Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ತಮ್ಮ ಊರಿನ ಯುವತಿಗೆ ಹೋಳಿ ಹಚ್ಚಿದನೆಂದು ಸ್ನೇಹಿತನನ್ನೇ ಕಿಡ್ನಾಪ್ ಮಾಡಿ ಬೆತ್ತಲೆಗೊಳಿಸಿ ಹಲ್ಲೆ

ಹೋಳಿ ಹಬ್ಬದಂದು ತಮ್ಮ ಗ್ರಾಮದ ಯುವತಿಗೆ ಬಸ್​ನಲ್ಲಿ ಬಣ್ಣ ಹಚ್ಚಿದ ಕಾರಣಕ್ಕೆ ಸ್ನೇಹಿತರೇ ಯುವಕನನ್ನು ಅಪಹರಣ ಮಾಡಿ ಹಲ್ಲೆ ನಡೆಸಿದ್ದಾರೆ.

ಕೋಲಾರ: ತಮ್ಮ ಊರಿನ ಯುವತಿಗೆ ಹೋಳಿ ಹಚ್ಚಿದನೆಂದು ಸ್ನೇಹಿತನನ್ನೇ ಕಿಡ್ನಾಪ್ ಮಾಡಿ ಬೆತ್ತಲೆಗೊಳಿಸಿ ಹಲ್ಲೆ
ಹಲ್ಲೆಗೊಳಗಾದ ವಿದ್ಯಾರ್ಥಿ ಮಧು
Follow us
ಆಯೇಷಾ ಬಾನು
|

Updated on: Mar 22, 2023 | 3:09 PM

ಕೋಲಾರ: ಹೋಳಿ ಹಬ್ಬದಂದು ಯುವತಿಗೆ ಬಣ್ಣ ಹಾಕಿದ್ದಕ್ಕೆ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿರುವ ಘಟನೆ ಕೋಲಾರ ತಾಲೂಕಿನ ಬೆಳಮಾರನಹಳ್ಳಿಯಲ್ಲಿ ನಡೆದಿದೆ. ಬೆಳಮಾರನಹಳ್ಳಿಯ ಮಧು ಹಲ್ಲೆಗೊಳ್ಳಗಾದ ವಿದ್ಯಾರ್ಥಿ. ಅದೇ ಗ್ರಾಮದ ಮಧು ಸ್ನೇಹಿತರೇ ಆತನನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದಾರೆ.

ಹೋಳಿ ಹಬ್ಬದಂದು ಯುವತಿಗೆ ಮಧು ಬಣ್ಣ ಹಚ್ಚಿದ್ದ. ಈ ವಿಚಾರ ತಿಳಿದ ಆತನ ಸ್ನೇಹಿತರು, ತಮ್ಮ ಊರಿನ ಯುವತಿಗೆ ಬಸ್​ನಲ್ಲಿ ಬಣ್ಣ ಹಚ್ಚಿದನೆಂದು ಸಿಟ್ಟಿಗೆದ್ದಿದ್ದಾರೆ. ಬಳಿಕ ಆತನನ್ನು ಕರೆಸಿ ಅಪಹರಿಸಿ ಗ್ರಾಮದ ಶೆಡ್​​ವೊಂದರಲ್ಲಿ ಕೂಡಿ ಹಾಕಿ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ. ಸದ್ಯ ಗಾಯಾಳು ಮಧುಗೆ ಕೋಲಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವೇಮಗಲ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಆಟೋ ಚಾಲಕ ಪುರಷೋತ್ತಮ ಮನೆ ನವೀಕರಿಸಿ ಯುಗಾದಿ ಗಿಫ್ಟ್​​ ನೀಡಿದ ಟ್ರಸ್ಟ್

ಕೌಟುಂಬಿಕ ಕಲಹ, ಚಾಕುವಿನಿಂದ ಇರಿದು ಮೈದುನನ ಕೊಲೆ

ಕೋಲಾರ: ನಗರದ ಬಂಬುಬಜಾರ್​ನಲ್ಲಿ ಫಯಾಜ್​ ಎಂಬುವನು ತನ್ನ ಷಡ್ಕನನ್ನು (ಹೆಂಡತಿಯ ತಂಗಿ ಗಂಡ) ಕೊಲೆ ಮಾಡಿದ್ದಾನೆ. ಜೊತೆಗೆ ಆತನ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಗಾಯಗೊಳಿಸಿರುವ‌ ಘಟನೆ ಜರುಗಿದೆ. ಹೌದು ಗಂಡ ಹೆಂಡತಿ ನಡುವಿನ ಗಲಾಟೆಯಲ್ಲಿ ಪ್ರಶ್ನೆ ಮಾಡಿದ ಹೆಂಡತಿಯ ತಂಗಿಯ ಗಂಡನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಮತ್ತೋರ್ವ ಸಂಬಂಧಿಯ ಮೇಲೂ ಕೊಲೆ ಯತ್ನ ನಡೆಸಿದ್ದಾರೆ‌. ಇದೀಗ ಆರೋಪಿ ಫಯಾಸ್​ನನ್ನು ಗಲ್​ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಳೆದ ಹತ್ತು ವರ್ಷಗಳ ಹಿಂದೆ ಮೃತ ತಾಜ್, ಫಯಾಜ್​ನ ನಾದನಿಯನ್ನ ಮದುವೆಯಾಗಿದ್ದ. ಫಯಾಜ್ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರಿಂದ ಮೂರು ತಿಂಗಳ ಹಿಂದೆ ತವರು ಮನೆ ಸೇರಿಕೊಂಡಿದ್ದ ಫಯಾಜ್​ ಪತ್ನಿ ತಜ್ಜೂನ್ನೀಸಾಳೊಂದಿಗೆ ಇಂದು(ಮಾ.19) ಮಧ್ಯಾಹ್ನ ಮಾತನಾಡಿಸಲು ತೆರಳಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಆಗ ಅಲ್ಲೇ ಇದ್ದ ತಾಜ್​ ಹಾಗೂ ಜಪ್ರುಲ್ಲಾ ಗಲಾಟೆ ಬಿಡಿಸಲು ಹೋಗಿದ್ದಾರೆ. ಈ ವೇಳೆ ಫಯಾಜ್​ ಏಕಾಏಕಿ ತಾಜ್​ಗೆ ಚಾಕುವಿನಿಂದ ಇರಿದಿದ್ದಾನೆ. ತಾಜ್​ ಸ್ಥಳದಲ್ಲೇ ಮೃತಪಟ್ಟರೆ, ಜೊತೆಗಿದ್ದ ಜಪ್ರುಲ್ಲ ಚಾಕು ಇರಿತಕ್ಕೆ ಒಳಗಾಗಿದ್ದು, ಗಾಯಾಳುವನ್ನು ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಜಗಳ; ಬಾಲಕನ ಕಿವಿಗೆ ಚಾಕು ಇರಿದ ಮತ್ತೋರ್ವ ಬಾಲಕ

ಇಬ್ಬರು ಅಪ್ರಾಪ್ತ ಬಾಲಕರ ಮಧ್ಯ ಗಲಾಟೆಯಾಗಿದ್ದು ಓರ್ವ ಬಾಲಕನ ಕಿವಿಯ ಭಾಗಕ್ಕೆ ಮತ್ತೋರ್ವ ಬಾಲಕ ಚಾಕು ಇರಿದ ಘಟನೆ ರಾಯಚೂರು ನಗರದ ಜಹಿರಾಬಾದ್ ವಾರ್ಡ್ ನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಬಾಲಕರಿಬ್ಬರ ನಡುವೆ ಮಾರ್ಚ್ 21ರ ತಡರಾತ್ರಿ ಗಲಾಟೆ ನಡೆದಿತ್ತು. ಈ ವೇಳೆ ಚೂರಿ ಇರಿದು ಕ್ರೌರ್ಯ ಮೆರೆಯಲಾಗಿದೆ. ಗಾಯಗೊಳಗಾದ ಬಾಲಕ ಮತ್ತು ಚೂರಿ ಇರಿದ ಬಾಲಕ ಇಬ್ಬರು ಗೆಳೆಯರು.

ಇನ್ನು ಮತ್ತೊಂದೆಡೆ ಕಿವಿಯ ಭಾಗದಲ್ಲಿದ್ದ ಚಾಕು ತೆಗೆಯಲು ವೈದ್ಯರು ಹರಸಾಹಸಪಟ್ಟಿದ್ದಾರೆ. ರಾಯಚೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಸದರ್ ಬಜಾರ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಪ್ರಾಪ್ತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ