ಹೆಲ್ಮೆಟ್​ ಇಲ್ಲ, ಸಿಗ್ನಲ್​ ಜಂಪ್; ಈ ವರ್ಷ ಬೆಂಗಳೂರಿನಲ್ಲಿ ಲಕ್ಷ ಲಕ್ಷ ಟ್ರಾಫಿಕ್ ರೂಲ್ಸ್ ಬ್ರೇಕ್ ಕೇಸ್​ ದಾಖಲು

| Updated By: ಆಯೇಷಾ ಬಾನು

Updated on: Nov 05, 2023 | 12:41 PM

ತಂತ್ರಜ್ಞಾನದ ಮೂಲಕ ಕೇಸ್ ಹಾಕಿ ದಂಡ ವಸೂಲಿಗೆ ಟ್ರಾಫಿಕ್ ಪೊಲೀಸರು ಫ್ಲಾನ್ ಮಾಡಿದ್ದು ಇದಕ್ಕೂ ವಾಹನ ಸವಾರರು ತಲೆ ಕೆಡಿಸಿಕೊಳ್ಳುತ್ತಿಲ್ಲ. 2023ರ ವರ್ಷದ ಕೇವಲ ಹತ್ತು ತಿಂಗಳಲ್ಲಿ ಲಕ್ಷ ಲಕ್ಷ ಕೇಸ್​ಗಳು ದಾಖಲಾಗಿವೆ. ಹೆಲ್ಮೆಟ್ ಧರಿಸದೇ ಓಡಾಡುವವರ ಸಂಖ್ಯೆ ಮೀತಿ ಮೀರುತ್ತಿದೆ. ಒಟ್ಟಾರೆ 2023ರ ಜನವರಿಯಿಂದ ಈವರೆಗೆ 68.30 ಲಕ್ಷ ಪ್ರಕರಣಗಳು ದಾಖಲಾಗಿವೆ.

ಹೆಲ್ಮೆಟ್​ ಇಲ್ಲ, ಸಿಗ್ನಲ್​ ಜಂಪ್; ಈ ವರ್ಷ ಬೆಂಗಳೂರಿನಲ್ಲಿ ಲಕ್ಷ ಲಕ್ಷ ಟ್ರಾಫಿಕ್ ರೂಲ್ಸ್ ಬ್ರೇಕ್ ಕೇಸ್​ ದಾಖಲು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ನ.05: ರಸ್ತೆ ಮೇಲೆ ಪೊಲೀಸರು ಕಾಣಿಸುತ್ತಿಲ್ಲ ಎಂದು ವಾಹನ ಸವಾರರು ಧೈರ್ಯದಿಂದ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ (Traffic Rules). ಒಂದೇ ವರ್ಷದಲ್ಲಿ ಲಕ್ಷ ಲಕ್ಷ ಟ್ರಾಫಿಕ್ ರೂಲ್ಸ್ ಬ್ರೇಕ್ ಕೇಸ್ ದಾಖಲಾಗಿದೆ. ಕಳೆದ ಕೆಲ ತಿಂಗಳಿನಿಂದ ಟ್ರಾಫಿಕ್ ಪೊಲೀಸರು ಕೆಲ ರಸ್ತೆಯಲ್ಲಿ ಚೆಕ್ಕಿಂಗ್ ಮಾಡುವುದನ್ನ ನಿಲ್ಲಿಸಿದ್ದಾರೆ (Bengaluru Traffic Police). ತಂತ್ರಜ್ಞಾನ ಬಳಸಿ ಕೇಸ್ ಮಾಡಿ ದಂಡ ವಸೂಲಿಗೆ ಮುಂದಾಗಿದ್ದಾರೆ. ಯಾವುದೇ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾದ್ರೆ ಫೋಟೋ ಸಮೇತ ವಾಹನ ಮಾಲೀಕನಿಗೆ ನೋಟಿಸ್ ಹೋಗುತ್ತಿದೆ. ಟ್ರಾಫಿಕ್ ಸಿಸಿಟಿವಿ ಪರಿಶೀಲನೆ ನಡೆಸಿ ಪೊಲೀಸರು ಕೇಸ್ ಹಾಕ್ತಿದ್ದಾರೆ. ಪೊಲೀಸ್ ಇಲ್ಲ, ಯಾರು ನಮ್ಮನ್ನ ಹಿಡಿಯಲ್ಲ ಎಂದು ರಾಜಾರೋಷವಾಗಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ಓಡಾಡುತ್ತಿದ್ದವರ ಮನೆ ಬಾಗಿಲಿಗೆ ನೋಟಿಸ್ ಬರುತ್ತಿದೆ. ದಂಡ ಕಟ್ಟುವ ಬಗ್ಗೆ ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೇವಲ ಹತ್ತು ತಿಂಗಳಲ್ಲಿ ಲಕ್ಷ ಲಕ್ಷ ಕೇಸ್​ಗಳು ದಾಖಲಾಗಿವೆ.

ತಂತ್ರಜ್ಞಾನದ ಮೂಲಕ ಕೇಸ್ ಹಾಕಿ ದಂಡ ವಸೂಲಿಗೆ ಟ್ರಾಫಿಕ್ ಪೊಲೀಸರು ಫ್ಲಾನ್ ಮಾಡಿದ್ದು ಇದಕ್ಕೂ ವಾಹನ ಸವಾರರು ತಲೆ ಕೆಡಿಸಿಕೊಳ್ಳುತ್ತಿಲ್ಲ. 2023ರ ವರ್ಷದ ಕೇವಲ ಹತ್ತು ತಿಂಗಳಲ್ಲಿ ಲಕ್ಷ ಲಕ್ಷ ಕೇಸ್​ಗಳು ದಾಖಲಾಗಿವೆ. ಹೆಲ್ಮೆಟ್ ಧರಿಸದೇ ಓಡಾಡುವವರ ಸಂಖ್ಯೆ ಮೀತಿ ಮೀರುತ್ತಿದೆ. ಹೆಲ್ಮೆಟ್ ರಹಿತ ಬೈಕ್ ಚಾಲನೆಯಡಿ 31.49 ಲಕ್ಷ ಕೇಸ್​ಗಳು ದಾಖಲಾಗಿವೆ. ಹೆಲ್ಮೆಟ್ ಧರಿಸದ ಹಿಂಬದಿ ಸವಾರ ಪ್ರಯಾಣಿಸಿರುವ ಬಗ್ಗೆ 8.97 ಲಕ್ಷ ಕೇಸ್​ಗಳು ದಾಖಲಾಗಿವೆ. ಟ್ರಾಫಿಕ್ ಸಿಗ್ನಲ್ ಜಂಪ್ ಸಂಬಂಧ 8.46 ಲಕ್ಷ ಪ್ರಕರಣಗಳು ದಾಖಲಾಗಿದ್ದು ರಾಂಗ್ ಪಾರ್ಕಿಂಗ್ ಸಂಬಂಧ 8.91 ಲಕ್ಷ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಜಾಮೀನಿನ ಮೇಲೆ ಬಿಡುಗಡೆಗೊಂಡ ಶಂಕಿತ ಉಗ್ರನ ಚಲನವಲನ ಪರೀಕ್ಷೆಗೆ ಜಿಪಿಎಸ್​ ಟ್ರ್ಯಾಕರ್ ಕಾಲಿಗೆ ಕಟ್ಟಿದ ಪೊಲೀಸರು

ನೋ ಎಂಟ್ರಿಯಲ್ಲಿ ವಾಹನ ಚಲಾಯಿಸಿದ ಸಂಬಂಧ 1.15 ಲಕ್ಷ ಪ್ರಕರಣಗಳು ದಾಖಲಾಗಿವೆ. ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದು 6.15 ಲಕ್ಷ ಕೇಸ್​ಗಳು ದಾಖಲಾಗಿವೆ. ಒಟ್ಟಾರೆ 2023ರ ಜನವರಿಯಿಂದ ಈವರೆಗೆ 68.30 ಲಕ್ಷ ಪ್ರಕರಣಗಳು ದಾಖಲಾಗಿವೆ. ಒಂದೆಡೆ ಪೇಪರ್ ಲೇಸ್ ಕೇಸ್ ಹಾಕುವ ಸಲುವಾಗಿ ಟ್ರಾಪಿಕ್ ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದು ಇನ್ನೊಂದೆಡೆ ತಂತ್ರಜ್ಞಾನ, ಸಿಸಿಟಿವಿ ಏನೇ ಇದ್ರು ನಾವು ನೋಡಲ್ಲ ಎಂದು ವಾಹನ ಸವಾರರು ಓಡಾಡುತ್ತಿದ್ದಾರೆ. ಸೂಕ್ತ ರೀತಿಯಲ್ಲಿ ಜಾಗೃತಿ ಮೂಡಿಸದ ಪರಿಣಾಮ ಟ್ರಾಫಿಕ್ ರೂಲ್ಸ್ ಬ್ರೇಕ್ ಆಗ್ತಿರೋ ಸಾಧ್ಯತೆ ಇದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:27 am, Sun, 5 November 23