Chikkamagaluru: ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ

ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವಂತಹ ಘಟನೆ ಜಿಲ್ಲೆಯ ಕೃಷಿ ವ್ಯವಸಾಯೋತ್ಪನ್ನ ಮಾರುಕಟ್ಟೆ ಬಳಿ ಘಟನೆ ನಡೆದಿದೆ.

Chikkamagaluru: ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ
ಕೆಎಸ್​ಆರ್​ಟಿಸಿ ಬಸ್, ಬೈಕ್ ಮಧ್ಯೆ ಅಪಘಾತ
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 22, 2023 | 8:01 PM

ಚಿಕ್ಕಮಗಳೂರು: ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ (accident) ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವಂತಹ ಘಟನೆ ಜಿಲ್ಲೆಯ ಕೃಷಿ ವ್ಯವಸಾಯೋತ್ಪನ್ನ ಮಾರುಕಟ್ಟೆ ಬಳಿ ಘಟನೆ ನಡೆದಿದೆ. ಬೈಕ್ ಸವಾರರಾದ ಶ್ರೀಧರ್(28), ದಯಾನಂದ(30) ಮೃತರು. ಚಿಕ್ಕಮಗಳೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಹರಿದು ಪಾದಚಾರಿ ದುರ್ಮರಣ ಹೊಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬೆಟ್ಕುಳಿ ಬಳಿ ದುರ್ಘಟನೆ ಸಂಭವಿಸಿದೆ. ಬೆಟ್ಕುಳಿ ಗ್ರಾಮದ ನಿವಾಸಿ ವಿಠ್ಠಲ ಪಟಗಾರ(45) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ. ಅಪಘಾತದ ನಂತರ ಕಾರಿನ ಜತೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಹಿರೇಗುತ್ತಿ ಚೆಕ್​ಪೋಸ್ಟ್​ನಲ್ಲಿ ಕಾರು ಜಪ್ತಿ ಮಾಡಲಾಗಿದ್ದು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನಕಲಿ ಮದ್ಯ ಸೇವಿಸಿ ವ್ಯಕ್ತಿ ಸಾವು ಪ್ರಕರಣ: ಮದ್ಯದಂಗಡಿಗೆ ಮುತ್ತಿಗೆ ಹಾಕಿದ ಮಹಿಳೆಯರು

ನಕಲಿ ಮದ್ಯ ಸೇವಿಸಿ ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಮದ್ಯ ಮಾರಾಟದ ಅಂಗಡಿಗೆ ಮಹಿಳೆಯರ ಮುತ್ತಿಗೆ ಹಾಕಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿತ್ಲೆಗುಳಿ ಗ್ರಾಮದಲ್ಲಿ ನಡೆದಿದೆ. ಹಿತ್ಲೆಗುಳಿ ಗ್ರಾಮದ ಪುಟ್ಟೇಗೌಡ (60) ನಕಲಿ ಮದ್ಯ ಸೇವಿಸಿ ಮೃತಪಟ್ಟ ವ್ಯಕ್ತಿ. ಬೆಳಗ್ಗೆಯಿಂದ ರಸ್ತೆಮಧ್ಯೆ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಒಂದೇ ತಿಂಗಳಲ್ಲಿ ನಕಲಿ ಮದ್ಯಕ್ಕೆ‌ ಇದು ನಾಲ್ಕನೇ ಬಲಿ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕೋಲಾರ: ತಮ್ಮ ಊರಿನ ಯುವತಿಗೆ ಹೋಳಿ ಹಚ್ಚಿದನೆಂದು ಸ್ನೇಹಿತನನ್ನೇ ಕಿಡ್ನಾಪ್ ಮಾಡಿ ಬೆತ್ತಲೆಗೊಳಿಸಿ ಹಲ್ಲೆ

ನಕಲಿ ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರು ಮತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರ ಜೊತೆ ವಾಗ್ವಾದ ಕೂಡ ಉಂಟಾಗಿದೆ. ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಲಾಗಿದೆ. ಸಾವಿಗೆ ಅಕ್ರಮ ಮಧ್ಯ ಸೇವನೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಸ್ಥಳಕ್ಕೆ ಡಿಸಿ, ಎಸ್ಪಿ ಆಗಮಿಸುವಂತೆ ಆಗ್ರಹಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಜಗಳ: ಬಾಲಕನ ಕಿವಿಗೆ ಚಾಕು ಇರಿದ ಮತ್ತೋರ್ವ ಬಾಲಕ

ರಾಯಚೂರು: ಇಬ್ಬರು ಅಪ್ರಾಪ್ತ ಬಾಲಕರ ಮಧ್ಯ ಗಲಾಟೆಯಾಗಿದ್ದು ಓರ್ವ ಬಾಲಕನ ಕಿವಿಯ ಭಾಗಕ್ಕೆ ಮತ್ತೋರ್ವ ಬಾಲಕ ಚಾಕು ಇರಿದ ಘಟನೆ ರಾಯಚೂರು ನಗರದ ಜಹಿರಾಬಾದ್ ವಾರ್ಡ್ ನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಬಾಲಕರಿಬ್ಬರ ನಡುವೆ ಮಾರ್ಚ್ 21ರ ತಡರಾತ್ರಿ ಗಲಾಟೆ ನಡೆದಿತ್ತು. ಈ ವೇಳೆ ಚೂರಿ ಇರಿದು ಕ್ರೌರ್ಯ ಮೆರೆಯಲಾಗಿದೆ. ಗಾಯಗೊಳಗಾದ ಬಾಲಕ ಮತ್ತು ಚೂರಿ ಇರಿದ ಬಾಲಕ ಇಬ್ಬರು ಗೆಳೆಯರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅನಧಿಕೃತವಾಗಿ ಇ ಸಿಗರೇಟ್ ಮಾರಾಟ: ಅಂಗಡಿಗಳ ಮೇಲೆ ಸಿಸಿಬಿ ದಾಳಿ

ಮತ್ತೊಂದೆಡೆ ಕಿವಿಯ ಭಾಗದಲ್ಲಿದ್ದ ಚಾಕು ತೆಗೆಯಲು ವೈದ್ಯರು ಹರಸಾಹಸಪಟ್ಟಿದ್ದಾರೆ. ರಾಯಚೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಸದರ್ ಬಜಾರ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಪ್ರಾಪ್ತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ವ್ಯಕ್ತಿ ನೀರುಪಾಲು

ಗದಗ: ತಂಗಾಭದ್ರಾ ನದಿಯಲ್ಲಿ ಸ್ನಾನಕ್ಕೆಂದು ಇಳಿದ ವ್ಯಕ್ತಿಯೊಬ್ಬರು ನೀರುಪಾಲಾದ ಘಟನೆ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದ ದೇಗುಲ ಬಳಿ ನಡೆದಿದೆ. ಕೋಟುಮಚಗಿ ಗ್ರಾಮದ ಚಂದ್ರಶೇಖರ್ (45) ಸಾವನ್ನಪ್ಪಿದ ವ್ಯಕ್ತಿ. ಕೊರ್ಲಹಳ್ಳಿ ಗ್ರಾಮಕ್ಕೆ ಜಾತ್ರೆಗೆ ಆಗಮಿಸಿದ್ದ ಚಂದ್ರಶೇಖರ್, ಸಿಂಗಟಾಲೂರ ದೇವಸ್ಥಾನ ಬಳಿ ನದಿಯಲ್ಲಿ ಸ್ಥಾನಕ್ಕೆ ಇಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ನದಿಯಲ್ಲಿ ತೆಪ್ಪ ಹಾಕಿ ಶೋಧ ನಡೆಸುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:01 pm, Wed, 22 March 23