AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ತಿಂಗಳಲ್ಲಿ 50 ಶಾಸಕರನ್ನ ಕರೆದುಕೊಂಡು ಹೋಗಲಿ ನೋಡೋಣ: ಬಿಜೆಪಿಗೆ ಪ್ರಿಯಾಂಕ್​ ಸವಾಲು

ಬಿಜೆಪಿಯವರಿಗೆ ಮನವಿ ಮಾಡಿಕೊಳ್ಳುತ್ತೇನೆ ಬರ ಅಧ್ಯಯನ ಮುಗಿದಿದೆ. ಕೇಂದ್ರದ ತಂಡವೇ ಬರ ಪರಿಶೀಲನೆ ಮಾಡಿ ವರದಿ ಕೂಡ ಕೊಟ್ಟಿದೆ. ಕೇಂದ್ರ, ರಾಜ್ಯ ತಂಡಗಳ ಅಧ್ಯಯನ ಮುಗಿದ ಮೇಲೆ ನೀವೇನು ಅಧ್ಯಯನ ಮಾಡುವುದು? ಕಾಂಗ್ರೆಸ್​ಗೆ ಏರು ಧ್ವನಿಯಲ್ಲಿ ಗದರಿಸುತ್ತೀರಲ್ಲ, ಅದೇ ಧ್ವನಿಯನ್ನು ಕೇಂದ್ರದ ಮುಂದೆ ಎತ್ತಿ. ಇಲ್ಲಿ ಬರ ಅಧ್ಯಯನ ಮಾಡೋದು ಬಿಟ್ಟು 17 ಸಾವಿರ ಕೋಟಿ ರೂ. ಪರಿಹಾರ ತನ್ನಿ. ಕೇವಲ ಗಿಮಿಕ್ ಮಾಡೋದು ಬಿಡಿ ಎಂದು ಸಚಿವ ಪ್ರಿಯಾಂಕ್​​ ಖರ್ಗೆ ವಾಗ್ದಾಳಿ ಮಾಡಿದರು.

5 ತಿಂಗಳಲ್ಲಿ 50 ಶಾಸಕರನ್ನ ಕರೆದುಕೊಂಡು ಹೋಗಲಿ ನೋಡೋಣ: ಬಿಜೆಪಿಗೆ ಪ್ರಿಯಾಂಕ್​ ಸವಾಲು
ಸಚಿವ ಪ್ರಿಯಾಂಕ್​ ಖರ್ಗೆ
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ|

Updated on: Nov 05, 2023 | 12:08 PM

Share

ಬೆಂಗಳೂರು ನ.05: ಲೋಕಸಭೆ ಚುನಾವಣೆ (Lokasbha Election) ಬಳಿಕ ಬಿಜೆಪಿ (BJP), ಜೆಡಿಎಸ್​ನಲ್ಲಿ (JDS) ಯಾರೂ ಉಳಿಯಲ್ಲ. ಐದು ತಿಂಗಳು ಸಮಯ ಕೊಡುತ್ತೇನೆ 50 ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ. ಮಾತ್ತೆತ್ತಿದರೆ ರಾಜ್ಯ ಬಿಜೆಪಿಯವರು ವರಿಷ್ಠರ ಅಂತ ಹೇಳುತ್ತಾರೆ. ಯಾಕೆ ರಾಜ್ಯ ಬಿಜೆಪಿ ನಾಯಕರಿಗೆ ಬೆಲೆ ಇಲ್ವಾ. ಬಿಜೆಪಿಯ ಐವತ್ತು ಜನರು ನಮ್ಮ ಪಕ್ಷಕ್ಕೆ ಬರುವುದಕ್ಕೆ ತಯಾರಿದ್ದಾರೆ ನೆನಪಿಡಿ. ಎಲ್ಲಾ ಸಮಸ್ಯೆ ಸರಿಮಾಡಿಕೊಂಡು ಬೆಳಗಾವಿ ಅಧಿವೇಶನಕ್ಕೆ ಬರಲಿ ಎಂದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್​ ಖರ್ಗೆ (Priyank Kharge) ಬಿಜೆಪಿಗೆ ಸವಾಲ್​ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೆಲಸ ಮಾಡದೆ ಕಲಬುರಗಿ ಜನರು ಸುಮ್ಮನೇ ಗೆಲ್ಲಿಸಿ ಕಳಿಸುತ್ತಾರಾ? ಏನು ಮಾಡಿದ್ದೀನಿ ಅಂತಾ ತಿಳಿಯಬೇಕಿದ್ದರೇ ಹೆಚ್​ಡಿ ಕುಮಾರಸ್ವಾಮಿ ಅವರನ್ನು ಸ್ಥಳಕ್ಕೆ ಕರೆದೊಯ್ಯುವೆ. ಇವರು ಏನು ಮಾಡಿದ್ದಾರೆ ಅಂತಾ ತಿಳಿದು ಜನರು ದೂರ ಇಟ್ಟಿದ್ದಾರೆ. ಪದೇ ಪದೇ ಕಲಬುರಗಿ ಜನ ಯಾಕೆ ಆರಿಸಿ ಕಳಿಸಿದ್ದಾರೆ? ಕೆಲಸ ಮಾಡದೇ ಜನ ಸುಮ್ಮನೆ ಆರಿಸುತ್ತಾರಾ? ಜೆಡಿಎಸ್ ನವರಿಗೆ ಕೇಳಿ ಜನರು ನಮಗೆ ಓಟು ಹಾಕುತ್ತಾರಾ ಎಂದು ವಾಗ್ದಾಳಿ ಮಾಡಿದರು.

ಡಿಕೆ ಶಿವಕುಮಾರ್​ ಮುಖ್ಯಮಂತ್ರಿಯಾಗುವುದಾದರೇ ಜೆಡಿಎಸ್​ 19 ಶಾಸಕರು ಬೆಂಬಲ ನೀಡುತ್ತೇವೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿದಂತೆ ಜೆಡಿಎಸ್​ನವರ ಬೆಂಬಲ ಕೇಳಿದವರು ಯಾರು? ಈಗ ನಮಗೆ ಅವರ ಅವಶ್ಯಕತೆ ಏನಿದೆ. ಯಾರು ಸಿಎಂ ಆಗುತ್ತಾರೆ, ಯಾರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಅಂತ ಕಟ್ಟಿಕೊಂಡು ಅವರಿಗೆ ಏನಾಗಬೇಕು? ಬಿಜೆಪಿಯಲ್ಲಿ ಜೆಡಿಎಸ್ ಬಹುತೇಕ ವಿಲೀನವಾಗಿದೆ. ಜೆಡಿಎಸ್ ಪೀಪಲ್​ ಲೆಸ್ ಪಾರ್ಟಿ, ಬಿಜೆಪಿ ಲೀಡರ್ ಲೆಸ್ ಪಾರ್ಟಿ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬಿದ್ದು ಅಲ್ಲಿನ ಯಾವುದೇ ಅಜಿತ್ ಪವಾರ್ ಬಿಜೆಪಿಗೆ ಬಂದ್ರೆ ನಾವು ಸೇರಿಸಿಕೊಳ್ತೇವೆ; KS ಈಶ್ವರಪ್ಪ

ನಮಗೆ ಅವರ ಅವಶ್ಯಕತೆ ಇಲ್ಲ. ಅವರ ಅಸ್ತಿತ್ವಕ್ಕೆ ಏನು ಬೇಕಾದರೂ ಹೇಳಿಕೊಳ್ಳಲಿ. ಜೆಡಿಎಸ್ ಬಳಿ ಯಾವುದೇ ಇಶ್ಯೂ ಇಲ್ಲ. ಅವರು ಮೊದಲು ಭ್ರಷ್ಟಾಚಾರ ವಿಚಾರ ಮಾತನಾಡಿದರು. ಅವರ ಪೆನ್ ಡ್ರೈವ್ ಅವರ ಜೇಬಿನಲ್ಲೇ ಉಳಿಯಿತು. ಅವರ ಮನೆ ಗೊಂದಲಗಳನ್ನು ಮೊದಲು ನಿವಾರಿಸಿಕೊಳ್ಳಲಿ ಎಂದರು.

ಬಿಜೆಪಿಯವರಿಗೆ ಮನವಿ ಮಾಡಿಕೊಳ್ಳುತ್ತೇನೆ ಬರ ಅಧ್ಯಯನ ಮುಗಿದಿದೆ. ಕೇಂದ್ರದ ತಂಡವೇ ಬರ ಪರಿಶೀಲನೆ ಮಾಡಿ ವರದಿ ಕೂಡ ಕೊಟ್ಟಿದೆ. ಕೇಂದ್ರ, ರಾಜ್ಯ ತಂಡಗಳ ಅಧ್ಯಯನ ಮುಗಿದ ಮೇಲೆ ನೀವೇನು ಅಧ್ಯಯನ ಮಾಡುವುದು? ಕಾಂಗ್ರೆಸ್​ಗೆ ಏರು ಧ್ವನಿಯಲ್ಲಿ ಗದರಿಸುತ್ತೀರಲ್ಲ, ಅದೇ ಧ್ವನಿಯನ್ನು ಕೇಂದ್ರದ ಮುಂದೆ ಎತ್ತಿ. ಇಲ್ಲಿ ಬರ ಅಧ್ಯಯನ ಮಾಡೋದು ಬಿಟ್ಟು 17 ಸಾವಿರ ಕೋಟಿ ರೂ. ಪರಿಹಾರ ತನ್ನಿ. ಕೇವಲ ಗಿಮಿಕ್ ಮಾಡೋದು ಬಿಡಿ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ