ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗೆ ಬರುವ ಸಾರ್ವಜನಿಕರಿಗೆ ಮೊಬೈಲ್ ನಿಷೇಧ ಮಾಡಲಾಗಿದೆ. ಸಿಎಂ ನಿವಾಸಕ್ಕೆ ಮೊಬೈಲ್ ಕೊಂಡೊಯ್ಯುವುದು ನಿಷೇಧದ ಬಗ್ಗೆ ಬೆಂಗಳೂರಿನ ಆರ್.ಟಿ.ನಗರದ ಸಿಎಂ ಬೊಮ್ಮಾಯಿ ನಿವಾಸದ ಎಂಟ್ರೆನ್ಸ್ನಲ್ಲಿ ಬೋರ್ಡ್ ಹಾಕಲಾಗಿದೆ.
ಸಿಎಂ ಬಸವರಾಜ ಬೊಮ್ಮಯಿಯವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬರುವ ಸಾರ್ವಜನಿಕರು ಮೊಬೈಲ್ ಅನ್ನು ಸಿಬ್ಬಂದಿ ಬಳಿಯೇ ನೀಡಿ ಹೋಗಬೇಕು. ಮೊಬೈಲ್ ಜೊತೆಯೇ ಸಿಎಂ ಭೇಟಿ ಮಾಡುವಂತಿಲ್ಲ. ಸಿಎಂ ಭೇಟಿಗೆ ಬರುವ ಸಾರ್ವಜನಿಕರಿಗೆ ಮೊಬೈಲ್ ನಿಷೇಧ ಮಾಡಲಾಗಿದೆ.
ಈ ಹಿಂದೆ ಅಪರೇಷನ್ ಕಮಲ ಆದಾಗಲೂ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ತಮ್ಮ ನಿವಾಸಕ್ಕೆ ಬರುವ ಎಲ್ಲರಿಗೂ ಮೊಬೈಲ್ ನಿಷೇಧ ಮಾಡಿದ್ದರು. ತಮ್ಮನ್ನು ಭೇಟಿ ಮಾಡಲು ಬೆಂಗಳೂರಿನ ಡಾಲರ್ಸ್ ಕಾಲೋನಿಗೆ ಬರುವ ಕಾರ್ಯಕರ್ತರು, ಮುಖಂಡರು ಮೊಬೈಲ್ ತರಬಾರದೆಂದು ಆದೇಶ ನೀಡಿದ್ದರು.
ಇದನ್ನೂ ಓದಿ: ಇಂದಿನಿಂದ ಬಿಜೆಪಿ ‘ಜನಾಶೀರ್ವಾದ ಯಾತ್ರೆ’ ಆರಂಭ; ಕೆಲ ಮಾಹಿತಿ ಇಲ್ಲಿದೆ ನೋಡಿ