ಬೆಂಗಳೂರು: ಹಿಂದೂಗಳ ಹೊಸ ವರ್ಷ ಯುಗಾದಿಯನ್ನು(Ugadi) ಸಿಟಿ ಮಂದಿ ಸಂಭ್ರಮ-ಸಡಗರ, ಪೂಜೆ-ಪುನಸ್ಕಾರದೊಂದಿಗೆ ಬರಮಾಡಿಕೊಂಡಿದ್ದು ಯುಗಾದಿಯ ಮಾರನೇ ದಿನ ಅಂದ್ರೆ ಇಂದು (ಮಾರ್ಚ್ 23) ಎಲ್ಲೆಡೆ ಹೊಸತೊಡಕಿಗಾಗಿ(Hosatodaku) ಸಿದ್ಧತೆ ನಡೆದಿದೆ. ಮಟನ್, ಚಿಕನ್ ಅಂಗಡಿಗಳ ಮುಂದೆ ಸರತಿ ಸಾಲು ಕಂಡು ಬರುತ್ತಿದೆ. ಬೆಳಗ್ಗೆ 6 ಗಂಟೆಯಿಂದಲೇ ಜನ ಮಾಂಸದಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಹಳ್ಳಿಗಳಲ್ಲಿ ಗುಡ್ಡೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ.
ದೇವನಹಳ್ಳಿ ತಾಲೂಕಿನ ಹಲವೆಡೆ ರಾತ್ರಿಯಿಡಿ ಕುರಿಗಳ ಕಟಾವು ಮಾಡಲಾಗಿದೆ. ಯಲಿಯೂರು ಬಳಿ ರಾತ್ರಿಯಿಡಿ ಸಾವಿರಾರು ಕೆಜಿ ಕುರಿ ಮಾಂಸ ಕಟಾವು ಮಾಡಿ ಸಿದ್ಧತೆ ಮಾಡಿಕೊಂಡಿದ್ದು ಹೊಸತೊಡಕು ಮಾಡಲು ಮಾಂಸದಂಗಡಿಗಳಿಗೆ ಜನ ಮುಗಿಬಿದ್ದಿದ್ದಾರೆ. ಕುರಿಮಾಂಸ ಕಳೆದ ವರ್ಷಕ್ಕಿಂತ ಈ ಬಾರಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಒಂದು ಕೆಜಿಗೆ 700 ರೂ ದರ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: Ugadi 2023: ಸ್ಯಾಂಡಲ್ ವುಡ್ ನಟಿಮಣಿಯರ ಯುಗಾದಿ ಸಂಭ್ರಮ
ಇನ್ನು ಈ ಬಾರಿ 18 ಜಟ್ಕಾ ಕಟ್ ಅಂಗಡಿಗಳು ಓಪನ್ ಆಗಿವೆ. ಹಲಾಲ್ ಬಾಯ್ಕಾಟ್ ಅಭಿಯಾನದ ಹಿನ್ನೆಲೆ ರಾಜಸ್ಥಾನದ ಅಜ್ಮೇರ್ ನಿಂದ 200, ಬಾಸವನಬಾಗೇವಾಡಿ, ಮಧುಗಿರಿಯಿಂದ 400. ಒಟ್ಟು 600 ಕುರಿ ಮತ್ತು ಮೇಕೆಗಳು ರಾಜಧಾನಿಗೆ ಬಂದಿವೆ. ಕಳೆದ ಬಾರಿ ನಾಲ್ಕು ಜಟ್ಕಾ ಕಟ್ ಶಾಪ್ಗಳನ್ನು ತೆರೆಯಲಾಗಿತ್ತು. ಈ ಬಾರಿ ಹದಿನೆಂಟು ಅಂಗಡಿಗಳನ್ನು ತೆರೆಯಲಾಗಿದೆ. ಕಮ್ಮನಹಳ್ಳಿ, ಇಟ್ಟಮಡು, ದಾಸರಹಳ್ಳಿ, ಸಂಜಯ್ ನಗರ, ಗೆದ್ದಲಹಳ್ಳಿ, ಯಲಹಂಕ, ಇಂದಿರಾನಗರ, ಟ್ಯಾನರಿ ರಸ್ತೆ, ಹೊರಮಾವು, ಅನ್ನಪೂರ್ಣೇಶ್ವರಿನಗರ ಸೇರಿದಂತೆ 18 ಅಂಗಡಿಗಳನ್ನು ತೆರೆಯಲಾಗಿದೆ.
ಕಳೆದ ಬಾರಿಯಂತೆ ಈ ಬಾರಿಯು ಮುಸ್ಲಿಂ ವ್ಯಾಪಾರಿಗಳಿಗೆ ಠಕ್ಕರ್ ಕೊಡಲು 12 ಸಾವಿರ ಕೆಜಿ ಜಟ್ಕಾ ಕಟ್ ಮಾಂಸ ಕಟ್ ಮಾಡಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯು ಆನ್ಲೈನ್ ಮತ್ತು ಡೋರ್ ಡೆಲಿವರಿ ವ್ಯವಸ್ಥೆ ಮಾಡಲಾಗಿದೆ. ಹಿಂದೂಪರ ಸಂಘಟನೆಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿವೆ. 2 ಕೆಜಿ ಮಟನ್, 2 ಕೆಜಿ ಚಿಕನ್, 6 ಮೊಟ್ಟೆ 1999 ರೂ ಕಾಂಬೋ ನೀಡಲಾಗುತ್ತಿದೆ. ಹಿಂದವೀ ಮೀಟ್ ಮಾರ್ಟ್ 1200 ಸಾವಿರ ಕೆಜಿ ಜಟ್ಕಾ ಕಟ್ ರೆಡಿ ಮಾಡಿದೆ. ಗುಡ್ಡೆ ಮಾಂಸ ಕೆಜಿ- 650, ಕೆಜಿ ಮಟನ್- 700, ಚಿಕನ್- 130 ರಿಂದ 140 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ