AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರಕ್ಕೆ ಹೋದರೆ ಸಿಎಂ ಸ್ಥಾನ ಹೋಗುತ್ತೆ ಎನ್ನುವುದು ಮೂಢನಂಬಿಕೆ: ಸಿಎಂ ಸಿದ್ಧರಾಮಯ್ಯ

ಈ ಹಿಂದಿನ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಹೋಗುತ್ತಿರಲಿಲ್ಲ. ಹೋದರೆ ಸಿಎಂ ಸ್ಥಾನ ಹೋಗುತ್ತೆ ಅಂತಾ ನಂಬಿದ್ದರು. ಆದರೆ ನಾನು ಸಿಎಂ ಆದಾಗ 12 ಬಾರಿ ಚಾಮರಾಜನಗರಕ್ಕೆ ಭೇಟಿ ಕೊಟ್ಟೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Anil Kalkere
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 02, 2023 | 8:26 PM

Share

ಬೆಂಗಳೂರು: ಚಾಮರಾಜನಗರಕ್ಕೆ ಹೋದರೆ ಸಿಎಂ ಸ್ಥಾನ ಹೋಗುತ್ತೆ ಎನ್ನುವುದು ಮೂಢನಂಬಿಕೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ವಚನ ಸಂಸ್ಕೃತಿ ಅಭಿಯಾನ‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದಿನ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಹೋಗುತ್ತಿರಲಿಲ್ಲ. ಹೋದರೆ ಸಿಎಂ ಸ್ಥಾನ ಹೋಗುತ್ತೆ ಅಂತಾ ನಂಬಿದ್ದರು. ಆದರೆ ನಾನು ಸಿಎಂ ಆದಾಗ 12 ಬಾರಿ ಚಾಮರಾಜನಗರಕ್ಕೆ ಭೇಟಿ ಕೊಟ್ಟೆ. ಈಗ 2ನೇ ಬಾರಿ ಸಿಎಂ ಕೂಡ ಆಗಿದ್ದೇನೆ ಎಂದರು.

ಚಾಮರಾಜನಗರ ಭೇಟಿಯಿಂದ ಅವರು ಸಿಎಂ ಸ್ಥಾನ ಕಳೆದುಕೊಂಡಿಲ್ಲ. ಬದಲಾಗಿ ರಾಜಕೀಯ ಕಾರಣಕ್ಕೆ ಸಿಎಂ ಸ್ಥಾನ ಕಳೆದುಕೊಂಡರು ಅಷ್ಟೇ. S.R.ಬೊಮ್ಮಾಯಿ ಸಿಎಂ ಸ್ಥಾನ ಏಕೆ ಹೋಯಿತು ಅಂತಾ ನಿಮಗೆ ಗೊತ್ತು ಎಂದು ಹೇಳಿದರು.

ಇದನ್ನೂ ಓದಿ: ಈಶ್ವರಪ್ಪಗೆ ಸನ್ಮಾನಿಸಲು ನಿರಾಕರಿಸಿದ ಸಿದ್ದರಾಮಯ್ಯ: ಸಮುದಾಯದ ಕಾರ್ಯಕ್ರಮದಲ್ಲಿ ಉಭಯ ನಾಯಕರ ಮುನಿಸು ಬಹಿರಂಗ

ಸದಾಶಿವನಗರದಲ್ಲಿನ ನಿವಾಸಕ್ಕೆ ಹೋಗಲು ಯಾರೂ ಮುಂದೆ ಬರ್ತಿಲ್ಲ. ಬೇಡ ಸರ್ ಯಾರೋ ಸತ್ತಿದ್ದಾರೆ ಅಂತಾ ಹೇಳುತ್ತಿದ್ದಾರೆ. ಕೆಲ ಮಾತುಗಳನ್ನು ಆಡಲು ಆಗಲ್ಲ, ನುಂಗಿಕೊಳ್ಳಬೇಕಾಗುತ್ತೆ ಎಂದರು.

ಫ.ಗು.ಹಳಕಟ್ಟಿ ಫೌಂಡೇಶನ್ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ

ನಗರದ ಟೌನ್‌ಹಾಲ್​ನಲ್ಲಿ ನಡೆದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಫೌಂಡೇಶನ್ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ- 2023 ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಸಿದ್ಧರಾಮಯ್ಯ ಮೂವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಶಿಕ್ಷಣ ಕ್ಷೇತ್ರದಲ್ಲಿ-ನಿರಂಜನಾರಾಧ್ಯ, ಸಮಾಜಸೇವೆ ಕ್ಷೇತ್ರದಲ್ಲಿ-S.D.ಸುಶೀಲಮ್ಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಎಸ್​.ಡಿ.ಸಿದ್ದರಾಮಯ್ಯಗೆ 1 ಲಕ್ಷ ರೂ. ಚೆಕ್, ಪ್ರಶಸ್ತಿ ಫಲಕ ಪ್ರದಾನ ಮಾಡಲಾಯಿತು.

ಇದನ್ನೂ ಓದಿ: ಬಿಜೆಪಿಯಲ್ಲಿ ಉತ್ಸಾಹ ಕಮರಿ ಹೋಗಿದೆ, ವಿಪಕ್ಷ ನಾಯಕನ ಆಯ್ಕೆ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ: ಸಚಿವ ಹೆಚ್​ಕೆ ಪಾಟೀಲ್​​

ಬಳಿಕ ಮಾಡಿದ ಸಿಎಂ ಸಿದ್ಧರಾಮಯ್ಯ ಡಾ.ಫ.ಗು.ಹಳಕಟ್ಟಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಮಾಡಿದ್ದಾರೆ. ಅವರು ಸಂಪಾದನೆ ಮಾಡಿದ್ದನ್ನು ಸಮಾಜಸೇವೆಗೆ ಉಪಯೋಗಿಸಿದ್ದಾರೆ. ಬಸವವಣ್ಣನವರು ಅನುಭವ ಮಂಟಪ ಮೂಲಕ ಕ್ರಾಂತಿ ಮಾಡಿದರು. ಅನುಭವ ಮಂಟಪ ಪ್ರಜಾಪ್ರಭುತ್ವದ ಅಡಿಗಲ್ಲು ಎಂದರು.

ಎಲ್ಲರಿಗೂ ಬಸವಣ್ಣ ಗೊತ್ತಿಲ್ಲ, ಗೊತ್ತಿದ್ರೂ ಕೆಲವರು ಪಾಲನೆ ಮಾಡುತ್ತಿಲ್ಲ. ಅಂತರ್​ಜಾತಿ ವಿವಾಹದಿಂದ ಜಾತಿ ಕೀಳರಿಮೆ ಹೋಗಿ ಸಮಾನತೆ ಬರುತ್ತೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ