Rain Effect: ಮಳೆ ನೀರು ಮಿಶ್ರಿತ ಡೀಸೆಲ್ನಿಂದ ಕೆಟ್ಟು ನಿಂತ 15ಕ್ಕೂ ಹೆಚ್ಚು ವಾಹನಗಳು, ಸವಾರರು ಕಂಗಾಲು
ನಿನ್ನೆ ಸಂಜೆ ಸುರಿದ ಮಳೆಗೆ ಭಾರೀ ಅವಾಂತರಗಳು ಸಂಭವಿಸಿವೆ. ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ನಲ್ಲಿ ಲೀಕೆಜ್ನಿಂದ ಮಳೆ ನೀರು ಡೀಸೆಲ್ ಸಂಪ್ನ ಒಳಗೆ ಸೇರಿದೆ. ಅದನ್ನ ಗಮನಿಸದೇ ಸಿಬ್ಬಂದಿ ಕಾರುಗಳಿಗೆ ಡೀಸೆಲ್ ಹಾಕಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ(ಜೂನ್ 12) ಸಂಜೆ ಭಾರೀ ಮಳೆ ಸುರಿದಿದ್ದು ಮಳೆಯಿಂದಾಗಿ ಹಲವು ಕಡೆ ರಸ್ತೆಗಳು ಕೆರೆಯಂತಾಗಿದ್ದವು(Bengaluru Rain). ಇದರಿಂದ ಜನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಇದರ ನಡುವೆ ಮಳೆ ನೀರು ಮಿಶ್ರಿತ ಇಂಧನ ಹಾಕಿಸಿಕೊಂಡ ಸವಾರರ ಪರಿಸ್ಥಿತಿ ಹೇಳತೀರದ್ದು. ಮಳೆಯ ನಡುವೆ ವಾಹನ ಕೈ ಕೊಟ್ಟಿದ್ದು ಮನೆಗೆ ತಲುಪಲಾಗದೆ, ವಾಹನವನ್ನು ಎಲ್ಲೂ ನಿಲ್ಲಿಸಲಾಗದೆ ಕಂಗಾಲಾಗಿದ್ದರು. ಸಾಲು ಸಾಲಾಗಿ 15 ಕ್ಕೂ ಹೆಚ್ಚು ವಾಹನಗಳು ಕೆಟ್ಟು ನಿಂತಿದ್ದು ಸವಾರರು ಅತಂತ್ರರಾಗಿದ್ರು.
ನಿನ್ನೆ ಸಂಜೆ ಸುರಿದ ಮಳೆಗೆ ಭಾರೀ ಅವಾಂತರಗಳು ಸಂಭವಿಸಿವೆ. ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ನಲ್ಲಿ ಲೀಕೆಜ್ನಿಂದ ಮಳೆ ನೀರು ಡೀಸೆಲ್ ಸಂಪ್ನ ಒಳಗೆ ಸೇರಿದೆ. ಅದನ್ನ ಗಮನಿಸದೇ ಸಿಬ್ಬಂದಿ ಕಾರುಗಳಿಗೆ ಡೀಸೆಲ್ ಹಾಕಿದ್ದಾರೆ. ಇದರಿಂದ ಕಾರುಗಳು ಸ್ಟಾರ್ಟ್ ಆಗದೇ ಕಟ್ಟು ನಿಂತಿದೆ. ಬಂಕ್ ಬಳಿಯೇ ಕೆಟ್ಟು ನಿಂತ ಕಾರು ನಿಲ್ಲಿಸಿ ಚಾಲಕರು ತಲೆ ಮೇಲೆ ಕೈ ಹೊತ್ತು ಕೊಳಿತುಕೊಳ್ಳುವಂತಾಯ್ತು. ಸದ್ಯ ಬಂಕ್ ಮಾಲೀಕರೆ ಕಾರು ರಿಪೇರಿ ಮಾಡಿಸಿಕೊಡುವಂತೆ ಚಾಲಕರು ಪಟ್ಟು ಹಿಡಿದಿದ್ದಾರೆ. ಅಲ್ಲದೆ ರೆಡಿ ಆಗುವವರೆಗೆ ನಮ್ಮ ಕೂಲಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಕಾರು ರೆಡಿ ಆಗಬೇಕಂದ್ರೆ ಒಂದು ವಾರಕ್ಕೂ ಹೆಚ್ಚು ಸಮಯ ಬೇಕಾಗುತ್ತೆ. ಅಲ್ಲಿಯವರೆಗೆ ನಾವು ಏನು ಮಾಡೋದು ಎಂದು ಕ್ಯಾಬ್ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: Karnataka Rains: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ, ಇನ್ನೆಲ್ಲೆಲ್ಲಿ ಮಳೆ ಸಂಭವ, ಇಲ್ಲಿದೆ ಮಾಹಿತಿ
ಬೆಂಗಳೂರಿನಲ್ಲಿ ನಿನ್ನೆ ಮಳೆಯ ಅಬ್ಬರ ಜೋರಾಗಿತ್ತು. ನಗರದ ವಿಲ್ಸನ್ ಗಾರ್ಡಾನ್, ಶಾಂತಿ ನಗರ, ಕೋರಮಂಗಲ, ಲಾಲ್ ಬಾಗ್, ಮಾರತಹಳ್ಳಿ ಸುತ್ತಮುತ್ತ, ಆಡುಗೋಡಿ ಸುತ್ತ- ಮುತ್ತ ಗುಡುಗು ಸಹಿತ ವರುಣ ಆರ್ಭಟಿಸಿದ್ದ. ಆಡುಗೋಡಿಯಲ್ಲಿ ರಸ್ತೆ ಮೇಲೆ ಹೊಳೆಯಂತೆ ನೀರು ಹರಿಯುತ್ತಿತ್ತು. ರಸ್ತೆ ಜಲಾವೃತವಾಗಿ ವಾಹನ ಸವಾರರು ಪರದಾಡುತ್ತಿದ್ದರು. ಇನ್ನು ವರ್ತೂರು ವ್ಯಾಪ್ತಿಯಲ್ಲಿ ಭಾರಿ ಮಳೆಗೆ ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿತ್ತು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:34 am, Tue, 13 June 23