ದೊಡ್ಡ ವೇದಿಕೆ ಮೇಲೆಯೇ ಬಿಜೆಪಿ ಶಾಸಕನ ಗುಣಗಾನ: ಬಾಂಬೆ ಫ್ರೆಂಡ್‌ಗೆ ಸಿದ್ದರಾಮಯ್ಯ ಮೇಲೆ ಉಕ್ಕಿತು ಪ್ರೀತಿ

‘ನಮ್ಮ ನೆಚ್ಚಿನ ನಾಯಕ, ನುಡಿದಂತೆ ನಡೆದಿರುವ ವ್ಯಕ್ತಿ. ಅವರ ಶಿಷ್ಯ, ಅಭಿಮಾನಿ, ಅವರನ್ನ ಎಂದೂ ಮರೆತಿಲ್ಲ. ಹೀಗೆ ಬಾಂಬೆ ಫ್ರೆಂಡ್‌ಗೆ ಸಿದ್ದರಾಮಯ್ಯ ಮೇಲೆ ಪ್ರೀತಿ ಉಕ್ಕಿ ಹರಿದಿದೆ.

ದೊಡ್ಡ ವೇದಿಕೆ ಮೇಲೆಯೇ ಬಿಜೆಪಿ ಶಾಸಕನ ಗುಣಗಾನ: ಬಾಂಬೆ ಫ್ರೆಂಡ್‌ಗೆ ಸಿದ್ದರಾಮಯ್ಯ ಮೇಲೆ ಉಕ್ಕಿತು ಪ್ರೀತಿ
ಸಮಾಜ ಕಲ್ಯಾಣ ಇಲಾಖೆ 11,173 ಕೋಟಿ ಮೀಸಲು
Follow us
Anil Kalkere
| Updated By: ರಮೇಶ್ ಬಿ. ಜವಳಗೇರಾ

Updated on: Jul 02, 2023 | 4:14 PM

ಬೆಂಗಳೂರು: ಒಂದೆಡೆ ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೊತ್ತಿಕೊಂಡಿರುವ ಕಿಚ್ಚು ಇನ್ನೂ ಆರಿಲ್ಲ. ಇನ್ನು ವಲಸೆ ಬಂದವರಿಂದಲೇ ಬಿಜೆಪಿ ಸೋಲಿಗೆ ಕಾರಣ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್​ ಬಿಟ್ಟು ಬಿಜೆಪಿಗೆ ವಲಸೆ ಬಂದಿರುವ ಶಾಸಕ ಎಸ್​ಟಿ ಸೋಮಶೇಖರ್, ಬಹಿರಂಗ ವೇದಿಕೆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಡಿಹೊಗಳಿದ್ದಾರೆ. ನಮ್ಮ ನೆಚ್ಚಿನ ನಾಯಕ, ನುಡಿದಂತೆ ನಡೆದಿರುವ ವ್ಯಕ್ತಿ. ಅವರ ಶಿಷ್ಯ, ಅಭಿಮಾನಿ, ಅವರನ್ನ ಎಂದೂ ಮರೆತಿಲ್ಲ. ಹೀಗೆ ಬಾಂಬೆ ಫ್ರೆಂಡ್‌ಗೆ ಸಿದ್ದರಾಮಯ್ಯ ಮೇಲೆ ಪ್ರೀತಿ ಉಕ್ಕಿ ಹರಿದಿದೆ.

ಇದನ್ನೂ ಓದಿ: ಮೋಸ ನಿಲ್ಲಿಸಿ-ಗ್ಯಾರಂಟಿ ಜಾರಿಗೊಳಿಸಿ ಹೆಸರಿನಲ್ಲಿ ಬಿಜೆಪಿ ಹೋರಾಟ: ಅಶ್ವತ್ಥ್ ನಾರಾಯಣ

ಇಂದು (ಜುಲೈ 02) ಬೆಂಗಳೂರಿನ ಕೇತೋಹಳ್ಳಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸೋಮಶೇಖರ್,  ಸಿದ್ದರಾಮಯ್ಯ ಅನುದಾನದಲ್ಲೇ ಬೆಳೆದು 2ನೇ ಬಾರಿ ಶಾಸಕನಾದೆ. ಬೇರೆ ಪಕ್ಷಕ್ಕೆ ಹೋದರೂ ಯಾವತ್ತೂ ಸಿದ್ದರಾಮಯ್ಯರನ್ನು ಮರೆತಿಲ್ಲ. ಹೇಳಿದಂತೆ, ನುಡಿದಂತೆ ನಡೆದ ವ್ಯಕ್ತಿ ಸಿದ್ದರಾಮಯ್ಯ. ರಾಜ್ಯದ ಜನರ ನಾಡಿಮಿಡಿತ ಸಿಎಂ ಸಿದ್ದರಾಮಯ್ಯಗೆ ಗೊತ್ತಿದೆ. ಸಿದ್ದರಾಮಯ್ಯ ರಾಜ್ಯದ ಜನರ ಋಣ ತೀರಿಸುವ ಕೆಲಸ ಮಾಡುತ್ತಾರೆ ಎಂದು ​ ಹಾಡಿಹೊಗಳಿದರು.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರು ಸಿಎಂ ಸಿದ್ದರಾಮಯ್ಯನವರು. 2013-18ರಲ್ಲಿ ಈ ಭಾಗದ ಶಾಸಕನಾಗಿದ್ದೆ. ಈ ಕ್ಷೇತ್ರದ ಅಭಿವೃದ್ಧಿಗೆ ಯಾವುತ್ತೂ ಸಹ ಇಲ್ಲ‌ ಅಂತ ಹೇಳಿಲ್ಲ. ರಾಜಕಾರಣ ಮಾಡದೇ ಪ್ರತೀ ಹಂತದಲ್ಲಿ ಕೋಟ್ಯಾಂತರ ರೂ. ಅನುದಾನ ನೀಡಿದ್ದಾರೆ. ಅವರ ಅನುದಾನದಲ್ಲಿ ಬೆಳೆದು ಎರಡನೇ ಬಾರಿಗೆ ಶಾಸಕನಾಗಿದ್ದೇನೆ. ಪಕ್ಷಾಂತರ ಹೋಗಿದ್ದರೂ ನಾನು ಯಾವತ್ತೂ ಸಿದ್ದರಾಮಯ್ಯರನ್ನ ಮರೆತಿರಲಿಲ್ಲ ಬಾಂಬ್ ಫ್ರೆಂಡ್ಸ್​​ ಗುಂಪಿನ ಸದಸ್ಯ ಎಸ್​ಟಿ ಸೋಮೇಶಖರ್ ತಿಳಿಸಿದರು.

ಹೇಳಿದಂತೆ, ನುಡಿದಂತೆ ನಡೆದ ವ್ಯಕ್ತಿ ಸಿದ್ದರಾಮಯ್ಯ. ರಾಜ್ಯದ ಜನರ ನಾಡಿ ಮಿಡಿತ ಅವರಿಗೆ ಗೊತ್ತಿದೆ. ಕರ್ನಾಟಕ ಜನರ ಋಣ ತೀರುಸುವ ಕೆಲ ಮಾಡ್ತಾಡುತ್ತಾರೆ. ಅವರ ಶಿಷ್ಯನಾಗಿ, ಅಭಿಯಾನಿಯಾಗಿ ಎರಡನೇ ಬಾರಿಗೆ ನನ್ನ ಕ್ಷೇತ್ರಕ್ಕೆ ಸಿದ್ದರಾಮಯ್ಯರನ್ನ ಸ್ವಾಗತಿಸಿದ್ದೇನೆ ಎಂದು ಜನಪ್ರಿಯ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯರನ್ನ ಭಾಷಣ ಆರಂಭದಲ್ಲಿ ಹೇಳಿದ ಸೋಮೇಶಖರ್, ಜನಪ್ರಿಯ ಮುಖ್ಯಮಂತ್ರಿ ಎಂದು ಕರೆಯುತ್ತಿದ್ದ ಹಾಗೇ ನೆರೆದಿದ್ದ ಜನರೆಲ್ಲ ಜೈ ಘೋಷಣೆ ಕೂಗಿದರು. ಬಾಯಲ್ಲಿ ಹೇಳಿದ್ದನ್ನು ಮಾಡಿತೊರಿಸುತ್ತಾರೆ. ರಾಜ್ಯದ ಜನರ ನಾಡಿಮಿಡಿತ ಸಿದ್ದರಾಮಯ್ಯರಿಗೆ ಗೊತ್ತಿದೆ. ಎಲ್ಲ ಘೋಷಣೆಗಳನ್ನು ಸಿಎಂ ಪೂರ್ಣ ಮಾಡಲು ಬದ್ದರಾಗಿದ್ದಾರೆ ಎಂದು ಹೇಳಿದರು.

ಬಳಿಕ ಭಾಷಣದಲ್ಲಿ ತಮ್ಮನ್ನು ಹಾಡಿ ಹೊಗಳಿದ ಎಸ್ ಟಿ ಸೋಮಶೇಖರ್ ಅವರ ಹೆಗಲ ಮೇಲೆ ಸಿದ್ದರಾಮಯ್ಯ ಕೈಹಾಕಿ ಮಾತುಕತೆ ನಡೆಸಿಸದರು. ಭಾಷಣ ಮುಗಿದ ಬಳಿಕ ವೇದಿಕೆಯಲ್ಲಿ ತಮ್ಮ ಪಕ್ಕ ಬಂದು ಕುಳಿತ ಎಸ್ ಟಿ ಸೋಮಶೇಖರ್ ಹೆಗಲ ಮೇಲೆ ಕೈ ಹಾಕಿ ಕೆಲ‌ಕಾಲ ಗುಪ್ತ್ ಗುಪ್​ ಆಗಿ ಮಾತನಾಡಿಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ