ಕಾಂಗ್ರೆಸ್ ಸರ್ಕಾರ ಬಿದ್ದು ಅಲ್ಲಿನ ಯಾವುದೇ ಅಜಿತ್ ಪವಾರ್ ಬಿಜೆಪಿಗೆ ಬಂದ್ರೆ ನಾವು ಸೇರಿಸಿಕೊಳ್ತೇವೆ; KS ಈಶ್ವರಪ್ಪ

ಕಾಂಗ್ರೆಸ್​ನಲ್ಲಿ ಈಗ ಹಾದಿ ಬೀದಿಯಲ್ಲಿ ಹೋಗುವವರೆಲ್ಲರೂ ಸಿಎಂ ಸ್ಥಾನ ಕೇಳುತ್ತಿದ್ದಾರೆ‌ ಎಂದು ಬಿಜೆಪಿ ಮಾಜಿ ಶಾಸಕ ಕೆಎಸ್​ ಈಶ್ವರಪ್ಪ(KS Eshwarappa)ಅವರು ಟಾಂಗ್​ ಕೊಟ್ಟಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಿದ್ದು ಅಲ್ಲಿನ ಯಾವುದೇ ಅಜಿತ್ ಪವಾರ್ ಬಿಜೆಪಿಗೆ ಬಂದ್ರೆ ನಾವು ಸೇರಿಸಿಕೊಳ್ತೇವೆ; KS ಈಶ್ವರಪ್ಪ
ಕೆಎಸ್​ ಈಶ್ವರಪ್ಪ
Follow us
ರಾಮ್​, ಮೈಸೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 04, 2023 | 3:04 PM

ಮೈಸೂರು, ನ.04: ಕಾಂಗ್ರೆಸ್(Congress) ಸರ್ಕಾರ ಬಿದ್ದು ಅಲ್ಲಿನ ಯಾವುದೇ ಅಜಿತ್ ಪವಾರ್ ಬಿಜೆಪಿ ಜೊತೆ ಬಂದರೆ ನಾವು ಸೇರಿಸಿಕೊಳ್ಳುತ್ತೇವೆ. ಆದರೆ, ಬಂದ ಅಜಿತ್ ಪವಾರ್‌ಗೆ ಸಿಎಂ ಸ್ಥಾನ ಕೊಡುವುದಿಲ್ಲ ಎಂದು ಬಿಜೆಪಿ ಮಾಜಿ ಶಾಸಕ ಕೆಎಸ್​ ಈಶ್ವರಪ್ಪ(KS Eshwarappa)ಅವರು ಹೇಳಿದರು. ಮೈಸೂರಿ(Mysore)ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ ನಾವು ಎಂತಂತವರನ್ನೋ ಜೀರ್ಣಿಸಿಕೊಂಡಿದ್ದೇವೆ. ಅವರು ಜೀರ್ಣವಾದರೆ ಹೊಟ್ಟೆಯಲ್ಲಿ ಇಟ್ಟುಕೊಳ್ಳುತ್ತೇವೆ‌. ಇಲ್ಲವಾದರೆ ವಾಂತಿ ಮಾಡಿ ಹೊರಹಾಕುತ್ತೇವೆ. ಬಂಗಾರಪ್ಪ ಅಂತವರನ್ನೇ ಪಕ್ಷಕ್ಕೆ ಸೇರಿಸಿಕೊಂಡವರು ನಾವು, ಕೆಲವರು ಬಂದರು, ಹೋದರು. ಕೆಲವರು ಇಲ್ಲೇ ಇದ್ದು ಒಳ್ಳೆಯವರಾಗಿ ಪಕ್ಷ ಕಟ್ಟುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರ ಬೀಳುವ ದಿನಗಣನೆ ಈಗ ಆರಂಭ

ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಬ್ಬ ಅಜಿತ್ ಪವಾರ್ ಹುಟ್ಟಿ ಕೊಳ್ಳುತ್ತಿದ್ದಾರೆ‌. ಸರ್ಕಾರ ಬೀಳುವ ದಿನಗಣನೆ ಈಗ ಆರಂಭವಾಗಿದೆ. ನಾನು ತಿಂಗಳು ವರ್ಷದ ಮಾತು ಆಡುತ್ತಿಲ್ಲ. ಕೆಲವೇ ದಿನಗಳಲ್ಲಿ ಸರ್ಕಾರ ಬೀಳಬಹುದು. ಸತೀಶ್ ಜಾರಕಿಹೊಳಿ, ಡಿ.ಕೆ ಶಿವಕುಮಾರ್, ಹರಿಪ್ರಸಾದ್, ಪರಮೇಶ್ವರ್​, ಪ್ರಿಯಾಂಕ್​ ಖರ್ಗೆ ಎಲ್ಲರೂ ಅಜಿತ್ ಪವಾರ್​​ಗಳಾಗಿದ್ದಾರೆ. ಹೀಗಾಗಿ ಸರ್ಕಾರ ಬೀಳುವ ಲಕ್ಷಣ ಕಾಣುತ್ತಿದೆ.

ಇದನ್ನೂ ಓದಿ:ಚಾಮರಾಜನಗರಕ್ಕೆ ಹೋದರೆ ಸಿಎಂ ಸ್ಥಾನ ಹೋಗುತ್ತೆ ಎನ್ನುವುದು ಮೂಢನಂಬಿಕೆ: ಸಿಎಂ ಸಿದ್ಧರಾಮಯ್ಯ

ಹಾದಿ ಬೀದಿಯಲ್ಲಿ ಹೋಗುವವರೆಲ್ಲರೂ ಸಿಎಂ ಸ್ಥಾನಕ್ಕೆ ಭೇಡಿಕೆ

ಕಾಂಗ್ರೆಸ್​ನಲ್ಲಿ ಈಗ ಹಾದಿ ಬೀದಿಯಲ್ಲಿ ಹೋಗುವವರೆಲ್ಲರೂ ಸಿಎಂ ಸ್ಥಾನ ಕೇಳುತ್ತಿದ್ದಾರೆ‌. ಹೌದು, ಪ್ರಿಯಾಂಕ್ ಖರ್ಗೆ ಅವರ ಅಪ್ಪನಿಗೆ ಸಿಎಂ ಸ್ಥಾನ ಕೇಳಿದ್ದರೆ ಮೆಚ್ಚಿಕೊಳ್ಳುತ್ತಿದ್ದೆ. ಆದರೆ, ಅವರೇ ಕೇಳುತ್ತಿದ್ದಾರೆ, ಇದು ನಗೆಪಾಟಲಿಗೆ ವಿಚಾರ ಎಂದರು. ಇನ್ನು ಇದೇ ವೇಳೆ ಬಿಜೆಪಿ ಅಪರೇಷನ್ ಕಮಲ ಆರೋಪ ವಿಚಾರ‌ವಾಗಿ ‘ಒಬ್ಬೇ ಒಬ್ಬ ಕಾಂಗ್ರೆಸ್ ಶಾಸಕ ನನಗೆ 50 ಕೋಟಿ ರೂ. ಆಫರ್ ಬಿಜೆಪಿಯಿಂದ ಯಾರು ಕೊಟ್ಟರು ಎಂದು ಹೇಳಿ ಬಿಡಲಿ, ಆಗ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸುಳ್ಳು ಹೇಳಿ ಇಂತಹ ವಿಚಾರ ಹಬ್ಬಿಸುವುದು ಬೇಡ ಎಂದರು.

ರಾಜ್ಯದ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ