ಎಸಿ ಬಸ್​​ನಲ್ಲಿ ಸೊಳ್ಳೆಗಳ ಕಾಟ: ಮಸ್ಕಿಟೋಗಳಿಂದ ಮುಕ್ತಿ ಕೊಡಿಸಿ ಅಂತ BMTCಗೆ ಟ್ಯಾಗ್ ಮಾಡಿ ಟ್ವೀಟ್

| Updated By: ವಿವೇಕ ಬಿರಾದಾರ

Updated on: Jul 19, 2023 | 11:32 AM

ಸೊಳ್ಳೆಗಳು ಬಿಎಂಟಿಸಿ ಎಸಿ ಬಸ್​​ ಪ್ರಯಾಣಿಕರಿಗೂ ತೊಂದರೆ ಕೊಡುತ್ತಿವೆ. ಹೌದು ಬಿಎಂಟಿಸಿ ಹವಾನಿಯಂತ್ರಿತ ಬಸ್​​ನಲ್ಲಿ ಸೊಳ್ಳೆ ಕಾಟವಿದೆ ಎಂದು ಸೋಷಿಯಲ್​ ಕಾಪ್​ ಎಂಬವರು ಟ್ವೀಟ್ ಮಾಡಿದ್ದಾರೆ.

ಎಸಿ ಬಸ್​​ನಲ್ಲಿ ಸೊಳ್ಳೆಗಳ ಕಾಟ: ಮಸ್ಕಿಟೋಗಳಿಂದ ಮುಕ್ತಿ ಕೊಡಿಸಿ ಅಂತ BMTCಗೆ ಟ್ಯಾಗ್ ಮಾಡಿ ಟ್ವೀಟ್
ಬಿಎಂಟಿಸಿ ಬಸ್​ನಲ್ಲಿ ಸೊಳ್ಳೆ
Follow us on

ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಸೊಳ್ಳೆಗಳ (Mosquito) ಕಾಟ ಜಾಸ್ತಿಯಾಗಿದೆ. ಅದರಲ್ಲಂತು ನಗರ ಮತ್ತು ಸುತ್ತಮುತ್ತಲಿನ ಪ್ರಮುಖ ಪ್ರದೇಶಗಳು ಮತ್ತು ವಿಶೇಷವಾಗಿ ಹೊರವರ್ತುಲ ರಸ್ತೆಯ ಹೊರವಲಯದಲ್ಲಿರುವ ಪ್ರಮುಖ ಪ್ರದೇಶಗಳ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಮಳೆಗಾಲದ ಸಮಯದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾದ ಹಿನ್ನೆಲೆ ಮಲೇರಿಯಾ, ಡೆಂಗ್ಯೂ (Dengue) ಮತ್ತು ಚಿಕೂನ್‌ಗುನ್ಯಾದಂತಹ ರೋಗಗಳು ಹರಡುವ ಭಯ ನಗರವಾಸಿಗಳಲ್ಲಿದೆ. ಇದಗೀಗ ಸೊಳ್ಳೆಗಳು ಬಿಎಂಟಿಸಿ (BMTC) ಎಸಿ ಬಸ್​​ ಪ್ರಯಾಣಿಕರಿಗೂ ತೊಂದರೆ ಕೊಡುತ್ತಿವೆ. ಹೌದು ಬಿಎಂಟಿಸಿ ಹವಾನಿಯಂತ್ರಿತ ಬಸ್​​ನಲ್ಲಿ ಸೊಳ್ಳೆ ಕಾಟವಿದೆ ಎಂದು ಸೋಷಿಯಲ್​ ಕಾಪ್​ ಎಂಬವರು ಟ್ವೀಟ್ ​ ಮಾಡಿದ್ದಾರೆ.

ಸೋಷಿಯಲ್​ ಕಾಪ್​ ಎಂಬುವರು ತಮ್ಮ ಬೆರಳ ಮೇಲೆ ಕೂತ ಸೊಳ್ಳೆ ಮತ್ತು ಪ್ರಯಾಣದ ಟಿಕೆಟ್​ ಫೋಟೋ ಟ್ವೀಟರ್​ನಲ್ಲಿ ಹಂಚಿಕೊಂಡಿದ್ದು “ಬಿಎಂಟಿಸಿ ಎಸಿ ಬಸ್​​ನಲ್ಲಿ ಸೊಳ್ಳೆಗಳ ಕಾಟ. ಕಾಂಗ್ರೆಸ್​ ಸರ್ಕಾರ ಬಿಎಂಟಿಸಿ ಎಸಿ ಬಸ್​ಗಳಲ್ಲಿ ಸೊಳ್ಳೆಗಳಿಗೆ ಉಚಿತ ಪ್ರಯಾಣ ಎಂದು ಘೋಷಿಸಿದೆಯಾ?” ಎಂದು ಪ್ರಶ್ನಿಸಿದ್ದಾರೆ​.

ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಸೊಳ್ಳೆಗಳಿಗೆ ಸಾಮಾನ್ಯ ಬಸ್​ಗಳಲ್ಲಿ ಜಾಗವಿಲ್ಲಿದೆ ಎಸಿ ಬಸ್​​ನಲ್ಲಿ ಪ್ರಯಾಣ ಮಾಡುತ್ತಿವೆ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿ ಕುಹಕವಾಡಿದ್ದಾರೆ.

ಇದನ್ನೂ ಓದಿ: ಡೆಂಗ್ಯೂ: ಈ ಸರಳ ಅಡುಗೆ ಪದಾರ್ಥವು ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸುತ್ತದೆ

ಮೊತ್ತಬ್ಬರು ಸಾಮಾನ್ಯ ಬಸ್​ನಲ್ಲಿ ಸೀಟ್​ಗಾಗಿ ಜನರು ಪರದಾಡುತ್ತಿದ್ದರೇ ನೀವು ಸೊಳ್ಳೆಗಳಿಂದ ಮುಕ್ತ ಸವಾರಿಯನ್ನು ಬಯಸುತ್ತೀದ್ದೀರಿ ಎಂದು ಶ್ರೀಕಾಂತ ಗೌಡ ಎಂಬ ಟ್ವಿಟರ್​ ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ.

ಇನ್ನು ಬಿಎಂಟಿಸಿ ಕಂಪ್ಲೇಂಟ್ ರಿಸಿವ್ಡ್ ಅತೀ ಶೀಘ್ರದಲ್ಲಿ ಪರಿಹಾರ ಕೊಡುತ್ತೇವೆ ಅಂತ ಪ್ರತಿಕ್ರಿಯಿಸಿದೆ. ​

Published On - 11:31 am, Wed, 19 July 23