ಬಿಎಂಟಿಸಿ ಬಸ್​ನಲ್ಲಿ ಕಂಡಕ್ಟರ್ ಸಜೀವ ದಹನ:​ ನಿರ್ವಾಹಕ ಸಾವಿನ ಸುತ್ತ ಅನುಮಾನಗಳ ಹುತ್ತ

ಬಿಎಂಟಿಸಿ ಬಸ್​ನಲ್ಲಿ ಸಜೀವ ದಹನವಾಗಿದ್ದ ಕಂಡಕ್ಟರ್ ಸಾವಿನ ಸುತ್ತ ಅನುಮಾನಗಳು ಹುತ್ತ ಹುಟ್ಟಿಕೊಂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹಾಗಾದ್ರೆ, ತನಿಖೆ ವೇಳೆ ಪೊಲೀಸರಿಗೆ ಅನುಮಾನಗಳು ಮೂಡಿಸಿದ ಅಂಶಗಳಾವುವು? ಇಲ್ಲಿದೆ ನೋಡಿ.

ಬಿಎಂಟಿಸಿ ಬಸ್​ನಲ್ಲಿ ಕಂಡಕ್ಟರ್ ಸಜೀವ ದಹನ:​ ನಿರ್ವಾಹಕ ಸಾವಿನ ಸುತ್ತ ಅನುಮಾನಗಳ ಹುತ್ತ
ಬಿಎಂಟಿಸಿ ಬಸ್​ನಲ್ಲಿ ಸಜೀವ ದಹನವಾದ ಕಂಡಕ್ಟರ್
Follow us
ರಮೇಶ್ ಬಿ. ಜವಳಗೇರಾ
|

Updated on: Mar 12, 2023 | 9:45 AM

ಬೆಂಗಳೂರು: ಮೊನ್ನೇ ಅಂದ್ರೆ ಮಾರ್ಚ್​ 10ರಂದು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ನಲ್ಲಿ(BMTC Bus) ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಕಂಡಕ್ಟರ್​ ಸಜೀವ ದಹನವಾಗಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಉದ್ಭವಿಸಿವೆ. ಬಸ್​​ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಆಕಸ್ಮಿಕವೋ ಅಥವಾ ಕೊಲೆಯೋ ಎನ್ನುವ ಅನುಮಾನಗಳು ಹುಟ್ಟುಕೊಂಡಿದ್ದು, ಪೊಲೀಸರು​ ತನಿಖೆ ಚುರುಕುಗೊಳಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಬಸ್​ ಡ್ರೈವರ್ ಪ್ರಕಾಶ್​ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈಗಾಗಲೇ ಎರಡು ಬಾರಿ ನೊಟೀಸ್ ನೀಡಿ ವೇಳೆ ವಿಚಾರಣೆ ಮಾಡಿದ್ದು, ತನಿಖೆ ವೇಳೆ ಪೊಲೀಸರಿಗೆ ಹಲವು ರೀತಿಯ ಅನುಮಾನಗಳು ಮೂಡಿಸಿವೆ.

ಇದನ್ನೂ ಓದಿ: BMTC ಬಸ್​​ನಲ್ಲಿ ಅಗ್ನಿ ದುರಂತ, ಮಲಗಿದ್ದ ಕಂಡಕ್ಟರ್​​ ಸಜೀವ ದಹನ, ಡ್ರೈವರ್ ಪಾರು

ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಡ್ರೈವರ್ ಪ್ರಕಾಶ್ ಪೊಲೀಸ್ ವಿಚಾರಣೆಯಲ್ಲಿ ಹೇಳಿದ್ದಾರೆ. ಆದ್ರೆ ರಾತ್ರಿ 10:30ಕ್ಕೆ ನಿಲ್ಲಿಸಿದ್ದ ಬಸ್ ನಲ್ಲಿ ಮುಂಜಾನೆ 4:40ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಇಂಜ‌ನ್ ಆನ್​ನಲ್ಲಿ ಇದ್ರೆ ಶಾರ್ಟ್ ಸಕ್ಯೂಟ್ ನಿಂದ ಬೆಂಕಿ ಹೊತ್ತಿಕೊಳ್ಳುತ್ತೆ. ಆದರೆ ಇಂಜಿನ್​ ಬಂದ್​ ಆಗಿ ನಿಂತಿದ್ದ ಬಸ್​ನಲ್ಲಿ ಶಾರ್ಟ್ ಸರ್ಕ್ಯೂಟ್​ ಹೇಗಾಯ್ತು ಎನ್ನುವ ಅನುಮಾನ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.

ಡ್ರೈವರ್ ಪ್ರಕಾಶ್ ಹೇಳಿಕೆ ಜೊತೆಗೆ ಬಸ್ ನಿಲ್ದಾಣದ ಸಿಸಿ ಕ್ಯಾಮರಾ ವಿಶುಯಲ್ ಸಹ ಪರಿಶೀಲನೆ ನಡೆಸಿದ್ದು, ಬಸ್​ನಲ್ಲಿ ಮುತ್ತಯ್ಯ ಒಬ್ಬರೇ ಮಲಗಿದ್ದು ಡ್ರೈವರ್ ಪ್ರಕಾಶ್ ಚಾಲಕರು ತಂಗುವ ಕೊಠಡಿಯಲ್ಲಿ ಮಲಗಿದ್ದರು. ಆದರೆ, ಡ್ರೈವರ್ ಪ್ರಕಾಶ್​ ಎರಡು ಬಾರಿ ಎದ್ದಿದ್ದಾರೆ. ಮಧ್ಯರಾತ್ರಿ 3 ಗಂಟೆ ಒಮ್ಮೆ ಹಾಗೂ ಬೆಳಗ್ಗೆ 4 ಗಂಟೆಗೆ ಒಮ್ಮೆ ಎದ್ದಿದ್ದರು. ಬೆಂಕಿ ಅವಘಡ ಸಂಭವಿಸಿರುವುದು ಬೆಳಗ್ಗೆ 4:26ಕ್ಕೆ. ಹೀಗಾಗಿ ಇದೊಂದು ಸಹ ಅನುಮಾನಕ್ಕೆ ಕಾರಣವಾಗಿದೆ.

ಫೆಬ್ರುವರಿಯಲ್ಲಿ ಬಸ್ ಸಂಪೂರ್ಣ ಕಂಡೀಷನ್ ಪರಿಶೀಲನೆ ಮಾಡಲಾಗಿದ್ದು, ಪರಿಶೀಲನೆ ವೇಳೆ ಯಾವುದೇ ತೊಂದರೆ ಇರಲಿಲ್ಲ ಎಂದು ಪೊಲೀಸರ ವಿಚಾರಣೆಯಲ್ಲಿ ಬಿಎಂಟಿಸಿ ಅಧಿಕಾರಿಗಳು ಸಹ ಸ್ಪಷ್ಟಪಡಿಸಿದ್ದಾರೆ. ಹಾಗಾದ್ರೆ ಏಬು ತೊಂದರೆ ಇಲ್ಲದೇ ನಿಂತಿದ್ದ ಬಸ್‌ನಲ್ಲಿ ಹೇಗೆ ಬೆಂಕಿ ಅವಘಡ ಆಯ್ತು ಎನ್ನುವುದು ಸಹ ಅನುಮಾನಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. FSL ತಂಡ ಈಗಾಗಲೇ ಘಟನೆ ನಡೆದ ಬಸ್ ಪರಿಶೀಲನೆ‌ ಮಾಡಿ ಸ್ಯಾಂಪಲ್‌ ಕಲೆಕ್ಟ್ ಮಾಡಿಕೊಂಡಿಕೊಂಡಿದೆ. ಇದರ ಜೊತೆಗೆ ಕೆಲ ​ತಜ್ಞರನ್ನು ಕರೆಸಿ ಪರಶೀಲನೆ ಮಾಡಿಸಲಾಗಿದೆ. ಇದೀಗ ತನಿಖೆ ವೇಳೆ ಹಲವು ಅನುಮಾನ ಬಂದಿದ್ದರಿಂದ ಬೇಗ ಎಲ್ಲಾ ರಿಪೋರ್ಟ್ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಇಂಜನ್ ಆಫ್​ ಆಗಿ ನಿಂತಿದ್ದ ಬಸ್​ನಲ್ಲಿ ಶಾರ್ಟ್​ ಸೆರ್ಕ್ಯೂಟ್​ ಆಗುವುದಿಲ್ಲ. ಒಂದು ವೇಳೆ ಆದರೂ ಬೆಂಕಿ ನಿಧಾನವಾಗಿಯೇ ಹೊತ್ತಿಕೊಳ್ಳುತ್ತೆ. ಇನ್ನು ಯಾವುದೇ ವ್ಯಕ್ತಿ ಮಲಗಿದ್ದರೂ ಬೆಂಕಿಯ ಹೊಗೆಯಿಂದ ಉಸಿರಾಟದ ಸಮಸ್ಯೆ ಉಂಟಾಗುತ್ತೆ. ಅಗ್ನಿ ಶಾಖಕ್ಕೆ ​​ಮಲಗಿರುವ ವ್ಯಕ್ತಿ ಎಚ್ಚರಗೊಂಡು ರಕ್ಷಣೆ ಮಾಡಿಕೊಳ್ಳಲು ಓಡಾಡುತ್ತಾನೆ. ಆದ್ರೆ, ಕಂಡಕ್ಟರ್​​ ಮುತ್ತಯ್ಯ ಸ್ವಾಮಿ ಬಸ್​ನಲ್ಲಿ ಮಲಗಿದ್ದಲ್ಲೇ ಸುಟ್ಟು ಕರಕಲಾಗಿದ್ದಾರೆ.

ಒಟ್ಟಿನಲ್ಲಿ ಇದೀಗ ಬಿಎಂಟಿಸಿ ಕಂಡಕ್ಟರ್​ ಮುತ್ತಯ್ಯಸ್ವಾಮಿ ಸಾವಿನ ಸುತ್ತ ಅನುಮಾನಗಳ ಹುತ್ತ ಹುಟ್ಟಿಕೊಂಡಿದ್ದು, ವಿಧಿ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಬಂದ ಬಳಿಕ ಅಸಲಿ ಸತ್ಯ ಬಯಲಿಗೆ ಬರಲಿದೆ.

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್