ಬಿಜೆಪಿಯಲ್ಲಿ ಉತ್ಸಾಹ ಕಮರಿ ಹೋಗಿದೆ, ವಿಪಕ್ಷ ನಾಯಕನ ಆಯ್ಕೆ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ: ಸಚಿವ ಹೆಚ್ಕೆ ಪಾಟೀಲ್
ಚುನಾವಣೆಯಲ್ಲಿ ಸೋಲಿನಿಂದ ಬಿಜೆಪಿಯಲ್ಲಿ ಉತ್ಸಾಹ ಕಮರಿ ಹೋಗಿದೆ. ಹೀಗಾಗಿ ವಿಪಕ್ಷ ನಾಯಕನ ಆಯ್ಕೆ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಲೇವಡಿ ಮಾಡಿದರು.
ಗದಗ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು ಸೋಲು ಕಂಡಿದ್ದಾರೆ. ಅದರಿಂದ ಸಂಪೂರ್ಣ ನೈತಿಕತೆ ಕುಸಿದು ಹೋಗಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ (HK Patil) ಲೇವಡಿ ಮಾಡಿದರು. ರಾಜ್ಯ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲಿನಿಂದ ಬಿಜೆಪಿಯಲ್ಲಿ ಉತ್ಸಾಹ ಕಮರಿ ಹೋಗಿದೆ. ಹೀಗಾಗಿ ವಿಪಕ್ಷ ನಾಯಕನ ಆಯ್ಕೆ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಅವರ ಪಕ್ಷದ ವಿಚಾರ ನಾನು ಟೀಕೆ ಟಿಪ್ಪಣಿ ಮಾಡೋಕ್ಕೆ ಹೋಗುದಿಲ್ಲಾ. ಆಪರೇಷನ್ ಕಮಲಕ್ಕೆ ಒಳಗಾದ 17 ಜನರ ಪೈಕಿ ಒಬ್ಬರನ್ನು ಮಾಡಲಿ. ಇನ್ಮುಂದೆ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವವರು ಯಾರೂ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ದೊಡ್ಡ ವೇದಿಕೆ ಮೇಲೆಯೇ ಬಿಜೆಪಿ ಶಾಸಕನ ಗುಣಗಾನ: ಬಾಂಬೆ ಫ್ರೆಂಡ್‌ಗೆ ಸಿದ್ದರಾಮಯ್ಯ ಮೇಲೆ ಉಕ್ಕಿತು ಪ್ರೀತಿ
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆರೋಪ ಅಲ್ಲಗಳೆದ ಹೆಚ್.ಕೆ.ಪಾಟೀಲ್
ವೈಎಸ್ಟಿ ಸಂಗ್ರಹ ಆಗುತ್ತಿದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಮ್ಮ ಸರ್ಕಾರದಲ್ಲಿ ಯಾವುದೇ ತಪ್ಪು ಕೆಲಸಗಳು ನಡೆದಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಪ್ರಚಾರಕ್ಕಾಗಿ ಆರೋಪ ಮಾಡುತ್ತಿದ್ದಾರೆ ಎಂದು ಅಲ್ಲಗಳೆದರು. ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದರು.
ಇದನ್ನೂ ಓದಿ: ಜನರಿಗೆ ಉಚಿತವಾಗಿ ಕೊಡುವುದು ನನ್ನ ಅನಿಸಿಕೆಯಲ್ಲಿ ಲಂಚ: ಲೋಕಾಯುಕ್ತ ನಿವೃತ್ತ ನ್ಯಾ ಸಂತೋಷ್ ಹೆಗ್ಡೆ
ಡಿಸಿಎಂ ಡಿ.ಕೆ.ಶಿವಕುಮಾರ್ ರೈತನ ಶ್ರಮದ ಬಗ್ಗೆ ಮಾತನಾಡಿದ್ದಾರೆ
ಶ್ರಮ ಒಬ್ಬರದ್ದು, ಅನುಭವಿಸುವವರು ಮತ್ತೊಬ್ಬರೆಂದು ಹೇಳಿಕೆ ವಿಚಾರವಾಗಿ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ರೈತನ ಶ್ರಮದ ಬಗ್ಗೆ ಮಾತನಾಡಿದ್ದಾರೆ. ರೈತ ಎಷ್ಟೇ ಕಷ್ಟ ಪಟ್ಟರೂ ಸಂಸತ ಅನುಭವಿಸುವ ಅವಕಾಶ ಸಿಗಲ್ಲ. ಆ ರೈತನಿಗೆ ಆಗಿರುವ ನೋವನ್ನು ಡಿಕೆ ಶಿವಕುಮಾರ್ ಹೇಳಿದ್ದಾರೆ. ರೈತರಿಗೆ ಪ್ರತಿಫಲ ಸಿಕ್ಕಿಲ್ಲವೆಂಬ ನೋವಿನಲ್ಲಿ ಆ ಮಾತು ಹೇಳಿರಬೇಕು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:18 pm, Sun, 2 July 23