Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯೋಗಿಗಳು ವರ್ಕ್​ ಫ್ರಂ​ ಹೋಂ​​ನಿಂದ ಕಚೇರಿಗೆ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಗನಕ್ಕೇರಿದ ಮನೆ ಬಾಡಿಗೆ

ಐಟಿ ಪಾರ್ಕ್ ಸುತ್ತಮುತ್ತ ಶೇ. 20 ರಿಂದ 30 ರಷ್ಟು ಮನೆ ಬಾಡಿಗೆ ಹೆಚ್ಚಳವಾಗಿದೆ. ಹೀಗಾಗಿ ಬಾಡಿಗೆ ಮನೆ ಬದಲು ಹೊಸ ಅಪಾರ್ಟ್‌ಮೆಂಟ್‌ ಖರೀದಿ ಬೆಸ್ಟ್ ಎಂದು ಕೆಲ ಟೆಕ್ಕಿಗಳು ಅಭಿಪ್ರಾಯಪಟ್ಟಿದ್ದಾರೆ.

ಉದ್ಯೋಗಿಗಳು ವರ್ಕ್​ ಫ್ರಂ​ ಹೋಂ​​ನಿಂದ ಕಚೇರಿಗೆ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಗನಕ್ಕೇರಿದ ಮನೆ ಬಾಡಿಗೆ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: Mar 12, 2023 | 2:48 PM

ಬೆಂಗಳೂರು: ಮಹಾಮಾರಿ ಕೊರೊನಾ(Coronavirus) ಹಿನ್ನೆಲೆ ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್(Work From Home) ನೀಡಿತ್ತು. ಹೀಗಾಗಿ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಹೋಗಿ ಕೆಲಸ ಮಾಡುತ್ತಿದ್ದರು. ಆದ್ರೆ ಈಗ ಕಂಪನಿಗಳು ಕಚೇರಿಗೆ ಬರುವಂತೆ ಆದೇಶಿಸಿದ್ದು ಐಟಿ‌ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಪಡೆಯಲು ಸಂಕಷ್ಟ ಎದುರಾಗಿದೆ(House Rent Increased). ನಗರದಲ್ಲಿ ಮನೆ ಬಾಡಿಗೆ ಗಗನಕ್ಕೇರಿದೆ. ಮನೆ ಬಾಡಿಗೆಯಿಂದ‌ ಟೆಕ್ಕಿಗಳಿಗೆ ಸಂಕಷ್ಟದಲ್ಲಿ ಸಿಲುಕಿಕೊಂಡಂತಾಗಿದೆ.

ನಗರದಲ್ಲಿನ ಟೆಕ್ ಕಾರಿಡಾರ್‌ಗಳಲ್ಲಿ ಮತ್ತು ಸುತ್ತಮುತ್ತಲಿನ ವಸತಿಗಳ ಬಾಡಿಗೆ ಹೆಚ್ಚಾಗಿದೆ. ಹೀಗಾಗಿ ತಮ್ಮ ಊರುಗಳಿಂದ ನಗರಕ್ಕೆ ಹಿಂದಿರುಗುತ್ತಿರುವ ಟೆಕ್ಕಿಗಳಿಗೆ ಬಾಡಿಗೆ ಮನೆ ಮಾಡುವುದು ಕಷ್ಟವಾಗುತ್ತಿದೆ. ಐಟಿ ಪಾರ್ಕ್ ಸುತ್ತಮುತ್ತ ಶೇ. 20 ರಿಂದ 30 ರಷ್ಟು ಮನೆ ಬಾಡಿಗೆ ಹೆಚ್ಚಳವಾಗಿದೆ. ಹೀಗಾಗಿ ಬಾಡಿಗೆ ಮನೆ ಬದಲು ಹೊಸ ಅಪಾರ್ಟ್‌ಮೆಂಟ್‌ ಖರೀದಿ ಬೆಸ್ಟ್ ಎಂದು ಕೆಲ ಟೆಕ್ಕಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕಿಡ್ನಿ ಮಾರಾಟಕ್ಕಿದೆ -ಇಂದಿರಾನಗರದಲ್ಲಿ ಬಾಡಿಗೆ ಮನೆಗೆ ಡೆಪಾಸಿಟ್ ಇಡಲು ಹಣ ಬೇಕು, ವಿಚಿತ್ರ ಪೋಸ್ಟರ್​ ವೈರಲ್

ಏರಿಕೆಯಾದ ಮನೆ ಬಾಡಿಗೆಯ ವಿವರ ಹೀಗಿದೆ

1 ಬಿಎಚ್‌ಕೆ (ಸರಾಸರಿ) 2020ರಲ್ಲಿ ₹6000- ₹25000 ರೂ ಇತ್ತು. 2023ರಲ್ಲಿ ₹7500- ₹31,000 ರೂ ಇದೆ. 2 ಬಿಎಚ್‌ಕೆ (ಸರಾಸರಿ) 2020ರಲ್ಲಿ ₹7000- ₹50,000 ರೂ ಇತ್ತು. 2023ರಲ್ಲಿ ₹8,000- ₹58,000 ರೂ ಇದೆ. 3 ಬಿಎಚ್‌ಕೆ (ಸರಾಸರಿ) 2020ರಲ್ಲಿ ₹10,000- ₹85,000 ರೂ ಇತ್ತು. 2023ರಲ್ಲಿ ₹ 12,000 – ₹1 ಲಕ್ಷ ಇದೆ.

ದೊಮ್ಮಲೂರು ಅಥವಾ ಮುರುಗೇಶ್‌ ಪಾಳ್ಯದಲ್ಲಿ 600-900 ಚದರ ಅಡಿಯ 2 ಬಿಹೆಚ್‌ಕೆ ಮನೆಯ ಬಾಡಿಗೆ ದರ ಈಗ 30 ಸಾವಿರ ಆಗಿದೆ. 2020ರಲ್ಲಿ ಇದೇ ಮನೆಯ ಬಾಡಿಗೆ ದರ 15 ರಿಂದ 20 ಸಾವಿರ ಇತ್ತು. 10 ತಿಂಗಳ ಬಾಡಿಗೆಯನ್ನು ಭದ್ರತಾ ಠೇವಣಿಯಾಗಿ ನೀಡಬೇಕಿತ್ತು. ಆದರೆ ಈಗ ಆರು ತಿಂಗಳ ಅಥವಾ ಅದಕ್ಕಿಂತ ಕಡಿಮೆ ಬಾಡಿಗೆಯನ್ನು ಅಡ್ವಾನ್ಸ್ ಆಗಿ ಪಡೆಯಲಾಗುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ