮೆಕ್ಯಾನಿಕಲ್ ಇಂಜನಿಯರ್ ಆಗಿದ್ದು, ಹಲವು ಗೌರವಾನ್ವಿತ ಕಂಪನಿಗಳಲ್ಲಿ ಕೆಲಸ ಕೂಡ ಮಾಡಿದ್ದಾನೆ. ಮ್ಯಾಟ್ರಿಮೋನಿ ಮೂಲಕ ಮಹಿಳೆಯರನ್ನು ವಂಚಿಸಿ ಅತ್ಯಾಚಾರ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದರು.
ಇದನ್ನೂ ಓದಿ
ಕಳಪೆ ಕಾಮಗಾರಿಯಿಂದ ಬೆಂಗಳೂರಿನಲ್ಲಿ ಅನಾಹುತ, ರಸ್ತೆಯೊಳಕ್ಕೆ ಇಳಿಯಿತು ಲಾರಿ ಚಕ್ರ
ಹಾಸನದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಧಿಕ್ಕಾರ; ಸಭೆ ಮೊಟಕುಗೊಳಿಸಿ ತೆರಳಿದ ಸ್ವಾಮೀಜಿ
(Bengaluru Police arrested a man accused of cheating on matrimony)