ಬೆಂಗಳೂರು: ಬಿಬಿಎಂಪಿ(BBMP) ವ್ಯಾಪ್ತಿಯ ರಸ್ತೆ ಗುಂಡಿಗಳ(Potholes) ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದ ಅಂತರದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಹೊಸ ಗುಂಡಿ ಪತ್ತೆಯಾಗಿದ್ದು ಒಟ್ಟು ಗುಂಡಿಗಳ ಸಂಖ್ಯೆ 31 ಸಾವಿರಕ್ಕೆ ಏರಿಕೆಯಾಗಿದೆ. ಕಳೆದ ನ.27ಕ್ಕೆ 25 ಸಾವಿರಕ್ಕೂ ಅಧಿಕ ಗುಂಡಿ ಪತ್ತೆ ಆಗಿದ್ದವು. ನ.5ರ ವೇಳೆಗೆ 31 ಸಾವಿರಕ್ಕೆ ಏರಿಕೆಯಾಗಿವೆ. ಬಿಬಿಎಂಪಿ ಮಾಹಿತಿ ಪ್ರಕಾರ ಇನ್ನೂ 7 ಸಾವಿರ ರಸ್ತೆ ಗುಂಡಿ ಮುಚ್ಚುವುದು ಬಾಕಿ ಇದೆ.
ರಸ್ತೆ ಗುಂಡಿಗಳ ವಿಚಾರಕ್ಕೆ ಸಂಬಂಧಿಸಿ ಬಿಬಿಎಂಪಿ ಅಧಿಕಾರಿಗಳ ಜೊತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸಭೆ ನಡೆಸಿದ್ದಾರೆ. ಬಿಬಿಎಂಪಿಯ ಎಲ್ಲಾ ವಲಯದ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು ಅಧಿಕಾರಿಗಳು ರಸ್ತೆ ಗುಂಡಿಗಳು ಜಾಗದಿಂದಲೇ ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಾಗೂ ಸಭೆಯಲ್ಲಿ ಇಂದು ಮಧ್ಯಾಹ್ನದೊಳಗೆ ಮುಖ್ಯ ರಸ್ತೆಗಳಲ್ಲಿನ ಗುಂಡಿಗಳನ್ನ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ರಸ್ತೆ ಗುಂಡಿ ವಿವರ
ಕೆಜಿಎಫ್ನಲ್ಲಿ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚಿದ ಆಟೋ ಚಾಲಕರು
ಕೋಲಾರ ಜಿಲ್ಲೆ ಕೆಜಿಎಫ್ನಗರದಲ್ಲಿ ಆಟೋ ಚಾಲಕರು ಗುಂಡಿ ಮುಚ್ಚಿದ್ದಾರೆ. ಸಲ್ಡಾನ ವೃತ್ತದಿಂದ ಚಾಂಪಿಯನ್ ಪ್ರದೇಶದವರೆಗೆ ರಸ್ತೆ ಹಾಳಾಗಿದ್ದು ಗುಂಡಿಬಿದ್ದ ರಸ್ತೆಯಲ್ಲಿ ಓಡಾಡಲು ವಾಹನ ಸವಾರರು ಪರದಾಡುತ್ತಿದ್ದರು. ಈ ಹಿನ್ನೆಲೆ ಆಟೋ ಚಾಲಕರಾದ ನಾಗರಾಜ್, ಜಾಬೀಸ್ ಬೇರೆಡೆಯಿಂದ ಮಣ್ಣು ತಂದು ರಸ್ತೆ ಗುಂಡಿ ಮುಚ್ಚಿದ್ದಾರೆ. ಆಟೋ ಚಾಲಕರಾದ ನಾಗರಾಜ್, ಜಾಬೀಸ್ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published On - 11:24 am, Sun, 6 November 22