ಬೆಳಗಾವಿ: ದೇವದಾಸಿಯಾಗಿದ್ದ ಮಹಿಳೆಯನ್ನ ಪ್ರೀತಿಸಿ ಬಾಳು ಕೊಟ್ಟಿದ್ದ, ಈಗ ಆಕೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ

ಅವರದ್ದು ಮದುವೆಯಾಗದಿದ್ದರೂ 28ವರ್ಷಗಳ ಕಾಲ ಜೊತೆಯಾಗಿ ನಡೆದುಕೊಂಡು ಬಂದ ಸಂಸಾರ. ದೇವದಾಸಿಯಾಗಿದ್ದ ಮಹಿಳೆಯನ್ನ ಆತ ಪ್ರೀತಿಸಿ ಬಾಳು ಕೊಟ್ಟಿದ್ದ. ಈ ಜೋಡಿಗೆ ಮೂರು ಮಕ್ಕಳಿದ್ದು ಎಲ್ಲರೂ ಒಳ್ಳೆಯ ಸ್ಥಾನದಲ್ಲೂ ಇದ್ದಾರೆ. ಆದರೆ ಇಷ್ಟು ವರ್ಷ ಜೊತೆಯಾಗಿದ್ದವಳನ್ನೇ ಪಾಪಿ ಕೊಲೆ ಮಾಡಿದ್ದಾನೆ. ಕುಡಿದ ನಶೆಯಲ್ಲಿ ಕೊಲೆ ಮಾಡಿದಾತ ತನ್ನವಳ್ಳೇ ಇಲ್ಲ ಅನ್ನೋದು ಅರಿವಾದಾಗ ಮಾಡಿದ್ದೇನೂ ಅಂತೀರಾ ಈ ಸ್ಟೋರಿ ನೋಡಿ.

ಬೆಳಗಾವಿ: ದೇವದಾಸಿಯಾಗಿದ್ದ ಮಹಿಳೆಯನ್ನ ಪ್ರೀತಿಸಿ ಬಾಳು ಕೊಟ್ಟಿದ್ದ, ಈಗ ಆಕೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ
ಇಬ್ಬರನ್ನು ಕಳೆದುಕೊಂಡ ಕುಟುಂಬದವರ ಅಳಲು ಮುಗಿಲು ಮುಟ್ಟಿದೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 23, 2023 | 7:11 AM

ಬೆಳಗಾವಿ: ಒಂದೇ ಮನೆಯಲ್ಲಿ ಎರಡು ಹೆಣವಾಗಿದ್ದನ್ನ ಕಂಡು ಗಾಭರಿಯಾಗಿರುವ ಗ್ರಾಮಸ್ಥರು, ಇತ್ತ ತನ್ನವರನ್ನ ಕಳೆದುಕೊಂಡು ಗೋಳಾಡುತ್ತಿರುವ ಕುಟುಂಬಸ್ಥರು ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪುರ ಗ್ರಾಮದಲ್ಲಿ. ಹೌದು ಈ ಗ್ರಾಮದಲ್ಲಿ ಬೆಳಗ್ಗೆ ಏಳುತ್ತಿದ್ದಂತೆ ಜನ ಶಾಕ್‌ಗೆ ಒಳಗಾಗಿದ್ದರು. ಒಂದಲ್ಲ ಎರಡು ಹೆಣ ಕಂಡು ದಿಕ್ಕೆ ತೋಚದಂತಾಗಿದ್ದರು. ಕೊಣೆಯ ಒಳಗೆ ಜಾನವ್ವಾ ದ್ಯಾವನ್ನವರ್(48) ಕೊಲೆಯಾಗಿ ಹೋಗಿದ್ದರೆ ಹೊರ ಭಾಗದಲ್ಲಿ ಬಸನಗೌಡ ಶಾಸಪ್ಪನವರ್ ಹೆಣವಾಗಿ ಬಿದ್ದಿದ್ದ. ಕೂಡಲೇ ಗ್ರಾಮಸ್ಥರು ಕಟಕೋಳ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ತಕ್ಷಣ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಜಾನವ್ವಳನ್ನ ಕೊಲೆ ಮಾಡಿ ಬಳಿಕ ಬಸನಗೌಡ ಆತ್ಮಹತ್ಯೆ ಮಾಡಿಕೊಂಡಿದ್ದನ್ನ ಖಚಿತ ಮಾಡಿಕೊಂಡ ಪೊಲೀಸರು ಶವಗಳನ್ನ ಕೂಡಲೇ ಮರಣೋತ್ತರ ಪರೀಕ್ಷೆಗೆ ರಾಮದುರ್ಗ ತಾಲೂಕು ಆಸ್ಪತ್ರೆಗೆ ರವಾನಿಸಿದರು. ಇನ್ನೂ ಕುಟುಂಬಸ್ಥರಿಂದ ಕೊಲೆ ಮತ್ತು ಆತ್ಮಹತ್ಯೆ ಅಂತಾ ಎರಡು ಪ್ರತ್ಯೇಕ ಕೇಸ್ ದಾಖಲಿಸಿಕೊಂಡ ಪೊಲೀಸರು ಕೊಲೆಗೆ ನಿಖರ ಕಾರಣ ಹುಡುಕುತ್ತಿದ್ದಾರೆ.

ಅಷ್ಟಕ್ಕೂ ಯಾರು ಈ ಜಾನವ್ವಾ ಮತ್ತು ಬಸನಗೌಡ?

ಹೌದು ಇಲ್ಲಿ ಕೊಲೆಯಾದ ಜಾನವ್ವಾ, ಸಾಲಾಪುರದ ನಿವಾಸಿ ದೇವದಾಸಿಯಾಗಿದ್ದ ಜಾನವ್ವಾಳಿಗೆ 28ವರ್ಷದ ಹಿಂದೆ ಬಸನಗೌಡ ಬಾಳು ಕೊಟ್ಟಿದ್ದ. ಹಾಗಂತ ಇಬ್ಬರು ಮದುವೆಯಾಗಿರಲಿಲ್ಲ ಒಂದೇ ಮನೆಯಲ್ಲಿ ಗಂಡ ಹೆಂಡತಿಯ ಹಾಗಿದ್ದರು‌. ಇನ್ನು ಈ ಜೋಡಿಗೆ ಮೂರು ಮಕ್ಕಳು ಕೂಡ ಇದ್ದು ಒಳ್ಳೆ ಕೆಲಸದಲ್ಲಿದ್ದಾರೆ.‌ ಮದುವೆಯಾಗಿದ್ದ ಬಸನಗೌಡ, ಜಾನವ್ವಳ ಸಲುವಾಗಿ ಹೆಂಡತಿಯನ್ನ ಬಿಟ್ಟು ಜಾನವ್ವಾಳ ಊರಲ್ಲೇ ಆಕೆಯೊಂದಿಗೆ ಬಂದು ನೆಲಸಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ಬಸನಗೌಡ ಇತ್ತಿಚೀನ ದಿನಗಳಲ್ಲಿ ಕುಡಿದು ಬಂದು ಜಾನವ್ವಾ ಜತಗೆ ಜಗಳವಾಡುತ್ತಿದ್ದ.‌ ಆಕೆಯ ಮೇಲೆ ಸಂಶಯ ಪಟ್ಟುಕೊಂಡು ಆಗಾಗ ಹಲ್ಲೆ ಕೂಡ ಮಾಡುತ್ತಿದ್ದನಂತೆ. ಇನ್ನು ಮಕ್ಕಳು ಎಷ್ಟೇ ಬುದ್ದಿವಾದ ಹೇಳಿದರೂ ತನ್ನ ಚಾಳಿಯನ್ನ ಬಿಟ್ಟಿರಲಿಲ್ಲ.

ಇದನ್ನೂ ಓದಿ:ಕಲಬುರಗಿ: ರೈತ ಮಹಿಳೆಯ ಬರ್ಬರ ಕೊಲೆ; ಅತ್ಯಾಚಾರ ಮಾಡಿ, ಹತ್ಯೆ ಮಾಡಿರುವ ಶಂಕೆ

ನಿನ್ನೆ(ಮಾ.21) ರಾತ್ರಿಯೂ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ‌. ಹೀಗೆ ಬಂದವನೇ ಜಾನವ್ವಾ ಜತೆಗೆ ಜಗಳಕ್ಕಿಳಿದಿದ್ದಾನೆ‌. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಮೂಲೆಯಲ್ಲಿದ್ದ ಗುದ್ದಲಿಯನ್ನ ತೆಗೆದುಕೊಂಡು ಹೆಂಡತಿ ತಲೆ ಭಾಗಕ್ಕೆ ಹೊಡೆದಿದ್ದಾನೆ‌. ಇದಾದ ಸ್ವಲ್ಪ ಹೊತ್ತಿನ ನಂತರ ತನಗೆ ಜೀವಕ್ಕೆ ಜೀವ ಕೊಡುತ್ತಿದ್ದವಳ ಕೊಂದೆನಲ್ಲ ಎಂದು ಅಂದುಕೊಂಡು ಬಸನಗೌಡ ಮನೆಯಲ್ಲಿದ್ದ ಮಾತ್ರೆಗಳೆಲ್ಲವನ್ನೂ ನುಂಗಿದ್ದಾನೆ. ಇದರಿಂದ ಬಸನಗೌಡ ಬೆಳಗ್ಗೆ ಅನ್ನೋವಷ್ಟರಲ್ಲಿ ಸತ್ತು ಹೋಗಿದ್ದಾನೆ‌. ಜಾನವ್ವಾ ಮತ್ತು ಬಸನಗೌಡ ಸಾವು ಕಂಡ ಕುಟುಂಬಸ್ಥರು ಶಾಕ್ ಆಗಿದ್ರೆ, ಇತ್ತ ಮೂರು ಮಕ್ಕಳು ತಂದೆ ತಾಯಿಯಂತೆ ಸಾಕಿ ಸಲುಹಿಕೊಂಡು ಬಂದು ಇದೀಗ ಇಬ್ಬರೂ ಮೃತಪಟ್ಟಿದ್ದನ್ನ ಕಂಡು ಕಂಗಾಲಾಗಿದ್ದಾರೆ.

ಒಟ್ಟಾರೆಯಾಗಿ ಮದುವೆಯಾದರೇನೆ ಕೆಲವೊಮ್ಮೆ ಸಂಬಂಧಗಳು ಮುರಿದು ಬೀಳುತ್ತವೆ. ಅಂತಹದರಲ್ಲಿ ಈ ಜೋಡಿ ಮದುವೆಯಾಗದಿದ್ರೂ 28ವರ್ಷಗಳ ಕಾಲ ಚೆನ್ನಾಗಿ ಬಾಳಿ ಬದುಕಿ ಇದೀಗ ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ವಿಪರ್ಯಾಸದ ಸಂಗತಿ. ಅದೇನೆ ಇರಲಿ ಮಕ್ಕಳು ದುಡಿದು ಹಾಕುವ ಸಂದರ್ಭದಲ್ಲಿ ಈ ರೀತಿ ಕುಡಿದ ನಶೆಯಲ್ಲಿ ಗಲಾಟೆ ಮಾಡಿ ಇಬ್ಬರು ಮೃತಪಟ್ಟಿರುವುದು ಕುಟುಂಬಸ್ಥರಿಗೆ ಶಾಕ್ ಆದಂತಾಗಿದೆ.

ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:04 am, Thu, 23 March 23

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ