ಕಾರು ಪಾರ್ಕಿಂಗ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಿರಿಕ್; ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಯುವಕನ ಬರ್ಬರ ಕೊಲೆ

ಅವರೆಲ್ಲ ಒಂದೇ ಕುಟುಂಬಸ್ಥರು ಒಂದೇ ವಠಾರದ ಜಮೀನಿನಲ್ಲಿ ಮನೆಗಳನ್ನ ಸಹ ಕಟ್ಟಿಕೊಂಡಿದ್ದು ಹಲವು ವರ್ಷಗಳಿಂದ ಒಂದೇ ಕಡೆ ವಾಸ ಮಾಡುತ್ತಿದ್ದರು. ಮಾದರಿ ಅಣ್ಣ ತಮ್ಮಂದಿರಂತಿರಬೇಕಾದ ಅವರ ನಡುವೆ ಶುರುವಾದ ಒಂದು ಸಣ್ಣ ಕಾರು ಪಾರ್ಕಿಂಗ್ ವಿಚಾರ ದೊಡ್ಡ ಅನಾಹುತವನ್ನೆ ಮಾಡಿದ್ದು ಇದೀಗ ಮಾಡಿದ ತಪ್ಪಿಗೆ ಊರು ಬೀಟ್ಟು ಹೋಗುವಂತಹ ಪರಿಸ್ಥಿತಿ ತಂದೊಂಡಿದೆ.

ಕಾರು ಪಾರ್ಕಿಂಗ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಿರಿಕ್; ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಯುವಕನ ಬರ್ಬರ ಕೊಲೆ
ಮೃತ ಯುವಕ, ಸಂಬಂಧಿಕರ ಗೋಳು
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 22, 2023 | 7:29 AM

ಬೆಂಗಳೂರು ಗ್ರಾಮಾಂತರ: ಅಕ್ಕ ಪಕ್ಕ ಹಿಂದೆ ಮುಂದೆ ಸಾಕಷ್ಟು ಜಮೀನು ಖಾಲಿ ಇದೆ. ಒಂದಲ್ಲ ಎರಡಲ್ಲ ಹತ್ತಾರು ಕಾರು ನಿಲ್ಲಿಸಿದರು ಸಾಕಾಗುವಂತಹ ಜಾಗ ಸಹ ಮನೆ ಮುಂದಿದೆ. ಆದರೆ ಇದೇ ಸಣ್ಣ ಜಮೀನಿನಲ್ಲಿ ನಿಲ್ಲಿಸಿದ್ದ ಕಾರಿನ ಪಾರ್ಕಿಂಗ್ ವಿಚಾರಕ್ಕೆ ಒಂದು ಜೀವ ಬಲಿಯಾಗಿದೆ. ಹೌದು ನಿನ್ನೆ(ಮಾ.19) ಸಂಜೆ ಮನೆ ಮುಂದೆ ನಿಲ್ಲಿಸಿದ್ದ ಕಾರು ಪಾರ್ಕಿಂಗ್ ವಿಚಾರಕ್ಕೆ ದಾಯಾದಿಗಳ ನಡುವೆ ದೊಡ್ಡ ಜಗಳ ನಡೆದಿದ್ದು ಯುವಕ ಅಸುನೀಗಿದ್ದಾನೆ. ಜಿಲ್ಲೆಯ ಹೊಸಕೋಟೆ ತಾಲೂಕಿನ ಮೇಡಿ ಮಲ್ಲಸಂದ್ರ ಗ್ರಾಮದ ಇಸ್ಮಾಯಿಲ್ ಖಾನ್ ನಿನ್ನೆ ರಾತ್ರಿ ಮನೆ ಬಳಿಗೆ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಬಂದಿದ್ದು ಮನೆ ಮುಂದಿರುವ ಖಾಲಿ ಜಾಗದಲ್ಲಿ ಕಾರನ್ನ ನಿಲ್ಲಿಸಿದ್ದಾನೆ. ಈ ವೇಳೆ ಕಾರು ನಿಲ್ಲಿಸಿದಕ್ಕೆ ಎದುರು ಮನೆಯ ಸೈಯದ್ ಅಕಿಲ್ ಶಾ ಕುಟುಂಬಸ್ಥರು ಕ್ಯಾತೆ ತೆಗೆದಿದ್ದು, ಇಬ್ಬರ ಕುಟುಂಬದವರ ನಡುವೆ ಮಾರಾಮಾರಿ ನಡೆದು ಇಸ್ಮಾಯಿಲ್ ಖಾನ್ ಎಂಬಾತ ಕೊಲೆಯಾಗಿದ್ದಾನೆ.

ಇಸ್ಮಾಯಿಲ್ ಖಾನ್​ಗೆ ಡ್ರಾಗರ್​ನಿಂದ ಇರಿದ ಪರಿಣಾಮ ಯುವಕ ತೀವ್ರ ರಕ್ತ ಸ್ರಾವದಿಂದ ಒದ್ದಾಡಿದ್ದು ನಂತರ ಕಾರಿನಲ್ಲಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ. ಆದರೆ ಅಷ್ಟರಲ್ಲೆ ತೀವ್ರ ರಕ್ತ ಸ್ರಾವವಾದ ಕಾರಣ ಇಸ್ಮಾಯಿಲ್ ಖಾನ್ ಪ್ರಾಣ ಪಕ್ಷಿ ಹಾರಿ ಹೋಗಿದ್ದು ಆಸ್ವತ್ರೆಗೆ ಸಾಗಿಸುವ ಮುನ್ನವೆ ಸಾವನ್ನಪಿದ್ದಾನೆ. ಇನ್ನು ಮೃತ ಇಸ್ಮಾಯಿಲ್ ಖಾನ್ ಮತ್ತು ಹಲ್ಲೆ ಮಾಡಿದವರೆಲ್ಲ ಒಂದೇ ಕುಟುಂಬದವರಾಗಿದ್ದು ಪಿತ್ರಾರ್ಜಿತ ಆಸ್ತಿಯಲ್ಲಿ ಮನೆ ಕಟ್ಟಿಕೊಂಡು ಒಂದೇ ಕಡೆ ವಾಸ ಮಾಡುತ್ತಿದ್ದಾರೆ. ಆದರೆ ಈ ನಡುವೆ ಮನೆ ಕಟ್ಟಿಕೊಂಡ ಜಾಗ ಹೊರತು ಪಡಿಸಿ ಉಳಿದಿದ್ದ ಖಾಲಿ ಜಾಗಕ್ಕಾಗಿ ಇಬ್ಬರ ನಡುವೆ ಕಳೆದ ಎರಡು ವರ್ಷದಿಂದ ಗಲಾಟೆ ನಡೆಯುತ್ತಾ ಬಂದಿತ್ತಂತೆ. ಇದೇ ವಿಚಾರವನ್ನೆ ಮನಸ್ಸಿನಲ್ಲಿಟ್ಟುಕೊಂಡಿದ್ದ ಸೈಯದ್ ಅಖಿಲ್ ಶಾ ಕುಟುಂಬಸ್ಥರು ಕಾರಿನ ವಿಚಾರಕ್ಕೆ ಕಿರಿಕ್ ಮಾಡಿ ಫ್ರೀ ಪ್ಲಾನ್ ಮಾಡಿಕೊಂಡು ಕೊಲೆ ಮಾಡಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ:ಚಿತ್ರದುರ್ಗ: ಕೆರೆಯಲ್ಲಿ ಯುವಕನ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್​; ಗೆಳೆಯರೇ ಸೇರಿ ಕೊಲೆ ಮಾಡಿದ್ದಾರೆಂದು ಆರೋಪ

ಇನ್ನು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಇಸ್ಮಾಯಿಲ್ ಖಾನ್ ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆ ಸೈಯದ್ ಕುಟುಂಬಸ್ಥರು ಮನೆಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾರೆ. ಇನ್ನು ಈ ಬಗ್ಗೆ ಅನುಗೊಂಡನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಸಣ್ಣ ಸೈಟ್ ವಿಚಾರಕ್ಕೆ ರಕ್ತ ಸಂಬಂಧಿಯನ್ನೆ ಕೊಲೆ ಮಾಡಿದ್ದು ಮಾತ್ರ ನಿಜಕ್ಕೂ ದುರಂತ.

ವರದಿ: ನವೀನ್ ಟಿವಿ9 ದೇವನಹಳ್ಳಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್