AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿ ಬಸ್​ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್, ಬೆಂಕಿ ಹೊತ್ತಿಕೊಳ್ಳುವ ಮುನ್ನ ಹಣ ವರ್ಗಾವಣೆ

ಬಿಎಂಟಿಸಿ ಬಸ್​​ ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ರೋಚಕ ವಿಚಾರ ಬೆಳಕಿಗೆ ಬಂದಿದೆ.

ಬಿಎಂಟಿಸಿ ಬಸ್​ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್, ಬೆಂಕಿ ಹೊತ್ತಿಕೊಳ್ಳುವ ಮುನ್ನ ಹಣ ವರ್ಗಾವಣೆ
ಬಿಎಂಟಿಸಿ ಬಸ್​ನಲ್ಲಿ ಸಜೀವ ದಹನವಾದ ಕಂಡಕ್ಟರ್
ರಮೇಶ್ ಬಿ. ಜವಳಗೇರಾ
|

Updated on:Mar 23, 2023 | 11:17 AM

Share

ಬೆಂಗಳೂರು: ಬಿಎಂಟಿಸಿ ಬಸ್​ಗೆ ಬೆಂಕಿ ತಗುಲಿ ನಿರ್ವಾಹಕ(BMTC Bus Conductor) ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಬಿಎಂಟಿಸಿ ಕಂಡಕ್ಟರ್ ಮುತ್ತಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಾರ್ಚ್ 9 ರಂದು ಬ್ಯಾಡರಹಳ್ಳಿ ನಿಲ್ದಾಣದಲ್ಲಿ ಸುಮ್ಮನಹಳ್ಳಿ ಡಿಪೋ 31ಕ್ಕೆ ಸೇರಿದ್ದ ಬಿಎಂಟಿಸಿ ಬಸ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆಯಲ್ಲಿ ಕಂಡಕ್ಟರ್​ ಮುತ್ತಯ್ಯ ಸಜೀವ ದಹನವಾಗಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ರೋಚಕ ವಿಚಾರಗಳು ಬೆಳಕಿಗೆ ಬಂದಿವೆ. ಮೃತ ಕಂಡಕ್ಟರ್​ ಮುತ್ತಯ್ಯ ಅವರ ಮೊಬೈಲ್ ಹಾಗೂ ಯುಪಿಐ ಐಡಿ ಪರಿಶೀಲನೆ ನಡೆಸಿದ್ದು, ಅಗ್ನಿ ದುರಂತದ ರಾತ್ರಿ ಮುತ್ತಯ್ಯ ಯುಪಿಐ ಐಡಿಯಿಂದ ಕೊನೆಯದಾಗಿ ಹಣ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಅಗ್ನಿ ದುರಂತ ಸಂಭವಿಸಿದ ಸ್ಥಳದಿಂದ ಕೊಂಚ ದೂರ ಇರುವ ಪೆಟ್ರೋಲ್ ಬಂಕ್ ಖಾತೆಗೆ 700 ರೂಪಾಯಿ ಹಣ ವರ್ಗಾವಣೆಯಾಗಿದ್ದು, ಪೆಟ್ರೋಲ್, ಡಿಸೇಲ್ ಖರೀದಿಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಎರಡು ಲೀಟರ್ ಪೆಟ್ರೋಲ್, ಐದು ಲೀಟರ್ ಡಿಸೇಲ್ ತಂದು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎನ್ನುವ ಬಗ್ಗೆ ಕೆಲವು ಪೂರಕ ಅಂಶಗಳು ಪತ್ತೆಯಾಗಿವೆ.

ಇದನ್ನೂ ಓದಿ: ಬಿಎಂಟಿಸಿ ಬಸ್​ನಲ್ಲಿ ಕಂಡಕ್ಟರ್ ಸಜೀವ ದಹನ:​ ನಿರ್ವಾಹಕ ಸಾವಿನ ಸುತ್ತ ಅನುಮಾನಗಳ ಹುತ್ತ

ಬಸ್ ಹಾಲ್ಟ್ ಆದ ನಂತರ ಹೊರ ಹೋಗಿ ಬಂದಿದ್ದ ಮುತ್ತಯ್ಯ, ಡ್ರೈವರ್ ಪ್ರಕಾಶ್ ನನ್ನ ಮಲಗುವಂತೆ ಹೇಳಿ ಕಳುಹಿಸಿದ್ದರು. ಬಳಿಕ ಡ್ರೈವರ್ ಮಲಗಿದ ನಂತರ ಮುತ್ತಯ್ಯ ಬಸ್ ನಿಂದ ಹೊರ ಹೋಗಿ ಬಂದಿರುವ ಮಾಹಿತಿ ಸಿಕ್ಕಿದೆ. ಅಲ್ಲದೇ ಬಸ್​ನ ಎಲ್ಲ ಕಿಟಕಿಗಳು ಹಾಗೂ ಡೋರ್ ಒಳಗಿನಿಂದ ಕ್ಲೋಸ್ ಆಗಿದ್ದವು ಎನ್ನುವುದು ಕೂಡು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಬೆಂಕಿ ಹೊತ್ತಿಕೊಂಡ ನಂತರ ಬೆಂಕಿಯ ತೀವ್ರತೆ ಮತ್ತು ಹೊಗೆಯಿಂದಾಗಿ ಕಿಟಕಿ ಗಾಜುಗಳು ಸ್ಪೋಟಗೊಂಡಿರುವ ಶಂಕೆ ವ್ಯಕ್ತವಾಗಿದ್ದು, ಆದ್ರೆ ಈ ಎಲ್ಲದಕ್ಕೂ ಎಫ್ಎಸ್ಎಲ್ ರಿಪೋರ್ಟ್ ನಿಂದ ಅಂತಿಮ ಸತ್ಯ ತಿಳಿಯಲಿದೆ. ಇದಲ್ಲದೆ ಕೆಲವು ತಾಂತ್ರಿಕ ಮತ್ತು ವೈಜ್ಞಾನಿಕ ಎವಿಡೆನ್ಸ್ ಕಲೆ ಹಾಕುತ್ತಿರುವ ಪೊಲೀಸರು, ಮುತ್ತಯ್ಯ ಹಣಕಾಸು ವಿಚಾರದ ಬಗ್ಗೆ ಸಂಬಂಧಪಟ್ಟವರನನ್ನು ವಿಚಾರಣೆ ನಡೆಸಿದ್ದಾರೆ. ಎಫ್ಎಸ್ಎಲ್ ರಿಪೋರ್ಟ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಹೇಗೆ, ಕಾರಣ ಏನು ಎಂಬುದು ತಿಳಿಯಬೇಕು.

ಪೊಲೀಸರ ಗುಮಾನಿಗೆ ಕಾರಣಗಳೇನು ಗೊತ್ತಾ?

  •  ಬಸ್ ಹಾಲ್ಟ್ ಆದ ನಂತರ ಹೊರ ಹೋಗಿ ಬಂದಿರುವ ಮುತ್ತಯ್ಯ
  • ಡ್ರೈವರ್ ಪ್ರಕಾಶ್ ನನ್ನ ಮಲಗುವಂತೆ ಹೇಳಿ ಕಳುಹಿಸಿದ್ದ ಕಂಡಕ್ಟರ್
  • ಡ್ರೈವರ್ ಮಲಗಿದ ನಂತರ ಮುತ್ತಯ್ಯ ಬಸ್ ನಿಂದ ಹೊರ ಹೋಗಿ ಬಂದಿರುವ ಮಾಹಿತಿ ಪತ್ತೆ
  • ರಾತ್ರಿಯಲ್ಲಿ ಮುತ್ತಯ್ಯ ಯುಪಿಐ ಐಡಿಯಿಂದ ಕೊನೆಯದಾಗಿ ಹಣ ವರ್ಗಾವಣೆ
  • ಸುಮಾರು 700 ರೂಪಾಯಿ ಹಣ ವರ್ಗಾವಣೆ ಬೆಳಕಿಗೆ
  • ಹಣ ವರ್ಗಾವಣೆಯಾಗಿರುವುದು ಸ್ವಲ್ಪ ದೂರದಲ್ಲಿದ್ದ ಪೆಟ್ರೋಲ್ ಬಂಕ್ ಖಾತೆಗೆ
  • ಈ ಬಗ್ಗೆ ಮೊಬೈಲ್ ಹಾಗೂ ಯುಪಿಐ ಐಡಿ ಪರಿಶೀಲನೆ ನಡೆಸಿದ ಬ್ಯಾಡರಹಳ್ಳಿ ಪೊಲೀಸರು
  • ಪೆಟ್ರೋಲ್ ಬಂಕ್ ಗೆ ಹಣ ಪಾವತಿಸಿ ಪೆಟ್ರೋಲ್, ಡಿಸೇಲ್ ಖರೀದಿ
  • ಪೆಟ್ರೋಲ್, ಡಿಸೇಲ್ ಖರೀದಿ ಬಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿಯಿಂದ ಮಾಹಿತಿ
  • ಎರಡು ಲೀಟರ್ ಪೆಟ್ರೋಲ್, ಐದು ಲೀಟರ್ ಡಿಸೇಲ್ ತಂದು ಬೆಂಕಿ ಹಚ್ಚಿಕೊಂಡಿರುವ ಶಂಕೆ
  • ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಅನ್ನೋ ಬಗ್ಗೆ ಕೆಲವು ಪೂರಕ ಅಂಶಗಳು ಪತ್ತೆ
  • ಯುಪಿಐ ಐಡಿ ಮೂಲಕ ಹಣ ವರ್ಗಾವಣೆ, ಪೆಟ್ರೋಲ್ ಬಂಕ್ ಸಿಸಿಟಿವಿ ವಿಡಿಯೋ ಸಂಗ್ರಹಿಸಿದ ಪೊಲೀಸರು
  • ಬಸ್ ನ ಎಲ್ಲ ಕಿಟಕಿಗಳು ಹಾಗೂ ಡೋರ್ ಒಳಗಿನಿಂದ ಕ್ಲೋಸ್ ಮಾಡಲಾಗಿದೆ
  • ಬೆಂಕಿ ಹೊತ್ತಿಕೊಂಡ ನಂತರ ಬೆಂಕಿಯ ತೀವ್ರತೆ ಮತ್ತು ಹೊಗೆಯಿಂದಾಗಿ ಕಿಟಕಿ ಗಾಜುಗಳು ಸ್ಪೋಟಗೊಂಡಿರುವ ಶಂಕೆ
  • ಸದ್ಯ ಹಲವು ಆಯಾಮಗಳಲ್ಲಿ ತನಿಖೆ ನಡೆಸಿರೋ ಪೊಲೀಸರು

Published On - 11:16 am, Thu, 23 March 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ