AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಕೌಟುಂಬಿಕ ಕಲಹ, ಚಾಕುವಿನಿಂದ ಇರಿದು ಮೈದುನನ ಕೊಲೆ

ಕೌಟುಂಬಿಕ ಕಲಹದಿಂದ ಸ್ವತಃ ಮೈದುನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ, ಮತ್ತೊರ್ವನ ಮೇಲೂ ಹಲ್ಲೆ ಮಾಡಿ ಗಂಭೀರ ಗಾಯಗೊಳಿಸಿದ್ದಾನೆ. ಇದೀಗ ಕೊಲೆಯಿಂದ ಎರಡೂ ಕುಟುಂಬಗಳು ಬೀದಿಗೆ ಬಿದ್ದಿವೆ. ಕುಡಿದು ಅವಸರದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಕುಟುಂಬಸ್ಥರು ದಿಕ್ಕೆಟ್ಟಿದ್ದಾರೆ. ಏನಿದು ಕಥೆ ಅಂತೀರಾ? ಇಲ್ಲಿದೆ ನೋಡಿ

ಕೋಲಾರ: ಕೌಟುಂಬಿಕ ಕಲಹ, ಚಾಕುವಿನಿಂದ ಇರಿದು ಮೈದುನನ ಕೊಲೆ
ಮೃತ ತಾಜ್​, ಸಂಬಂಧಿಕರು
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 22, 2023 | 11:09 AM

ಕೋಲಾರ: ನಗರದ ಬಂಬುಬಜಾರ್​ನಲ್ಲಿ ಫಯಾಜ್​ ಎಂಬುವನು ತನ್ನ ಷಡ್ಕನನ್ನು (ಹೆಂಡತಿಯ ತಂಗಿ ಗಂಡ) ಕೊಲೆ ಮಾಡಿದ್ದಾನೆ. ಜೊತೆಗೆ ಆತನ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಗಾಯಗೊಳಿಸಿರುವ‌ ಘಟನೆ ಜರುಗಿದೆ. ಹೌದು ಗಂಡ ಹೆಂಡತಿ ನಡುವಿನ ಗಲಾಟೆಯಲ್ಲಿ ಪ್ರಶ್ನೆ ಮಾಡಿದ ಹೆಂಡತಿಯ ತಂಗಿಯ ಗಂಡನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಮತ್ತೋರ್ವ ಸಂಬಂಧಿಯ ಮೇಲೂ ಕೊಲೆ ಯತ್ನ ನಡೆಸಿದ್ದಾರೆ‌. ಇದೀಗ ಆರೋಪಿ ಫಯಾಸ್​ನನ್ನು ಗಲ್​ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಮೃತ ತಾಜ್, ಫಯಾಜ್​ನ ನಾದನಿಯನ್ನ ಮದುವೆಯಾಗಿದ್ದ. ಫಯಾಜ್ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರಿಂದ ಮೂರು ತಿಂಗಳ ಹಿಂದೆ ತವರು ಮನೆ ಸೇರಿಕೊಂಡಿದ್ದ ಫಯಾಜ್​ ಪತ್ನಿ ತಜ್ಜೂನ್ನೀಸಾಳೊಂದಿಗೆ ಇಂದು(ಮಾ.19) ಮಧ್ಯಾಹ್ನ ಮಾತನಾಡಿಸಲು ತೆರಳಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಆಗ ಅಲ್ಲೇ ಇದ್ದ ತಾಜ್​ ಹಾಗೂ ಜಪ್ರುಲ್ಲಾ ಗಲಾಟೆ ಬಿಡಿಸಲು ಹೋಗಿದ್ದಾರೆ. ಈ ವೇಳೆ ಫಯಾಜ್​ ಏಕಾಏಕಿ ತಾಜ್​ಗೆ ಚಾಕುವಿನಿಂದ ಇರಿದಿದ್ದಾನೆ. ತಾಜ್​ ಸ್ಥಳದಲ್ಲೇ ಮೃತಪಟ್ಟರೆ, ಜೊತೆಗಿದ್ದ ಜಪ್ರುಲ್ಲ ಚಾಕು ಇರಿತಕ್ಕೆ ಒಳಗಾಗಿದ್ದು, ಗಾಯಾಳುವನ್ನು ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಕಲಬುರಗಿ: ರೈತ ಮಹಿಳೆಯ ಬರ್ಬರ ಕೊಲೆ; ಅತ್ಯಾಚಾರ ಮಾಡಿ, ಹತ್ಯೆ ಮಾಡಿರುವ ಶಂಕೆ

ಇನ್ನು ಫಯಾಜ್ ಮೊದಲಿನಿಂದಲೂ ಕುಡುಕನಾಗಿದ್ದು ಆಗಾಗ ‌ಒಂದಿಲ್ಲೊಂದು ಕಿರಿಕ್ ಮಾಡುತ್ತಲೇ ಬರುತ್ತಿದ್ದ. ‌ಇದರ ಬಗ್ಗೆ ‌ಹತ್ತು ಹಲವಾರು ರಾಜಿ ಪಂಚಾಯತಿಗಳು ನಡೆದರೂ ನಾಯಿ‌ ಬಾಲ ಡೊಂಕು‌ ಎಂಬಂತೆ ಒಂದೆರೆಡು ದಿನ ಸುಮ್ಮನೆ‌ ಇದ್ದು ಮತ್ತೆ ತನ್ನ ಚಾಳಿಯನ್ನು ಮುಂದುವರೆಸುತ್ತಿದ್ದ. ಇತ್ತೀಚಿಗೆ ಸಂಪೂರ್ಣವಾಗಿ ಕುಡಿತದ ದಾಸನಾಗಿದ್ದ ಫಯಾಜ್ ಪ್ರತಿದಿನ ಕುಡಿದು ಬಂದು ಹೆಂಡತಿಯನ್ನು ತಜ್ಜೂನ್ನೀಸಾನನ್ನು ಹೊಡೆದು ಗಲಾಟೆ ಮಾಡುತ್ತಿದ್ದ. ಇದರಿಂದ‌ ಬೇಸತ್ತ ತಜ್ಜೂನ್ನೀಸಾ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಳು. ಸುಮಾರು ಮೂರು ತಿಂಗಳಾದರೂ ಇತ್ತ ಸುಳಿಯದ ಫಯಾಜ್ ಇಂದು ದಿಢೀರನೇ ಹೆಂಡತಿಯ ನೆನಪು ಬಂದು ಪೋನ್ ಮಾಡಿ ಮಾತನಾಡಬೇಕು ಎಂದು ಕರೆದಿದ್ದಾನೆ.

ಪತ್ನಿ ತಜ್ಜೂನ್ನೀಸಾ ಮನೆಯವರಿಗೆ ವಿಷಯ ತಿಳಿಸಿದಾಗ ತಾಜ್ ಮತ್ತು ತಮ್ಮ ಜಪ್ರುಲ್ಲಾ ಹೋಗಿದ್ದಾರೆ. ಫಯಾಜ್ ಮಾತನಾಡುವಂತಹ‌ ಸಂದರ್ಭದಲ್ಲಿ ಮೊದಲೇ ಚಾಕು ತೆಗೆದುಕೊಂಡು ಹೋಗಿದ ಪಯಾಜ್ ಅಲ್ಲಿಗೆ ಬಂದ ತಾಜ್ ಗೆ ಚಾಕುವಿನಿಂದ ಇರಿದ್ದಾನೆ. ‌ಇನ್ನು ಗಲ್​ಪೇಟೆ ಪೊಲೀಸರು ಆರೋಪಿ ಪಯಾಜ್​ನನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದು ಕೋಲಾರ ಎಸ್ಪಿ ನಾರಾಯಣ್​ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಚಿತ್ರದುರ್ಗ: ಕೆರೆಯಲ್ಲಿ ಯುವಕನ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್​; ಗೆಳೆಯರೇ ಸೇರಿ ಕೊಲೆ ಮಾಡಿದ್ದಾರೆಂದು ಆರೋಪ

ಒಟ್ಟಾರೆ ಸಂತೋಷದಿಂದ ಸಂಸಾರ ನಡೆಸಬೇಕಾಗಿದ್ದ ವ್ಯಕ್ತಿ ಕುಡಿತದ ಚಟಕ್ಕೆ ದಾಸನಾಗಿ ತನ್ನ ಕೈಯಾರೆ ತನ್ನ ಸಂಸಾರವನ್ನು ಹಾಳುಮಾಡಿಕೊಂಡಿದ್ದಲ್ಲದೆ, ತಾನು ಜೈಲುಪಾಲಾಗಿದ್ದು ಇಂದು ಇಡೀ ಕುಟುಂಬ ಬಿದ್ದು ತನ್ನ ಕೈಯಾರೆ‌ ಜೀವನ ಹಾಳು ಮಾಡಿಕೊಂಡಿದಲ್ಲದೆ, ತನ್ನ ಸ್ವತ ಮೈದುನನ್ನು ಕೊಲೆ ಮಾಡಿ ಜೈಲಿಗೆ ಸೇರಿದರೆ ಇತ್ತ ಹೆಂಡತಿ ಮತ್ತು ಮೈದುನನ ಕುಟುಂಬ ಬೀದಿಗೆ ಬಿದ್ದಿವೆ.

ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:08 am, Wed, 22 March 23